Kusuma DK Ravi: ಡಿಕೆ ರವಿ ಹೋದಮೇಲೆ ಕುಟುಂಬಕ್ಕೆ ಸಿಕ್ಕ ಹಣವೆಷ್ಟು ಎಂದು ತಿಳಿಸಿದ ಪತ್ನಿ ಕುಸುಮ
ನಮ್ಮ ಕನ್ನಡ ಮಣ್ಣಿನಲ್ಲಿ ಜನಿಸಿ ಕರ್ನಾಟಕಕ್ಕೆ(Karnataka) ಸೇವೆ ಸಲ್ಲಿಸಿದ ದಕ್ಷ ಅಧಿಕಾರಿಗಳಲ್ಲಿ ಎಂದಿಗೂ ಕೂಡ ಮರೆಯಲಾಗದ ಅಧಿಕಾರಿ ಎಂದರೆ ಡಿಕೆ ರವಿ (DK Ravi) ಅವರು. ಇನ್ನು ಡಿಕೆ ರವಿ ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನಲ್ಲಿ, 1979 ಜೂನ್ 10 ರಂದು ಜನಿಸಿದ್ದು ಇವರ ಕುಟುಂಬ ಕೃಷಿ (Agricultural) ಮೇಲೆ ಅವಲಂಬಿತವಾಗಿತ್ತು. ಇನ್ನು ತಂದೆ ತಾಯಿ ಇಬ್ಬರು ವ್ಯವಸಾಯದಲ್ಲಿ ನಿರತರಾಗಿದ್ದವರಾಗಿದ್ದು ಡಿಕೆ ರವಿ ಅವರಿಗೆ ಒಬ್ಬ ಸಹೋದರ ಹಾಗೂ ಒಬ್ಬ ಸಹೋದರಿ ಕೂಡ ಇದ್ದರು.
ಇನ್ನು ಬಾಲ್ಯದಿಂದಲೂ ಕೂಡ ಓದಿನ (Education) ಮೇಲೆ ಹೆಚ್ಚು ಗಮನ ಕೊಡುತ್ತಿದ್ದ ಡಿ ಕರ ರವಿ ಅವರು ಕೃಷಿ ವಿಷಯದಲ್ಲಿ ಪದವಿ (Degree) ಪಡೆದ ಬಳಿಕ ದೆಹಲಿಯ ಪ್ರತಿಷ್ಠಿತ ಯೂನಿವರ್ಸಿಟಿಯಲ್ಲಿ (University) ಸ್ನಾತಕೋತ್ತರ ಪದವಿ ಕೂಡ ಪಡೆದರು. ಇನ್ನು ರಾಜ್ಯದ ಜನರ ಸೇವೆ ಮಾಡಬೇಕು ಸಿವಿಲ್ ಸರ್ವೆಂಟ್ ಆಗಬೇಕೆಂಬ ಆಸೆಯಿಂದ ಯು.ಪಿ.ಎಸ್.ಸಿ (U P S C) ಪರೀಕ್ಷೆಗೆ ತಯಾರಿ ನಡೆಸಿ 2009 ರಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯನ್ನು ಕೂಡ ಕ್ಲಿಯರ್ ಮಾಡಿದರು. ಮೊದಲಿಗೆ ಗುಲ್ಬರ್ಗ ಜಿಲ್ಲೆಗೆ ಅಸಿಸ್ಟಂಟ್ ಕಮಿಷನರ್ ಆಗಿ ಕೆಲಸ ಆರಂಭಿಸಿದರು. ತದನಂತರ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾದರು. ನಂತರ ಬೆಂಗಳೂರಿಗೆ ವರ್ಗಾವಣೆಯಾಯಿತು.
