Karnataka Times
Trending Stories, Viral News, Gossips & Everything in Kannada

CM of Karnataka: ಗ್ಯಾರಂಟಿ ಯೋಜನೆ ಬಗ್ಗೆ ಬೆಳ್ಳಂಬೆಳಿಗ್ಗೆ ಟ್ವಿಸ್ಟ್, ಮೀಟಿಂಗ್ ನಲ್ಲಿ ಈ ತೀರ್ಮಾನ ತಗೆದುಕೊಂಡ ಸಿದ್ದರಾಮಯ್ಯ

advertisement

Guarantee Schemes: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಗ್ಯಾರಂಟಿ ಯೋಜನೆಗಳು ಬಹಳಷ್ಟು ಪ್ರಸಿದ್ದಿಯಲ್ಲಿದೆ. ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಪ್ರಾಣಳಿಕೆ‌ ಇಟ್ಟಂತಹ ಗ್ಯಾರಂಟಿ ಯೋಜನೆಗಳು ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಯುವನಿಧಿ ಇತ್ಯಾದಿ ಯೋಜನೆಗಳಿಂದಲೇ ಅಧಿಕಾರಕ್ಕೆ ಬಂದಿದೆ. ಈಗಾಗಲೇ ಈ ಯೋಜನೆಯ ಸದುಪಯೋಗ ಜನತೆ ಪಡೆಯುತ್ತಿದೆ. ಕಳೆದ ಒಂದು ವರ್ಷದಿಂದ ಈ ಯೋಜನೆಗಳು ಜಾರಿಯಲ್ಲಿದ್ದು ಇದೀಗ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗಲಿದೆ ಎನ್ನುವ ವಿಚಾರ ಚರ್ಚೆಯಾಗ್ತಾ ಇದ್ದು ಆದರ ಜೊತೆಗೆ ಈಗ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟವಾಗುತ್ತಿದೆ ಎಂಬ ನಿಟ್ಟಿನಲ್ಲಿ‌ ಇದರ ಬಗ್ಗೆ ಮೌಲ್ಯ ಮಾಪನಕ್ಕೆ ಸರಕಾರ ಮುಂದಾಗಿದೆ.ಹಾಗಾಗಿ ಸಮಿತಿ ರಚನೆಗೆ ಮುಂದಾಗಿದೆ.

ಇದೀಗ ಸರ್ಕಾರ ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಮೌಲ್ಯಮಾಪನಕ್ಕೆ ಸಿದ್ಧತೆ ನಡೆಸಿದ್ದು ಎಲ್ಲ ಗ್ಯಾರಂಟಿ ಯೋಜನೆಗಳ ಕುರಿತು ಮೌಲ್ಯಮಾಪನಕ್ಕೆ ಮುಂದಾಗಿದೆ. ಹೌದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಚರ್ಚೆ ಮಾಡಿ, ಮೌಲ್ಯಮಾಪನ ವರದಿ ಸಲ್ಲಿಸುವಂತೆ ಸರಕಾರ ಪ್ರಾಧಿಕಾರಕ್ಕೆ ಸೂಚಿಸಿದೆ.ಗ್ಯಾರಂಟಿಗಳ ಮೌಲ್ಯಮಾಪನ ಮಾಡಲು‌ ರಾಜ್ಯ ಸರಕಾರ ತಿರ್ಮಾನ ಮಾಡಿದೆ. ಗ್ಯಾರಂಟಿ ಯೋಜನೆಗಳು ಈಗಾಗಲೇ ಕೆಲವರಿಗೆ ತಲುಪಿಲ್ಲ.

advertisement

Image Source: Rediff

ಶಕ್ತಿ ಯೋಜನೆಯಿಂದ ಹಿರಿಯ ನಾಗರಿಕರು, ಶಾಲಾ ಮಕ್ಕಳಿಗೆ ಪ್ರಯಾಣ ಕಷ್ಟವಾಗಿದೆ.ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊರತೆ ಜೊತೆಗೆ ಕೆಲವರಿಗೆ ಹಣ ಜಮೆ ಯಾಗಲು ತಾಂತ್ರಿಕ ಸಮಸ್ಯೆ, ಇನ್ನೂ ಹಲವರಿಗೆ ಗೃಹ ಲಕ್ಷ್ಮೀ ಯೋಜನೆ ಹಣವೂ ಕೈ ಸೇರಿಲ್ಲ. ಕೆಲವರು ಅನರ್ಹರು ಕೂಡ‌ ಪಡಿತರ ಪಡೆಯುತ್ತಿದ್ದಾರೆ. ಕುಟುಂಬದ ಹಲವರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಕುರಿತು ಮೌಲ್ಯಮಾಪನ ಮಾಡುವ ದೃಷ್ಟಿಯಿಂದ ಸರ್ಕಾರ ಈ ಸಮಿತಿ ಮಾಡಲು ಸೂಚನೆ ನೀಡಿದೆ ಈ ಸಮಿತಿ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಸೇವೆ ಒದಗಿಸುವ ವಿಚಾರವಾಗಿ ಶಿಫಾರಸು ಮಾಡಲಿದೆ.

ಸಿಎಂ ಸ್ಪಷ್ಟನೆ
ರಾಜ್ಯದ ಈಗಿರುವ ಖಾತರಿ ಯೋಜನೆಗಳು ಯಾವುದೇ ಅಡೆ ತಡೆಗಳಿಲ್ಲದೆ ಮುಂದುವರಿಯುತ್ತದೆ. ಗ್ಯಾರಂಟಿ ಯೋಜನೆಗಳು ಬಡ ಜನರಿಗಾಗಿ ಜಾರಿಗೆ ಮಾಡಿದ್ದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿ ದ್ದಾರೆ.ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಇಂದು‌ಕೂಡ ಮಾಡಿದೆ. ದೇಶದಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಶೇ.3ರಷ್ಟು ಹೆಚ್ಚಾಗಿದೆ. ಮುಂದೆಯಾದರೂ ನಾವು ಜಯ ಸಾಧಿಸುತ್ತೇವೆ, ಕೇಂದ್ರದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರದಲ್ಲಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 2014 ಮತ್ತು 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.ಹಾಗಾಗಿ ಗ್ಯಾರಂಟಿ ಯೋಜನೆಗಳು ಮುಂದೆಯು ಸರಾಗವಾಗಿ ಮುಂದುವರಿಯುತ್ತದೆ ಎಂದಿದ್ದಾರೆ.

advertisement

Leave A Reply

Your email address will not be published.