ಪ್ರತಿ ತಿಂಗಳು ವಿದ್ಯುತ್ ಬಿಲ್ ಅನ್ನು ಭರಿಸುವಾಗ ದೇವರೇ ಈ ತಿಂಗಳು ಕರೆಂಟ್ ಬಿಲ್ (Electricity Bill) ಕಡಿಮೆ ಬಂದಿದ್ರೆ ಸಾಕು ಅಂತ ಪ್ರತಿಯೊಬ್ಬರೂ ಭಾವಿಸುತ್ತಾರೆ. ಆದರೆ ಪ್ರತಿ ಸಮಯದಲ್ಲೂ ಕೂಡ ವಿದ್ಯುತ್ ಬಳಕೆ ಹೆಚ್ಚಾಗಿಯೇ ಇರುತ್ತದೆ ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸೆಕೆ ಜಾಸ್ತಿ ಇದ್ದಾಗ ಕರೆಂಟ್ ಬಳಕೆ ಹೆಚ್ಚಾಗಿರುತ್ತದೆ ಹಾಗೂ ಅದೇ ರೀತಿಯಲ್ಲಿ ವಿದ್ಯುತ್ ದರ ಕೂಡ ಏರಿಕೆ ಆಗುತ್ತಲೇ ಇರುತ್ತದೆ. ಹೀಗಾಗಿ ವಿದ್ಯುತ್ ಬಿಲ್ ಅನ್ನು ಕಟ್ಟುವಾಗ ಯಾವತ್ತು ಪರ್ಸನಲ್ ಇರುವಂತಹ ಹಣ ಹೆಚ್ಚಾಗಿಯೇ ಖರ್ಚಾಗುತ್ತೆ. ಈ ಲೇಖನದ ಮೂಲಕ ನೀವು ಯಾವ ರೀತಿಯಲ್ಲಿ ವಿದ್ಯುತ್ ಬಿಲ್ (Electricity Bill) ನ ಖರ್ಚನ್ನು ಕಡಿಮೆ ಮಾಡಬಹುದು ಅನ್ನೋದನ್ನ ಒಂದೊಂದಾಗಿ ತಿಳಿದುಕೊಳ್ಳಲಿದ್ದೀರಿ.
- ಯಾವುದೇ ಸಮಯದಲ್ಲಿ ನೀವು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಪ್ರತಿಯೊಂದು ಲೈಟ್ ಸ್ವಿಚ್ ಗಳನ್ನು ಆಫ್ ಮಾಡಿ ಹೋಗಿ. ಕರೆಂಟ್ ಇಲ್ಲದ ವೇಳೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಮನೆಯಲ್ಲಿ ವಾಪಸ್ ಕರೆಂಟ್ ಬಂದಾಗ ಸ್ವಿಚ್ ಆನ್ (Switch On) ಆಗಿದ್ರೆ ಅದು ಕರೆಂಟ್ ಬಿಲ್ (Electricity Bill) ನಲ್ಲಿ ಖರ್ಚಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.
- ಮಾರ್ಕೆಟ್ ನಲ್ಲಿ ಇರುವಂತಹ ಆಟೋಮೆಟಿಕ್ ಸ್ವಿಚ್ ಆಫ್ (Switch Off) ಡಿವೈಸ್ ಅನ್ನು ಮನೆಯಲ್ಲಿ ಅಳವಡಿಸಿಕೊಂಡರೆ ಅದರ ಮೂಲಕ ನೀವು ಸೆನ್ಸಾರ್ ಟೆಕ್ನಾಲಜಿಯ ಕಾರಣದಿಂದಾಗಿ ಎಲ್ಲಾ ಸ್ವೀಚ್ಗಳನ್ನು ಒಂದೇ ಬಾರಿಗೆ ಆಫ್ ಮಾಡುವಂತಹ ಅವಕಾಶ ಇದೆ.
- ವಿದ್ಯುತ್ ಬಳಕೆಯನ್ನು ಇನ್ನಷ್ಟು ಕಡಿಮೆ ಮಾಡುವುದಕ್ಕೆ ಮನೆಯಲ್ಲಿರುವಂತಹ ಫ್ಯಾನಿನ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ. ಈ ಧೂಳನ್ನು ಸ್ವಚ್ಛಗೊಳಿಸದೆ ಹೋದಲ್ಲಿ ಅದು ತಿರುಗೋದಕ್ಕೆ ಹೆಚ್ಚಿನ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ. ಹೀಗಾಗಿ ಈ ಉಪಾಯವನ್ನು ನೀವು ಬಳಸಿಕೊಳ್ಳಬಹುದಾಗಿದೆ.
- ಮನೆಯಲ್ಲಿ ಎಸಿ ಬಳಕೆ ಮಾಡುತ್ತಿದ್ದರೆ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿ ನಂತರ ಬಳಸುವುದು ಉತ್ತಮ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವಂತಹ ಇನ್ವರ್ಟರ್ ಎಸಿಯನ್ನು ಬಳಸುವ ಮೂಲಕ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.
- ಮನೆಯಲ್ಲಿ ಮೈಕ್ರೋವೇವ್ (Microwave) ಇದ್ರೆ ಅದರ ಬದಲಿಗೆ ಗ್ಯಾಸ್ ನಲ್ಲಿ ಆಹಾರ ಪದಾರ್ಥಗಳನ್ನ ಬಿಸಿ ಮಾಡುವುದು ಒಳ್ಳೆಯದು ಯಾಕೆಂದರೆ ವಿದ್ಯುತ್ ಬಳಕೆಯನ್ನು ಮೈಕ್ರೋವೇವ್ ಹೆಚ್ಚಾಗಿಯೇ ಬಳಸಿಕೊಳ್ಳುತ್ತದೆ. ಹೀಗಾಗಿ ಇವಿಷ್ಟು ಉಪಾಯಗಳನ್ನು ನೀವು ದಿನನಿತ್ಯದ ಬಳಕೆಯಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ವಿದ್ಯುತ್ ಬಿಲ್ (Electricity Bill) ನಲ್ಲಿ ಉಳಿತಾಯ ಮಾಡಬಹುದಾಗಿದೆ.