Interview Tips: ಸಂದರ್ಶನಕ್ಕೆ ಸೂಕ್ತ ರೀತಿಯಲ್ಲಿ ತಯಾರಿ ಹೇಗೆ? ಇಲ್ಲಿದೆ ಮಾಹಿತಿ

Advertisement
ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸುವುದು ಬಹಳ ಮುಖ್ಯ, ಯಾವುದೇ ಸಂದರ್ಶನ ಇರಲಿ, ಉದ್ಯೋಗ, ಶಿಕ್ಷಣ ಯಾವುದೇ ಸಂದರ್ಭದಲ್ಲಿ ನಾವು ಸಂದರ್ಶಕರೊಂದಿಗೆ ಹೇಗೆ ಸಂವಹನ ನಡೆಸಬೇಕು, ನಮ್ಮ ದೇಹ ಭಾಷೆ (Body Language) ಹೇಗಿರಬೇಕು ಅನ್ನೋದು ಕೂಡ ಮುಖ್ಯ, ಈ ಕುರಿತಾಗಿ ಪ್ರೀಡಮ್ ಆ್ಯಪ್ ಸಂಸ್ಥಾಪಕ ಸುಧೀರ್ ಮಾಹಿತಿ ನೀಡಿದ್ದಾರೆ.
ಸಂದರ್ಶನ ಎದುರಿಸುವ ಕ್ರಮ ಹೇಗೆ:
ಸಂಧರ್ಶನದಲ್ಲಿ ಅಭ್ಯರ್ಥಿಯ ಪ್ರತಿಯೊಂದು ನಡೆ ನುಡಿ, ಹಾವಭಾವ, ಮಾತಿನ ಶೈಲಿ, ಅವನು ಹಾಕಿಕೊಂಡ ಉಡುಪು ಎಲ್ಲವೂ ಬಹಳ ಮುಖ್ಯ. ಆತನ ಆತ್ಮವಿಶ್ವಾಸದಿಂದ ಹಿಡಿದು ಆತನ ಪ್ರತಿಕ್ರಿಯೆ ಹೇಗಿದೆ ಅನ್ನೋದು ಬಹಳ ಮುಖ್ಯ, ಸಂದರ್ಶನದ ದಿನದಂದು ವಹಿಸಬೇಕಾದ ಎಚ್ಚರಿಕೆ, ಸಂದರ್ಶನದ ಸಮಯದಲ್ಲಿನ ನಡವಳಿಕೆ ಎಲ್ಲವನ್ನೂ ಸಂದರ್ಶನಕಾರರು ಗಮನಿಸುತ್ತಾರೆ.
ಸಂದರ್ಶನ ಕೌಶಲ್ಯ (Interview Skills):
Advertisement
- ಸಮನ್ವಯ (Integrity)ಮಾಹಿತಿ ಇರಬೇಕು
- ಯಾವುದೇ ಉದ್ಯೋಗವನ್ನು ಪಡೆಯಲು ಶೈಕ್ಷಣಿಕ ಅರ್ಹತೆ, ಕೌಶಲ್ಯ ಮಾತ್ರವಲ್ಲ. ನಿಮ್ಮ ಪೂರ್ಣ ಕಾನ್ಫಿಡೆನ್ಸ್ ಬಹಳ ಮುಖ್ಯ, ಆದ್ದರಿಂದ, ನೀವು ಸಂದರ್ಶನಕ್ಕೆ ಹೋದಾಗಲೆಲ್ಲಾ ಸಂಪೂರ್ಣ ಆತ್ಮವಿಶ್ವಾಸದಿಂದ ಹೋಗಿ.
- ಸಂದರ್ಶನದ ನಿಯಮ ಪಾಲಿಸುವುದು (Domain Expertise)
- ಸಂದರ್ಶಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಿ, ಸಾಮಾನ್ಯವಾಗಿ ನಿಮ್ಮ ಬಗ್ಗೆ ಹೇಳಿ ಎಂಬ ಸಾಮಾನ್ಯ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಹೇಳಿ, ಸಮಗ್ರತೆಯನ್ನು ಕಪಾಡಿಕೊಳ್ಳಿ.
