ಚಿನ್ನದ(Gold) ಮೇಲೆ ಹೂಡಿಕೆ ಮಾಡುವ ಜನರು ಇತ್ತೀಚಿಗೆ ಏರಿಳಿತವಾಗುತ್ತಿರುವ ಚಿನ್ನದ ಬೆಲೆಯಿಂದಾಗಿ ತಲೆಕೆಡಿಸಿಕೊಳ್ಳುವಂತಾಗಿದೆ. ಇದರ ಜೊತೆಗೆ ಚಿನ್ನಾಭರಣ ಖರೀದಿ ಮಾಡುವವರಿಗೂ ಸಮಸ್ಯೆ ಆಗಿದೆ. ಕಳೆದ ಹೆಲವು 15 ದಿನಗಳಲ್ಲಿ ಹೆಚ್ಚು ಏರಿಳಿತ ಕಂಡಿದ್ದ ಚಿನ್ನದ ಬೆಲೆ ತುಸು ಇಳಿಕೆಯನ್ನೂ ಕಂಡಿತ್ತು. ಆದರೆ ಮುಂದಿನ ವಾರದ ಆರಂಭದಲ್ಲಿಯೇ ಚಿನ್ನದ ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆಇದೆ ಎಂಡು ತಜ್ಞರು ತಿಳಿಸಿದ್ದಾರೆ.
ಈಗಾಗಲೇ ಚಿನ್ನದ ಬೆಲೆ 10 ಗ್ರಾಂಗೆ 59,000 ರೂಪಾಯಿ ದಾಟಿದೆ. ಮುಂದಿನ ವಾರ ಸಾಕಷ್ಟು ಸಮಯದ ನಂತರ 60,000 ರೂ. ಗೆ ತಲುಪುವ ಸಾಧ್ಯತೆ ಇದೆ. ಶುಕ್ರವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 59,461 ರೂ.ಗೆ ಗರಿಷ್ಠ ಏರಿಕೆಯನ್ನು ಕಂಡಿದೆ. ದಿನದ ಅಂತ್ಯದ ವೇಳೆಗೆ ಈ ಬೆಲೆ 59,420 ರೂ. ಆಗಿತ್ತು. ಕಳೆದ ಆರದ ಲೆಕ್ಕಾಚಾರದ ಮೇಲೆ ನೋಡುವುದಾದರೆ, ಏಪ್ರಿಲ್‌ನಲ್ಲಿ ಚಿನ್ನದ ಬೆಲೆ 1,414 ರೂಪಾಯಿಗಳಷ್ಟು ಹೆಚ್ಚಾಗಬಹುದು.
ಮುಂದಿನ ವಾರಕ್ಕೆ ಏರಲಿದೆ ಚಿನ್ನದ ಬೆಲೆ:
ಅಮೇರಿಕಾ(America) ಹಾಗೂ ಯುರೋಪ್(Europe) ನಲ್ಲಿ ತಲೆದೂರಿರುವ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದಾಗಿ ವಿಶ್ಚದ ಶೇರು ಮಾರುಕಟ್ಟೆಯೇ ನಡುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಚಿನ್ನದ ಬೆಲೆಯೂ ನಿರಂತರವಾಗಿ ಏರುತ್ತಿದೆ. ಈ ವಾರಾಂತ್ಯದಲ್ಲಿ 59,000 ರೂ. ಆಗಿದೆ. ಅದೇ ಫೆಬ್ರವರಿ 2 ರಂದು 10 ಗ್ರಾಂಗೆ 58,847 ರೂ. ಆಗಿತ್ತು. ವಾರ್ಚ್ ತಿಂಗಆಳ್ ಆರಂಭದಲ್ಲಿ ಬಂಗಾರದ ಬೆಲೆ 55 ಸಾವಿರ ರೂಪಾಯಿ ದಾಖಲಾಗಿತ್ತು.
ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ 4,366 ರೂ.ಗಳಷ್ಟು ಏರಿಕೆಯಾಗಿದ್ದು, ಶೇ.8 ರಷ್ಟು ಹೆಚ್ಚಳ ಅಗಿದೆ ಎನ್ನಬಹುದು. ಒಂದೇ ತಿಂಗಳಿನಲ್ಲಿ ಶೇ.6.51ರಷ್ಟು ಆದಾಯ ನೀಡಿದ್ದು 3,628 ರೂ.ವರೆಗೆ ಏರಿಕೆ ಕಂಡಿದೆ. ಈ ನಡುವೆ ಬೆಳ್ಳಿ ಬೆಲೆಯೂ ಜಾಸ್ತಿಯಾಗಿದೆ. ಬೆಳ್ಳಿ ಬೆಲೆ ನೋಡುವುದಾದರೆ, ಕೆಜಿಗೆ 2,118 ರೂ.ಗಳಷ್ಟು ಹೆಚ್ಚಳಾವಾಗಿ ಈಗ ಕೆಜಿಗೆ 68,649 ರೂ.ಗೆ ಆಗಿದೆ.