ಇನ್ನು ಬೆಂಗಳೂರಿನಲ್ಲಿ 5 ತಿಂಗಳು ಕೆಲಸ ಮಾಡಿದ ಬಳಿಕ ದಿಢೀರ್ ಎಂದು 2016 ಮಾರ್ಚ್ 15 ರಂದು ಕೋರಮಂಗಲದ ಅವರ ಅಪಾರ್ಟ್ಮೆಂಟ್ ನಲ್ಲಿ ಡಿಕೆ ರವಿ ಅವರ ಅಗಲಿದ ದೇಹ ಪತ್ತೆಯಾಗಿದ್ದು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಇವರ ಹಠಾತ್ ಅಗಲಿಕೆ ಹಲವಾರು ಪ್ರಶ್ನೆಗಳನ್ನು ಸೃಷ್ಟಿಸಿತ್ತು. ಇಂದಿಗೂ ಕೂಡ ಸರಿಯಾದ ಮಾಹಿತಿ ಸಿಕ್ಕಿಲ್ಲ.ಇನ್ನು ರವಿ ರವರ ವೈಯಕ್ತಿಯ ಜೀವನದ ವಿಚಾರಕ್ಕೆ ಬರುವುದಾದರೆ. ಇವರ ಪತ್ನಿಯ ಹೆಸರು ಕುಸುಮ. ಬೆಂಗಳೂರಿನ ರಾಜ ರಾಜೇಶ್ವರಿ ನಗರಕ್ಕೆ ಹಲವಾರು ವರ್ಷಗಳಿಂದ ಸೇವೆ ಮಾಡಿದ ರಾಜಕಾರಣಿ ಹನುಮಂತರಾಯಪ್ಪಅವರ ಮಗಳು.
ಇನ್ನು ಹನುಮಂತರಾಯಪ್ಪ ಅವರು ರಾಜ ರಾಜೇಶ್ವರಿ ನಗರದ ಸಿ.ಎಲ್.ಸಿ ಗೆ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ದಜ ಕುಸುಮ ಅವರು ಅಂಬೇಡ್ಕರ್ ಸೈನ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ (Computer Science) ವಿಷಯದಲ್ಲಿ ಪದವಿ ಪಡೆದ ನಂತರ ಡಿಕೆ ರವಿ ಅವರೊಡನೆ ವಿವಾಹವಾದರು. ಡಿಕೆ ರವಿ ಅವದ ಅಗಲಿಕೆಯ ನಂತರ ಅಮೆರಿಕಾದ ಯೂನಿವರ್ಸಿಟಿಯಲ್ಲಿ Information Technology ವಿಷಯದಲ್ಲಿ MS ಮಾಡಿದರು.
ಈ ನಡುವೆ ಡಿಕೆ ರವಿ ಅಗಲಿದ ಬಳಿಕ ಕುಸುಮ ಅವರಿಗೆ ಎಷ್ಟು ಹಣ ಬಂತು ಎಂಬ ಪ್ರಶ್ನೆ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಉತ್ತರಿಸಿದ್ದ ಕುಸುಮ ಅವರು ಎಲ್ಲದಕ್ಕೂ ನನ್ನ ನಾಮಿನಿ ಮಾಡಿದ್ದರು. ಅವರ ಸಂಬಳ ಮೂರು ಲಕ್ಷ ಬಂದಿತ್ತು. ಇನ್ನು ಅವರು ತೀರಿಕೊಂಡಾಗ ಅವರ ಎಲ್ಲಾ ಕಾರ್ಯವನ್ನು ಇದೇ ಹಣ ದಿಂದ ಮಾಡಿದೆವು. ಜನ ಮಾತನಾಡುವ ಹಾಗೆ ನನಗೆ ಯಾವುದೇ ರಿತೀಯ 50 ಲಕ್ಷ ಹಣ ಬಂದಿಲ್ಲ. ಪೆನ್ ಷನ್ ಗೆ ಅಪ್ಲೈ ಮಾಡಿ ಎಂದು ಲೆಟರ್ ಬಂದಿತ್ತು. ಅದು ನನಗೆ ಸರಿ ಅನ್ನಿಸಲಿಲ್ಲ ಮಾಡಲಿಲ್ಲ ಎಂದಿದ್ದಾರೆ..