Karnataka Times
Trending Stories, Viral News, Gossips & Everything in Kannada

Tamannaah Bhatia: ಕಡೆಗೂ ವಿಜಯ ವರ್ಮ ಅವರ ಜೊತೆಗಿನ ಸಂಬಂಧದ ಬಗ್ಗೆ ಬಾಯಿ ಬಿಟ್ಟ ತಮನ್ನಾ ಭಾಟಿಯಾ ಹೇಳಿದ್ದೇನು ಗೊತ್ತೇ?

Advertisement

ತಮನ್ನಾ ಭಾಟಿಯಾ ಹಾಗೂ ವಿಜಯ ವರ್ಮ ಅವರ ನಡುವೆ ಈಗಾಗಲೇ ಸಾಕಷ್ಟು ಗಾಸಿಪ್ ಆಗಿವೆ. ಸದ್ಯ ತಮನ್ನಾ ಭಾಟಿಯಾ ಅವರ ವೈಯಕ್ತಿಕ ಜೀವನದ ಕುರಿತು ಹೆಚ್ಚು ಸುದ್ದಿ ಹರಿದಾಡುತ್ತಿದೆ. ತೆಲುಗು ಚಿತ್ರರಂಗದಿಂದ ಕರಿಯರ್ ಆರಂಭಿಸಿದ ತಮನ್ನಾ ಇದೀಗ ಬಾಲಿವುಡ್ ನಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ತಮನ್ನಾ ಭಾಟಿಯಾ ಅವರ ಲವ್ ಲೈಫ್ ಕುರಿತು ಹೆಚ್ಚು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಯೂ ಹಬ್ಬಿದೆ.

ತಮನ್ನಾ ಭಾಟಿಯಾ ಹಾಗೂ ವಿಜಯ ವರ್ಮ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿಯೂ ಕೂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಪೋಸ್ಟ್ ಗಳಿಗೆ ಲೈಕ್ ಮಾಡಿಕೊಳ್ಳುವುದು ಕೂಡ ನೆಟ್ಟಿಗರ ಗಮನಕ್ಕೆ ಬಂದಿದೆ. ವಿಜಯ ವರ್ಮ ಹಾಗೂ ತಮನ್ನಾ ಭಾಟಿಯಾ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಷಯ ಕೇಳಿದರೂ ಕೇಳದಂತೆಯೇ ಇದ್ದ ತಮನ್ನಾ ಭಾಟಿಯಾ ಇದೀಗ ಈ ವಿಷಯ ಕುರಿತು ಮಾತನಾಡಿದ್ದಾರೆ.

Bizasia

Advertisement

ವಿಜಯವರ್ಮ ಜೊತೆಗಿನ ಅಫೇರ್ ಸುದ್ದಿಯ ಬಗ್ಗೆ ತಮನ್ನಾ ಭಾಟಿಯಾ ಮಾತನಾಡಿದ್ದಾರೆ. ನಾವುಬ್ಬರೂ ಒಂದು ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದೇವೆ. ಅಷ್ತರಲ್ಲಿಯೇ ವದಂತಿಗಳು ಹಬ್ಬುತ್ತಲೇ ಇವೆ. ಅದೆಲ್ಲವೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಅದರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ ಎಂದು ನಟಿ ತಮನ್ನಾ ಭಾಟಿಯಾ ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.

 

Ndtv Food

“ಜನ ಪ್ರತಿ ವಾರ ಮದುವೆ ಮಾಡಿಸುತ್ತಾರೆ”!
ಇನ್ನು ತಮ್ಮ ಮದುವೆಯ ಕುರಿತು ಮಾತನಾಡಿದ ತಮನ್ನಾ, ನನಗೆ ಅನಿಸುತ್ತೆ, ಒಬ್ಬ ನಟನಿಗಿಂತ ಹೆಚ್ಚು ನಟಿಯ ಬಗ್ಗೆ ವದಂತಿಗಳು ಹರಡುತ್ತವೆ. ಹೀಗೆ ಯಾಕೆ ಆಗುತ್ತೋ ಗೊತ್ತಿಲ್ಲ ನನಗೆ ಈಗಾಗಲೇ ಹಲವಾರು ಬಾರಿ ಮದುವೆ ಮಾಡಿಸಿಬಿಟ್ಟಿದ್ದಾರೆ. ಪ್ರತಿ ಶುಕ್ರವಾರ ನಿನಗಿನ್ನೂ ಮದುವೆ ಆಗಿಲ್ಲವೇ ಅಂತ ಕೇಳಿಯೇ ಕೇಳುತ್ತಾರೆ. ವೈದ್ಯರಿಂದ ಹಿಡಿದು ಉದ್ಯಮಿಯವರೆಗೆ ನನಗೆ ಈಗಾಗಲೇ ಹಲವು ಬಾರಿ ಮದುವೆ ಮಾಡಿಸಿಬಿಟ್ಟಿದ್ದಾರೆ. ನನಗೆ ನಿಜವಾಗಿಯೂ ನಾನು ಮದುವೆಯಾದಾಗ ಏನಾಗುತ್ತೆ ಎಂದು ಗೊತ್ತಿಲ್ಲ ಜನರು ಆಗಲೂ ಹೀಗೆ ಉತ್ಸುಕರಾಗಿರುತ್ತಾರೋ ಅಥವಾ ಇದು ಕೇವಲ ಗಾಸಿಪ್ ಎಂದು ಭಾವಿಸುತ್ತಾರೋ ಗೊತ್ತಿಲ್ಲ ಎಂದು ತಮನ್ನಾ ಹೇಳಿದ್ದಾರೆ

Advertisement

Leave A Reply

Your email address will not be published.