ಈಗಂತೂ ರ‍್ಯಾಪ್ ಯುಗ ಅಂತಲೇ ಹೇಳಬಹುದು. ಒಂದು ಕಾಲದಲ್ಲಿ ಸಿನೆಮಾ ಹಾಡುಗಳಿಗೆ ಇರುವಷ್ಟೇ ಕ್ರೇಜ್ ಈಗಿನ ರ‍್ಯಾಪ್ ಹಾಡಿಗೂ (Rap Song) ಇದೆ ಎನ್ನಬಹುದು. ಈ ಮೂಲಕ ಬಿಗ್ಬಾಸ್ (Bigboss) ಸ್ಫರ್ಧಿ ರಾಕೇಶ್ ಅಡಿಗ (Rakesh Adiga) , ಚಂದನ್ ಶೆಟ್ಟಿ (Chandan Shetty) , ಅಲೋಕ್ (Allok) ಅವರು ತಮ್ಮ ರ್ಯಾಪ್ಗಳಿಂದ ಕನ್ನಡ ಸಾಂಗ್ಗಳು ವಿದೇಶದಲ್ಲೂ ಸದ್ದು ಮಾಡುವಂತೆ ಮಾಡಿದ್ದಾರೆ. ಆದರೀಗ ರ‍್ಯಾಪರ್ ಗಳ ಶೀತಲ ಸಮರ ತಾರಕಕ್ಕೆ ತಲುಪಿದೆ ಎಂದರೂ ತಪ್ಪಾಗಲಾರದು.
ರ‍್ಯಾಪ್ ಕದನ:
ಒಂದು ಕಾಲದಲ್ಲಿ ರ‍್ಯಾಪರ್ ಚೆಂದನ್ ಶೆಟ್ಟಿ (Rapper Chandan Shetty) ಅವರು ಗೊಂಬೆ ಗೊಂಬೆ, ಪಕ್ಕಾ ಚಾಕಲೇಟ್ ಗರ್ಲ್ , ಮೂರೇ ಮೂರೆ ಪೆಗ್ಗಿಗೆ ಇನ್ನು ಅನೇಕ ಹಾಡನ್ನು ಫೇಮಸ್ ಮಾಡಿದ್ದು ಇವರು ಕೂಡ ಫೇಮಸ್ ಆಗಿದ್ದರು , ಆದರೆ ಬಳಿಕ ಅಲೋಕ್ ಮತ್ತು ಚೆಂದನ್ ನಡುವೆ ಶೀತಲ ಸಮರ ಆರಂಭವಾಗಿತ್ತು , ಆದರೆ ಸ್ವಲ್ಪ ಸಮಯದ ನಂತರ ಚೆಂದನ್ ಶೆಟ್ಟಿ ಅವರಿಗೆ ಟಕ್ಕರ್ ಕೊಟ್ಟ ಅಲೋಕ್ ಅವರು ರಾಹುಲ್ ಡಿಟೋ ಅವರೊಂದಿಗೆ ಸೇರಿಕೊಂಡು ರ‍್ಯಾಪ್ ಹಾಡು ಮಾಡಿದ್ದರು ಬಳಿಕ ಈ ಕದನ ಅಲ್ಲಿಗೆ ನಿಂತಿತ್ತು. ಆದರೀಗ ಆಲ್ ಓಕೆ ಅಲೋಕ್ ವಿರುದ್ಧ ರಾಹುಲ್ ಡಿಟೋ ತಿರುಗಿ ಬಿದ್ದಿದ್ದಾರೆ.
ಈ ಮೂಲಕ ರಾಹುಲ್ ಒಂದು ರ‍್ಯಾಪ್ ಹಾಡನ್ನು ಬಿಡುಗಡೆ ಮಾಡಿದ್ದು ಆ ಹಾಡಿನಲ್ಲಿ ಅಲೋಕ್ ವಿರುದ್ಧ ಕಿಡಿಕಾರಿದ್ದಾರೆ. 50 % ಕಮಿಷನ್ ಪಡೆದು ನರಿ ಬುದ್ಧಿ ತೋರಿಸಿದ್ಯಾ , ನಿಂಗೆ ಆಗದವರಿಗೆ ಎತ್ ಕಟ್ಟಿ ನೀನ್ ಸೇಫ್ ಆಗಿದ್ಯಾ ನಂದೆ ಫ್ಲ್ಯಾಟ್ ಫಾರ್ಮಲ್ಲಿ ನಾನು ನಿಂತಿದ್ದೀನಿ, ಯಾವೊನಾ ಭಿಕ್ಷೆ ನಂಗೆ ಬೇಡ, ಪಕ್ಕದ್ದಲ್ಲಿ ಇದ್ದು ಫ್ರೆಂಡಂತ ಹೇಳಿ ಬೆನ್ನಿಗೆ ಚೂರಿ ಹಾಕಿದ್ದೀಯಾ ಎಂದು ಆ ಲೀರಿಕ್ಸ್ ನಲ್ಲಿ ಅಲೋಕ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಅಲೋಕ್ ಅವರನ್ನು ಸಹ ಕೇಳಲಾಗಿದ್ದು ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಏನಂದ್ರು ಅಲೋಕ್?
ಇತ್ತೀಚೆಗೆ ಚೌಕಾ ಬಾರ ಸಿನೆಮಾ ವೀಕ್ಷಿಸಿದ ಬಳಿಕ ಅಲೋಕ್ ಅವರಿಗೆ ಮಾಧ್ಯಮದವರು ಸಿನೆಮಾ ಬಗ್ಗೆ ಕೇಳಿದ್ದಾರೆ ಅದಕ್ಕೆ ಉತ್ತರಿಸಿದ್ದ ಅವರು ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮಿತಾ, ವಿಕ್ರಾಂತ್ ಸೂರ್ಯ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದರು. ಬೇರೆ ನಟರು ಕೂಡ ಒಳ್ಳೆ ಅಭಿನಯಿಸಿದ್ದಾರೆ ಎಂದರು. ಆಗ ಓರ್ವ ಯೂಟ್ಯೂಬರ್ ನಿಮ್ಮ ಹಾಗೂ ರಾಹುಲ್ ಅವರ ಕದನಕ್ಕೆ ನೀವು ಕೌಂಟರ್ ನೀಡೊಲ್ವಾ ಅದು ನಿಮಗೆ ಪರೋಕ್ಷವಾಗಿ ಹೇಳಿದ ಹಾಡಅಂತಾರೆ, ಹೌದಾ ಕೇಳಿದ್ದಕ್ಕೆ ಅದೆಲ್ಲ ನಂಗೆ ಗೊತ್ತಿಲ್ಲ ನೊ ರಿಯ್ಯಾಕ್ಷನ್ ಯಾವ ಆರೋಪ ಯಾವ ಹಾಡು ನಂಗೆ ಗೊತ್ತಿಲ್ಲ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ. ಈ ಮೂಲಕ ಈ ಹಾಡು ಸದ್ಯ ಫೇಮಸ್ ಆಗಿದ್ದು ಅಲೋಕ್ VS ರಾಹುಲ್ ನಡುವೆ ಕದನ ಮುಂದೆ ಏನಾಗಬಹುದೆಂಬ ಕುತೂಹಲ ಕೂಡ ಹೆಚ್ಚಾಗಿ ಇದೆ.