Karnataka Times
Trending Stories, Viral News, Gossips & Everything in Kannada

Kabzaa: ಕಬ್ಜ ಎರಡನೇ ದಿನದ ಕಲೆಕ್ಷನ್ ಇಲ್ಲಿದೆ, ದಾಖಲೆ ಬರೆದ ಚಿತ್ರ

Advertisement

ದೊಡ್ಡಮಟ್ಟದಲ್ಲಿ ರಿಲೀಸ್ ಆಗಿರುವ ಕಬ್ಜ (Kabzaa) ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ (Collection) ಅನ್ನು ಮಾಡಿತ್ತು. ಹೌದು ಪ್ರಪಂಚಾದ್ಯಂತ (World) ಬರೋಬ್ಬರಿ 40 ಕೋಟಿಗೂ ಹೆಚ್ಚು ಗಳಿಕೆಯನ್ನು ಮಾಡಿರುವ ಕಬ್ಜ ಸಿನಿಮಾ ಕರ್ನಾಟಕದಲ್ಲಿ (Karnataka) ಮೊದಲ ದಿನ ಬರೋಬ್ಬರಿ 26 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಇನ್ನು ಈ ಮೂಲಕ ಮೊದಲ ದಿನ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ (Kannada Movies) ಪಟ್ಟಿಯಲ್ಲಿ ಕಬ್ಜ ಚಿತ್ರ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಇನ್ನು ಬಿಡುಗಡೆ ದಿನ 31 ಕೋಟಿ ಗಳಿಕೆ ಮಾಡಿದ್ದ ಕೆಜಿಎಫ್ ಚಾಪ್ಟರ್ 2 (KGF 2) ಚಿತ್ರ ಮೊದಲ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಹೌದು ಮೊದಲ ದಿನ (First Day) ಅಬ್ಬರದ ಕಲೆಕ್ಷನ್ ಮಾಡಿರುವ ಕಬ್ಜ ಚಿತ್ರ ಕೆಜಿಎಫ್ ಚಾಪ್ಟರ್ 1(KGF Chapter 1) ವಿಕ್ರಾಂತ್ ರೋಣ (Vikranth Rona) ಹಾಗೂ ಜೇಮ್ಸ್ (James) ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಚಿತ್ರ ಉಪೇಂದ್ರ (Upendra) ಸಿನಿ ಜೀವನದ ಮೊದಲ ಪ್ಯಾನ್ ಇಂಡಿಯಾ (Pan India) ಸಿನಿಮಾ ಎನಿಸಿಕೊಳ್ಳುವುದರ ಜತೆಗೆ ಬಿಡುಗಡೆ ದಿನ ಅತಿಹೆಚ್ಚು ಗಳಿಕೆ ಕಂಡ ಉಪೇಂದ್ರ ಸಿನಿಮಾ ಎಂಬ ಸಾಧನೆಯನ್ನೂ ಕೂಡ ಮಾಡಿದೆ.

Advertisement

ಸದ್ಯ ಇದೀಗ ಎರಡನೇ ದಿನದ ಕಲೆಕ್ಷನ್ ಲಿಸ್ಟ್ ಹೊರ ಬಂದಿದ್ದು ವೀಕೆಂಡ್ ಆಗಿರುವ ಕಾರಣ ಸಿನಿಮಾ ಶನಿವಾರ ಭರ್ಜರಿ ಕಲೆಕ್ಷನ್ ಮಾಡಿದೆ. ಹೌದು ಇದೀಗ ಕರ್ನಾಟಕದ ಎರಡನೇ ದಿನದ ಕಲೆಕ್ಷನ್ ಬಹಿರಂಗವಾಗಿದ್ದು ಕಬ್ಜ ಸಿನಿಮಾ ಎರಡನೇ ದಿನ ಅಂದರೆ ಶನಿವಾರ ಬರೂಬ್ಬರಿ 28 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮೊದಲ ದಿನಕ್ಕಿಂತ ಎರಡು ಕೋಟಿ ಹೆಚ್ಚಿಸಿಕೊಂಡಿದೆ. ಸದ್ಯ ಸಿನಿಮಾ ಎರಡನೇ ದಿನ ದಾಖಲೆ ಬರೆದಿದ್ದು ಕೆಜಿಎಫ್ ಹಾಗೂ ಕಾಂತರ ರೆಕಾರ್ಡ್ ಧೂಳಿ ಪಟ ಮಾಡಿದೆ. ಒಟ್ಟಾರೆ ಕಬ್ಜ ಸಿನಿಮಾ ಮೊದೆಲೆರೆಡು ದಿನ ಕರ್ನಾಟಕದಲ್ಲಿ 54 ಕೋಟಿ ಬಾಚಿವ ಮೂಲಕ ಹೊಸ ರೆಕಾರ್ಡ್ ಬರೆದಿದೆ

ಕಬ್ಜ ಸಿನಿಮಾ ಮೊದಲ ದಿನಕ್ಕಿಂತ ಎರಡನೇ ದಿನವೇ ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು ಕಲೆಕ್ಷನ್ ಹೆಚ್ಚಾಗಿರುವುದರಲ್ಲಿ ಯಾವುದೇ ಡೌಟ್ ಇಲ್ಲ. ಹೌದು ಮೊದಲ ದಿನ ಬೆಂಗಳೂರಿನಲ್ಲಿ 597 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಕಬ್ಜ ಚಿತ್ರ ಎರಡನೇ ದಿನ 623 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು ಈ ರೀತಿ ಈ ವರ್ಷ ತೆರೆಕಂಡ ಯಾವ ಸಿನಿಮಾಗಳೂ ಸಹ ಬೆಂಗಳೂರಿನಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿರಲಿಲ್ಲ. ಹೌದು ಮೊದಲ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಚಿತ್ರಗಳು ಎರಡನೇ ದಿನ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡು ಶೋಗಳನ್ನು ಕಳೆದುಕೊಂಡಿದ್ದವು. ಇನ್ನು ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಎರಡನೇ ದಿನ 600ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡ ಏಕೈಕ ಚಿತ್ರ ಎನಿಸಿಕೊಂಡಿದೆ ಕಬ್ಜ

Advertisement

Leave A Reply

Your email address will not be published.