ಇಂದು ಎಲ್ಲೆಡೆ ಹಬ್ಬದ ವಾತವರಣ ಜೋರಾಗಿಯೇ ನಡೆಯುತ್ತಿದೆ, ಗೌರಿ ಗಣೇಶ ಹಬ್ಬದ(Gowri Ganesh Festival) ಸಂಭ್ರಮ ಖುಷಿ ಎಲ್ಲ ಜನತೆಯಲ್ಲಿಯು ಮನೆ ಮಾಡಿದೆ, ಗಣಪನ ಭಕ್ತರು ಹೂವು, ಹಣ್ಣು, ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಯೊಂದಿಗೆ ಪೂಜೆಗೆ ಸಿದ್ದತೆಯು ಜೋರಾಗಿಯೇ ನಡೆಯುತ್ತಿದೆ, ಹಿಂದೂ ಧರ್ಮೀಯರ ಪವಿತ್ರ ಹಬ್ಬ ಗೌರಿ-ಗಣೇಶ ಚತುರ್ಥಿ (Gauri-Ganesha Chaturthi) ಮುಂಜಾನೆಯೇ ಮನೆಯಲ್ಲಿ ಮಹಿಳೆಯರು ಮಕ್ಕಳು ಎದ್ದು ರಂಗೋಲಿ ಹಾಕಿ, ತೋರಣ ಕಟ್ಟಿ ಹಬ್ಬವನ್ನು ಸ್ವಾಗತ ಮಾಡುತ್ತಿದ್ದು ಭಕ್ತಿಯಿಂದ ನಡೆಸಲು ಸಿದ್ದಾರಾಗಿದ್ದಾರೆ, ಅದರೆ ಈ ಗಣೇಶ ಹಬ್ಬದ ಸಂಭ್ರಮದ ವಾತಾವರಣ ದಲ್ಲಿ ಕೆಲವು ನಿಯಮ ಪಾಲಿಸುವುದು ಕಡ್ಡಾಯ ಎಂಬ ಅಧಿಸೂಚನೆಯನ್ನು ಹೊರಡಿಸಿದೆ.
ವಿಸರ್ಜನೆ ಮಾಡುವಾಗ ಈ ನಿಯಮ ಅನುಸರಿಸಿ:
ಜಲಮಾಲಿನ್ಯ (Water Pollution) ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಲವು ನಿಯಮ ಗಳನ್ನು ಜಾರಿಗೆ ತರುತ್ತಾ ಇದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಓಪಿಯಿಂದ ಮಾಡುವ ಗಣೇಶ ವಿಗ್ರಹಗಳನ್ನು ಜಲಮೂಲಗಳಿಗೆ ವಿಸರ್ಜನೆ ಮಾಡುವಂತಿಲ್ಲ ಎಂಬ ಅಧಿಸೂಚನೆಯನ್ನು ನೀಡಿದೆ, ಪಿಓಪಿ ಬಣ್ಣ ಬಳಕೆ ಮಾಡಿ, ವಿಗ್ರಹಗಳನ್ನು ವಿಸರ್ಜಣೆ ಮಾಡಿದರೆ ಕ್ರಮ ಜರುಗಿಸಲಾಗುವುದು, ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಮಾಹಿತಿನೀಡಿದೆ.
ಪರಿಸರ ಸ್ನೇಹಿ ಗಣಪ ಬಳಸಿ:
ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಬಳಸಿ ಪರಿಸರ ಕಪಾಡುವ ಉದ್ದೇಶ ಹೊಂದಿರಿ ನೀರಿನಲ್ಲಿ ಕರಗಬಹುದಾದ ವಸ್ತುಗಳಿಂದ ತಯಾರಿಸಿದ ಮುರ್ತಿಗಳನ್ನಷ್ಟೇ ಇಟ್ಟು ಪೂಜಿಸಿ, ಗಣೇಶ ಮೂರ್ತಿಯ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ.
ಅನುಮತಿ ಕಡ್ಡಾಯ:
ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಪೂರ್ವಾನುಮತಿಯನ್ನು ಪಡೆಯಬೇಕು, ಈ ನಿಟ್ಟಿನಲ್ಲಿ ನೈಸರ್ಗಿಕ ಮೂರ್ತಿಗಳೊಂದಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಣೆ ಮಾಡಬೇಕಿದೆ, ಆಚರಣೆಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು.