Ambani’s Chef Salary: ಕೊನೆಗೂ ಬಹಿರಂಗವಾಯ್ತು ಮುಕೇಶ್ ಅಂಬಾನಿ ಮನೆಯ ಅಡುಗೆಯವರ ಸಂಬಳ

Advertisement
ಕೆಲವರನ್ನ ಅದೃಷ್ಟವಂತರು ಅನ್ನುತ್ತೇವೆ. ಇನ್ನು ಕೆಲವರನ್ನ ಹೆಚ್ಚು ಅದೃಷ್ಟ ಹೊಂದಿರುವವರು ಅನ್ನುತ್ತೇವೆ ಆದರೆ ಅಂಬಾನಿ ಕುಟುಂಬದಲ್ಲಿ ಕೆಲಸ ಮಾಡುವವರನ್ನು ಮಾತ್ರ ಏನು ಹೇಳಬೇಕು ಗೊತ್ತಿಲ್ಲ, ಯಾಕೆಂದರೆ ಅಂಬಾನಿ ಕುಟುಂಬಕ್ಕಾಗಿ ದುಡಿಯುವುದು ಹಲವರಿಗೆ ಸಂತೋಷದ ವಿಚಾರ. ಅಂಬಾನಿ ಕುಟುಂಬದಲ್ಲಿ ಯಾವುದೇ ಕೆಲಸ ಸಿಕ್ಕರೂ ಸಾಕು ಎಂದುಕೊಳ್ಳುವ ಹಲವರು ಇದ್ದಾರೆ ಯಾಕೆಂದರೆ ಈ ಮನೆಗೆ ಒಮ್ಮೆ ಹೋಗಿ ಸೇರಿಕೊಂಡರೆ ಮತ್ತೆ ಲೈಫ್ ಸೆಟಲ್ಡ್ ಎಂದೇ ಅರ್ಥ.
ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಇಬ್ಬರು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಮಾತ್ರವಲ್ಲ ತಮ್ಮ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗೆ ಬಗೆಯು ವಿಶೇಷ ಕಾಳಜಿ ಮಾಡುತ್ತಾರೆ. ಕೇವಲ ಅವರ ಕಂಪನಿಯಲ್ಲಿ ದುಡಿಯುವವರು ಮಾತ್ರವಲ್ಲದೆ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಕೂಡ ಅತ್ಯುತ್ತಮ ಸಂಬಳ ನೀಡಲಾಗುತ್ತದೆ. ಅಂಬಾನಿ ಮನೆಯಲ್ಲಿ ಕೆಲಸ ಸಿಕ್ಕಿದರೆ ಬದುಕು ಹಸನಾಗುತ್ತದೆ ಎಂದು ಹಲವರ ಅಭಿಪ್ರಾಯ.
ಇತ್ತೀಚಿಗೆ ಅಂಬಾನಿ ಕುಟುಂಬ ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅತಿಹೆಚ್ಚಿನ ಸಂಬಳ ಕೊಡುತ್ತಿದ್ದಾರೆ ಎಂದು ವರದಿ ಆಗುತ್ತದೆ. ಅಂಬಾನಿ ಕುಟುಂಬದಲ್ಲಿ ಕೆಲಸ ಮಾಡುವ ಡ್ರೈವರ್ ನಿಂದ ಹಿಡಿದು ನೀತಾ ಅಂಬಾನಿ ಅವರ ಮೇಕಪ್ ಮಾಡುವವನವರೆಗೂ ಲಕ್ಷಗಟ್ಟಲೆ ಸಂಬಳ ನೀಡಿದ್ದಾರೆ ಎಂದು ವರದಿ ಆಗಿದೆ. ಆದರೆ ಈ ಮನೆಯಲ್ಲಿ ಅಡುಗೆ ಮಾಡುವ ಬಾಣಸಿಗನ ಸಂಬಳ ಎಷ್ಟು ಗೊತ್ತಾ ಕೇಳಿದರೆ ನೀವು ಅಡುಗೆ ಮಾಡುವ ಕೆಲಸವೇ ಬೆಸ್ಟ್ ಅಂತೀರಿ. ಅಷ್ಟಕ್ಕೂ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವ ಅಡುಗೆ ಭಟ್ಟರ ಸಂಬಳ ಎಷ್ಟು ಗೊತ್ತಾ!?
