Chaitra Kundapura: ಗೋವಿಂದಬಾಬು ವಿರುದ್ಧ EDಗೆ ಪತ್ರ ಬರೆದಿದ್ದ ಚೈತ್ರಾ? ಪತ್ರದಲ್ಲಿ ಏನಿತ್ತು ಗೊತ್ತಾ?
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ಕೋಟಿ ಕೋಟಿ ಪಡೆದಿರುವ ಆರೋಪದ ಮೇಲೆ ಚೈತ್ರ ಕುಂದಾಪುರ ಬಂಧನವಾಗಿದ್ದಾರೆ , ದಿನೆದಿನೇ ಇವರ ಹೈಡ್ರಾಮ ಜೋರಾಗಿಯೇ ನಡೆಯುತ್ತಿದೆ, ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಚೈತ್ರಾ ಕುಂದಾಪುರ (Chaitra Kundapura) ಎಷ್ಟೇ ಕಣ್ಣೀರು ಹಾಕಿದರೂ ಈ ಕೇಸ್ ಹೆಚ್ಚು ತಿರುವು ಪಡೆಯುತ್ತಿದೆ, ಚೈತ್ರಾ ಸೇರಿದಂತೆ 6 ಮಂದಿ ಆರೋಪಿಯನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ಸಿಸಿಬಿ ಅಧಿಕಾರಿಗಳು ಮನವಿ ಮಾಡಿದ್ದು ವಿಚಾರಣೆ ನಡೆಸಲು ಇನ್ನುಕೂಡ ಚೈತ್ರ ಕುಂದಾಪುರ ಆಸ್ಪತ್ರೆ ಯಿಂದ ಡಿಸ್ಟರ್ಜ್ ಆಗಿಲ್ಲ.
ಆರೋಪ ಇದೆ:
ಭಾಷಣಗಾರ್ತಿಯಾಗಿರುವ ಚೈತ್ರಾ ಕುಂದಾಪುರ (Chaitra Kundapura), ಉತ್ತರ ಕರ್ನಾಟಕ ಹಲವು ಕಡೆಗಳಲ್ಲಿ ತಮ್ಮ ಭಾಷಣ ಮಾಡಲು ತೆರಳುತ್ತಿದ್ದರು, ಆಯೋಜಿಸುವ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಭಾಷಣಗಳಲ್ಲಿ ಕ ದ್ವೇಷ ಕಾರುತ್ತಾ, ಜನರಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದ ಆರೋಪಗಳು ಈಗಾಗಲೇ ಇದ್ದು ಇದೀಗ ಮತ್ತೆ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಗೋವಿಂದ ಪೂಜಾರಿ ಯಾರು?
ಬೈಂದೂರಿನ ಬಳಿಯ ಬೀಜೂರಿನ ಕೃಷಿ ಕುಟುಂಬದಲ್ಲಿ ಜನಿಸಿದ ಇವರು ಓದಿದ್ದು ಕಡಿಮೆ ಯಾದರೂ ಸಮಾಜ ಮುಖಿ ಕೆಲಸ ವನ್ನು ಮಾಡುತ್ತಿದ್ದವರು, ಮುಂಬೈನ ಪೈವ್ ಸ್ಟಾರ್ ಹೋಟೆಲೊಂದರಲ್ಲಿ (Five Star Hotel) ಕೆಲಸ ಪಡೆದ ಅವರು ಅಡುಗೆಯನ್ನು ಆಸಕ್ತಿಯಿಂದ ಕಲಿತುಕೊಂಡು ಶೆಫ್ ಆದರು. ಈಗ ಶ್ರೇಷ್ಠ ಉದ್ಯಮಿ ಎಂದು ಎನಿಸಿ ಕೊಂಡಿದ್ದಾರೆ, ರಾಜಕೀಯ ರಂಗಕ್ಕೂ ಬರಲು ಆಸಕ್ತಿ ಇದ್ದ ಇವರಿಗೆ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕೊಡಿಸು ವುದಾಗಿ ಹೇಳಿ ಚೈತ್ರಾ ಕುಂದಾಪುರ ಅವರು ಒಟ್ಟು ಐದೂವರೆ ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಡೀಲ್ ಈಗ ಮುಂದು ವರಿಯುತ್ತಿದೆ.
ಏನಿದೆ ಪತ್ರದಲ್ಲಿ?
ಇದೀಗ ಚೈತ್ರ ಕುಂದಾಪುರ (Chaitra Kundapura) ಬರೆದಿರುವ ಪತ್ರ ವೈರಲ್ ಆಗುತ್ತಿದೆ, ಟಿಕೆಟ್‌ಗಾಗಿ ಹಣ ವಂಚನೆ ಪ್ರಕರಣ ಹೊರಬರುವ ಕೆಲ ತಿಂಗಳಿಗೂ ಮುನ್ನ ಗೋವಿಂದ ಬಾಬು ಪೂಜಾರಿ (Govinda Babu Poojari) ಅವ್ಯವಹಾರ ನಡೆಸಿದ್ದರು. ಈ ಕುರಿತು ತನಿಖೆ ನಡೆಸಬೇಕೆಂದು ಆದಾಯ ತೆರಿಗೆ ಇಲಾಖೆಗೆ ಚೈತ್ರಾ ಕುಂದಾಪುರ ಪತ್ರ ಬರೆದಿದ್ದು, ಹಣ ನೀಡಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವುದನ್ನು ಬಹಿರಂಗ ಪಡಿಸಲು ನಾನು ಬಯಸಿದ್ದೆ ಎಂದು ಚೈತ್ರಾ ಬರೆದಿದ್ದಾರೆ ಎನ್ನಲಾಗಿದೆ.
