ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಬ್ಬದ ಸೀಸನ್ (Festival Season) ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಕೂಡ ಹಬ್ಬದ ಸಂದರ್ಭದಲ್ಲಿ ಪ್ರಥಮವಾಗಿ ಮಾಡುವ ಕೆಲಸ ಎಂದರೆ ಹೊಸ ಬಟ್ಟೆಗಳನ್ನು ಖರೀದಿಸುವ ಕೆಲಸ. ಹೊಸ ಬಟ್ಟೆಗಳನ್ನು ಪ್ರತಿಯೊಬ್ಬರು ಕೂಡ ಖರೀದಿಸುತ್ತಿದ್ದಾರೆ ಆದರೆ ಒಳಗೆ ಧರಿಸುವಂತಹ ಒಳಉಡುಪುಗಳನ್ನು (Inner Wears) ಯಾರು ಕೂಡ ಖರೀದಿಸುತ್ತಿಲ್ಲ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಹೌದು ನಾವು ಒಳಉಡುಪುಗಳು ಎಂದಾಕ್ಷಣ ಮಾತಾಡ್ತಿರೋದು ಅಂಡರ್ವೇರ್ (Underwear) ಗಳ ಬಗ್ಗೆ. Rupa Dollar Jockey ಗಳಂತಹ ದೊಡ್ಡ ಒಳಉಡುಪು ಬ್ರಾಂಡ್ ಗಳ ಉಡುಪುಗಳು ಕೂಡ ದೊಡ್ಡ ಪ್ರಮಾಣದಲ್ಲಿ ಮಾರಾಟ ಕಾಣ್ತಿಲ್ಲ ಅನ್ನೋ ಮಾಹಿತಿ ಕೇಳಿ ಬಂದಿದ್ದು ಭಾರತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಂಡರ್ವೇರ್ ಗಳ ಮಾರಾಟ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆ ಕಂಡಿದೆ ಎಂಬುದಾಗಿ ತಿಳಿದು ಬಂದಿದೆ. ಅದು ಮಕ್ಕಳು ಮಹಿಳೆಯರು ಇಲ್ಲವೇ ಪುರುಷರ ವಿಭಾಗದಲ್ಲಿ ಕೂಡ ಆಗಿರಬಹುದು ಆದರೆ ಯಾವುದೇ ವಿಭಾಗದಲ್ಲಿಯೂ ಕೂಡ ಒಳಉಡುಪುಗಳ ಮಾರಾಟ ಇಲ್ಲ ಎನ್ನುವುದಕ್ಕೆ ಸರಿಸಮಾನವಾಗಿ ಆಗುತ್ತಿದೆ ಎಂದು ಹೇಳಬಹುದಾಗಿದೆ.
2022 ರ ಕೊನೆಯ ಮೂರು ತಿಂಗಳುಗಳಲ್ಲಿ ಜಾಕಿ (Jockey ) ಸಂಸ್ಥೆಯ ಒಳಉಡುಪುಗಳ ಮಾರಾಟ 55 ಪ್ರತಿಶತ ಕಡಿಮೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ 2023ರಲ್ಲಿ ರೆವೆನ್ಯೂ 28 ಪ್ರತಿಶತ ಹಾಗೂ ವಾಲ್ಯೂಮ್ ಹೆಚ್ಚಳ 31 ಪ್ರತಿಶತದ ವರೆಗೆ ಆಗಿದೆ ಎಂಬುದಾಗಿ ತಿಳಿದುಬಂದಿದೆ. ಗ್ಲೋಬಲ್ ಮಾರುಕಟ್ಟೆ (Global Market) ಯಲ್ಲಿ ನಡೆಯುತ್ತಿರುವ ಕೆಲವೊಂದು ವಿಚಾರಗಳ ಕಾರಣದಿಂದಾಗಿ ಕಂಪನಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಕೂಡ ಕಂಡುಬರುತ್ತಿದೆ.
ಭಾರತದಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಅಂಡರ್ವೇರ್ (Underwear) ಮಾರಾಟದಲ್ಲಿ ಕೂಡ ಗಣನೀಯವಾದ ಹೇಳಿಕೆ ಕಂಡು ಬಂದಿರುವುದು ಪ್ರತಿಯೊಬ್ಬರನ್ನು ಕೂಡ ಆಶ್ಚರ್ಯ ಚಕಿತರನ್ನಾಗಿಸುವಂತೆ ಮಾಡಿದೆ. ಬೆಲೆ ಏರಿಕೆ ಕೂಡ ಅಂಡರ್ವೇರ್ ಮಾರಾಟದ ಇಳಿಕೆಗೆ ಕಾರಣ ಆಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.
ಇನ್ನು ಆನ್ಲೈನ್ ಮಾರ್ಕೆಟಿನಲ್ಲಿ ಕಡಿಮೆ ಬೆಲೆಗೆ ಸಿಗುವ ಕಾರಣದಿಂದಾಗಿ ಅಲ್ಲಿ ಕೂಡ ಸಮಸ್ಯೆ ಉಂಟಾಗಿರಬಹುದು ಎನ್ನುವ ಮಾಹಿತಿ ಸಿಗುತ್ತಿದೆ. ಇನ್ನು ಮಲ್ಟಿ ಬ್ರ್ಯಾಂಡ್ ಔಟ್ಲೆಟ್ (Brand Outlet) ಗಳು ಮೊದಲು ಖರೀದಿಸುವ ಹಾಗೆ ಸ್ಟಾಕ್ ಅನ್ನು ಖರೀದಿಸುತ್ತಿಲ್ಲ ಹೀಗಾಗಿಯೇ ವರ್ಕಿಂಗ್ ಕ್ಯಾಪ್ಟನ್ ಮೇಲೆ ಇದು ವ್ಯತರಿಕ್ತ ಪರಿಣಾಮವನ್ನು ಬೀರುತ್ತಿದೆ ಎನ್ನುವ ಕಾರಣಕ್ಕಾಗಿ ಕೂಡ ಈ ಪರಿಸ್ಥಿತಿಯನ್ನು ಕಾಣಬಹುದಾಗಿದೆ ಎಂದು ಹೇಳಲಾಗುತ್ತಿದೆ.
Rupa & Co ಸಂಸ್ಥೆಯ 52 ಪ್ರತಿಶತ ಮಾರಾಟ ಇಳಿಕೆಯಾಗಿದೆ. ಇಂದಿನ ದಿನಗಳಲ್ಲಿ ಕೂಡ ಈ ಎಲ್ಲಾ ಕಂಪನಿಗಳ ಅಂಡರ್ವೇರ್ ಮಾರಾಟ ಎನ್ನುವುದು ಇಳಿಕೆಯನ್ನು ಕಾಣುತ್ತಾ ಹೋದರೆ ಎಕಾನಮಿಯಲ್ಲಿ ಪ್ರತಿಯೊಂದು ವಿಚಾರಗಳು ಕೂಡ ಸರಿ ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ.
ಪ್ರತಿಷ್ಠಿತ ಕಂಪನಿ ನಡೆಸಿರುವ ಸರ್ವೆಯ ಪ್ರಕಾರ ಭಾರತದಲ್ಲಿ ಅಂಡರ್ವೇರ್ ಮಾರುಕಟ್ಟೆ, 48123ಕೋಟಿ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ 39 ಪ್ರತಿಶತ ಮಹಿಳೆಯರು ಹಾಗೂ 61% ಪುರುಷರು ಭಾಗವನ್ನು ಹೊಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದ್ದು ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.