Advertisement
ಒಂದು ಮಾಹಿತಿಯ ಪ್ರಕಾರ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಕೆಲಸ ಮಾಡುವ ಅಡುಗೆ ಭಟ್ಟರಿಗೆ ತಿಂಗಳಿಗೆ ಎರಡು ಲಕ್ಷ ಸಂಬಳ ನೀಡಲಾಗುತ್ತದೆಯಂತೆ. ಅಂಬಾನಿ ಕುಟುಂಬದವರಿಗಾಗಿ ವಿಶೇಷ ಆಹಾರವನ್ನು ತಯಾರಿಸಲು ಇಷ್ಟು ಹಣ ಕೊಡುತ್ತಾರೆ ಎಂದು ನೀವು ಭಾವಿಸಬಹುದು ಆದರೆ ಖಂಡಿತ ಹಾಗಲ್ಲ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಸಸ್ಯಹಾರ ಮತ್ತು ಸರಳವಾದ ಆಹಾರವನ್ನೇ ತಿನ್ನುತ್ತಾರೆ. ಹಾಗಾಗಿ ಅಲ್ಲಿ ದಿನವೂ ಮಾಡುವ ಸರಳ ಅಡುಗೆ ಮಾಡುವ ಬಾಣಸಿಗನಿಗೆ ಇಷ್ಟು ಸಂಬಳ ನೀಡಲಾಗುತ್ತದೆ. ಅಂಬಾನಿ ಅವರ ಬಂಗಲೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗೂ ಕೂಡ ಅತ್ಯುತ್ತಮ ಸಂಬಳ ನೀಡಲಾಗುತ್ತದೆ ಎಂದು ವರದಿ ಆಗಿದೆ.
ಇದಕ್ಕಿಂತ ಇನ್ನೊಂದು ಆಶ್ಚರ್ಯಕರವಾದ ಸಂಗತಿ ಅಂದರೆ ಮುಖೇಶ್ ಅಂಬಾನಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡುವುದು ಮಾತ್ರವಲ್ಲ ಅವರಿಗೆ ವಿಮೆ ಕೂಡ ನೀಡುತ್ತಾರೆ. ಇನ್ನು ವಿಶೇಷವಾದ ಸಂಗತಿ ಎಂದರೆ, ಮುಖೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಗಳ ಮಕ್ಕಳು ಅಮೆರಿಕಾದಲ್ಲಿ ಓದುತ್ತಿದ್ದಾರಂತೆ.
ಅಂದಹಾಗೆ ಅಂಬಾನಿ ಕುಟುಂಬದಲ್ಲಿ ಒಬ್ಬ ಬಾಣಸಿಗನಾಗಿರುವುದಕ್ಕೂ ಅಥವಾ ಚಾಲಕನಾಗಿರುವುದು ವಿಶೇಷ ತರಬೇತಿ ನೀಡಲಾಗುತ್ತದೆ ಜೊತೆಗೆ ಅವರಿಗೆ ಅನೇಕ ಪರೀಕ್ಷೆಗಳನ್ನು ನಡೆಸಿ ನಂತರ ಆಯ್ಕೆ ಮಾಡಲಾಗುತ್ತದೆ. ಮುಖೇಶ್ ಅಂಬಾನಿ ಅವರ ನಿರೀಕ್ಷೆಯನ್ನು ತಲುಪಿದರೆ ನಂತರ ಅಲ್ಲಿ ಕೆಲಸ ಮಾಡಲು ಆಯ್ಕೆಯಾದವರ ಜೀವನ ಮಾತ್ರ ಜಿಂಗಾಲಾಲ. ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡಿ ತಿಂಗಳಿಗೆ ಲಕ್ಷ ಸಂಪಾದನೆ ಮಾಡಿದರು ಮಕ್ಕಳನ್ನು ಫಾರಿನ್ ನಲ್ಲಿ ಓದಿಸಲು ಸಾಧ್ಯವಿಲ್ಲ ಆದರೆ ಅಂಬಾನಿ ಮನೆಯಲ್ಲಿ ಕೆಲಸಕ್ಕೆ ಇರುವ ಸಾಮಾನ್ಯ ನೌಕರರ ಮಕ್ಕಳು ಕೂಡ ಅಮೇರಿಕಾದಂತಹ ಸ್ಥಳಗಳಲ್ಲಿ ಓದುತ್ತಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ.
Advertisement