- ನಿಮ್ಮ ರೆಸ್ಯೂಮ್ ನ್ನು ತಾವೇ ತಯಾರಿಸಿಕೊಳ್ಳಿ
- ಕೆಲವೊಂದಿಷ್ಟು ಜನ ಬೇರೆ ವ್ಯಕ್ತಿ ಗಳ,ಸ್ನೇಹಿತರ ರೆಸ್ಯೂಮ್ ಗೆ ತಕ್ಕನಾಗಿ ಸಿದ್ದಪಡಿಸಿಕೊಳ್ಳುತ್ತಾರೆ,ಈ ರೀತಿ ಮಾಡದೇ ಸರಳವಾಗಿ, ಪ್ರಾಮಾಣಿತ ರೀತಿಯಲ್ಲಿ ರೆಸ್ಯೂಮ್ ಹೊಂದಿಸಿ.
ಸಂವಹನ ಕೌಶಲ್ಯ (Communication Skills):
ಸಂದರ್ಶನ ದಲ್ಲಿ ಸಂವಹನ ಕೌಶಲ್ಯ ಬಹಳ ಮುಖ್ಯ, ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ ಅದರ ಜೊತೆ ಸಂವಹನ ಕೌಶಲ್ಯ ಕೂಡ ಬಹಳ ಮುಖ್ಯ ವಾಗುತ್ತದೆ.
ಅಂತರಿಕ ಸಂವಹನ ಕೌಶಲ್ಯ (Inter Personal Skills):
- ಸಂದರ್ಶಕರಲ್ಲಿ ನಿಮ್ಮ ಬಗ್ಗೆ ಸಕರಾತ್ಮಕ ಭಾವನೆ ಮತ್ತು ನಂಬಿಕೆ ಮೂಡಿಸುವುದು ಅಗತ್ಯ. ಅದಕ್ಕಾಗಿ ಆತ್ಮ ವಿಶ್ವಾಸ ಮೂಡಿಸುವಂತೆ ವಿಶ್ವಾಸಯುವಾಗಿ ಮಾತನಾಡುವುದು ಮುಖ್ಯ,ಬೇರೆ ಕೆಲಸಗಾರರೊಂದಿಗೆ ಹೇಗೆ ವರ್ತಿಸುತ್ತೀರಿ ಅನ್ನೋದು ಬಹಳ ಮುಖ್ಯವಾಗುತ್ತದೆ
- ಸಂಭಾವ್ಯ ಸಾಮರ್ಥ್ಯ(Potential Ability)
- ಒಬ್ಬ ವ್ಯಕ್ತಿಗೆ ಯಾವುದೇ ಕೆಲಸ ಕೊಟ್ಟಾಗ ಅದನ್ನು ನಿಭಾಯಿಸುವಂತಹ ಸಾಮರ್ಥ್ಯ ಇರಬೇಕು, ನಿಗಧಿತ ಯೋಜನೆಯೊಂದಿಗೆ ಸಮಗ್ರ ವಾಗಿ ಅದಕ್ಕೆ ಉತ್ತರ ಕಂಡುಕೊಳ್ಳಬೇಕು
- ಸಮಯ ಪಾಲನೆ
- ಅರಿವಿನ ಜೊತೆಗೆ ವ್ಯಕ್ತಿತ್ವದ ವಿವಿಧ ಆಯಾಮಗಳ ಅಳತೆಗೂ ಪ್ರಶ್ನೆಗಳಿರುತ್ತವೆ. ಸಂದರ್ಶನಕ್ಕೆ ನಿಗದಿತ ಸಮಯದಲ್ಲಿ ಹಾಜರಾಗಿ. ಉದ್ಯೋಗದಾತರೊಡನೆ ಮಾತನಾಡುವಾಗ ದೃಷ್ಟಿ ಸಂಧಿಸುವ ಕೌಶಲ್ಯ ಇರಬೇಕು
Advertisement