ಸ್ವಂತ ಮನೆ ಕಟ್ಟಬೇಕು ಎಂಬುದು ಇದು ಅನೇಕರ ಕನಸು, ಆದರೆ ಮನೆ ಖರೀದಿ ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ಹಣದ ಅಗತ್ಯವಿದೆ, ನಮ್ಮ ಹಣಕಾಸಿಗೆ ಅನುಗುಣವಾಗಿ ಮನೆ (House) ಸಿಗಬೇಕು, ಹೀಗಾಗಿ ಮನೆ ಖರೀದಿಯ ಕನಸು ನನಸು ಮಾಡಿಕೊಳ್ಳುವ ಮುನ್ನ ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ನಾವೇ ಸ್ವಯಂ ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯ, ಆದರೆ ಸಿ ಟಿ ಪ್ರದೇಶಗಳಲ್ಲಿ ನಮ್ಮ ಹಣಕಾಸಿನ ಯೋಜನೆಗೆ ಮನೆ ಸಿಗುವುದು ಕಷ್ಟ , ಆದ್ರೆ ಖಂಡಿತ ಸಾಧ್ಯ, ಬೆಂಗಳೂರಿನಲ್ಲಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ದೊರೆಯುತ್ತದೆ. ಸರ್ಕಾರದ ಈ ಯೋಜನೆ ನಿಮ್ಮ ಬಜೆಟ್ ಗೆ ಅನುಗುಣವಾಗಿ ಮನೆ ಖರೀದಿ ಮಾಡಬಹುದು.
ಬೆಂಗಳೂರಿನಂತಹ ಸಿಟಿ ಅಕ್ಕಪಕ್ಕದಲ್ಲಿ 14 ಲಕ್ಷಕ್ಕೆ ಮನೆ ಸಿಗುತ್ತದೆ ಎಂದರೆ ಅದು ನಂಬಲು ಆಗದ ವಿಷಯ. ಅದರಲ್ಲೂ 2BHK ಮನೆ 14 ಲಕ್ಷಕ್ಕೆ ದೊರೆಯುತ್ತದೆ, ಆದರೆ ಇಲ್ಲಿಯೇ ಮನೆ ಖರೀದಿಸುದಾದರೆ ಅದಕ್ಕೆ ಕೆಲವೊಂದು ಮಾಹಿತಿಗಳನ್ನು ನೀವು ತಿಳಿಯಲೇ ಬೇಕು.
ಕಡ್ಡಾಯವಾಗಿ ನೀವು ಬೆಂಗಳೂರಿನ ಸುತ್ತಮುತ್ತ ಇರುವ ತಾಲೂಕಿನಲ್ಲಿಯೇ ವಾಸವಿರಬೇಕು ವಾಸಕ್ಕೆ ಸ್ವಂತ ಮನೆ ಇಲ್ಲದೆ ಇದ್ದರೆ ನಿಮಗೆ ಖಂಡಿತವಾಗಿಯೂ ಸರ್ಕಾರದ ಈ ಯೋಜನೆ ಮೂಲಕ 14 ಲಕ್ಷಕ್ಕೆ 2BHK ಮನೆ ಸಿಗಲಿದೆ. ಆದರೆ ಈ ಹಣವನ್ನು ಒಂದೇ ಬಾರಿಗೆ ಅಲ್ಲದೆ ಕಂತುಗಳಲ್ಲಿ ಕಟ್ಟಬಹುದು
ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ:
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಹಾಕಬಹುದು, ಅರ್ಜಿ ಸಲ್ಲಿಸಿದರೆ, 14 ಲಕ್ಷಕ್ಕೆ ಮೂರು ಕಂತುಗಳಲ್ಲಿ 2BHK ಮನೆ ಸಿಗಲಿದೆ. ಇನ್ನು ವಿವರವಾಗಿ ಈ ಯೋಜನೆ ಬಗ್ಗೆ ತಿಳಿದುಕೊಳ್ಳಲು ರಾಜೀವ್ ಗಾಂದಿ ವೆಬ್ ಸೈಟ್ ಗೆ ಭೇಟಿ ಕೊಡಿ ಸಾಲದ ಮೇಲಿನ ಬಡ್ಡಿ, ಇತರ ವೆಚ್ಚ, ಹಣದುಬ್ಬರದಿಂದ ವಸ್ತುಗಳ ಬೆಲೆಯೇರಿಕೆ ಮೊದಲಾದ ಅಂಶಗಳು ಬಂದು ಹೋಗುತ್ತವೆ. ಈ ಅಂಶಗಳಿಂದಲೇ ಗ್ರಾಹಕರಲ್ಲಿ ಗೊಂದಲ ಇನ್ನಷ್ಟು ಹೆಚ್ಚಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗುವಂತೆ ಮಾಡುತ್ತದೆ,ಆದರೆ ಈ ಯೋಜನೆಯು ನಿಮಗೆ ಸಹಾಯವಾಗಲಿದೆ, ಕಂತುಗಳಲ್ಲಿ ಹಣ ಕಟ್ಟಿ ಮನೆ ಖರೀದಿ ಮಾಡಬಹುದು.