Gold Price Today: ದೇಶಾದ್ಯಂತ ಇಂದಿನ ಚಿನ್ನದ ದರ ಹೀಗಿದೆ

Advertisement
ಸದ್ಯ ಇದೀಗ ಭಾರತದಲ್ಲಿ (India) ಬಂಗಾರದ ಬೆಲೆ (Gold Rate) ಖರೀದಿದಾರರಿಗೆ ಬಿಗ್ ಶಾಕ್ (Bigg Shock) ನೀಡಿದ್ದು ಭಾರೀ ಏರಿಕೆಯಿಂದ ಗ್ರಾಹಕರ (Customers) ಕೈ ಸುಡುತ್ತಿದೆ ಎನ್ನಬಹುದು. ಸದ್ಯ ಇಂದಿನ ಚಿನ್ನ-ಬೆಳ್ಳಿಯ ಬೆಲೆ (Gold-Silver Price) ಎಷ್ಟಾಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಖಂಡಿತ ಇದ್ದರೆ ಇರುತ್ತದೆ.
ಇನ್ನು ಬೆಂಗಳೂರಿನಲ್ಲಿ (Banglore) ಚಿನ್ನದ ಬೆಲೆ ಏರಿಕೆ ಆಗಿದ್ದು ಆಭರಣ ಪ್ರಿಯರು ಮತ್ತು ಹೂಡಿಕೆದಾರರಿಗಾಗಿ ಚಿನ್ನ ಬೆಳ್ಳಿಯ ದರ ಎಷ್ಟಿದೆ ಎಂದು ತಿಳಿಸಿಕೊಡುತ್ತೆವೆ ಬನ್ನಿ.. ಇಂದು ಅಂದರೆ ಮಾರ್ಚ್ 19 ರ ಮುಂಜಾನೆಯ ಸಂದರ್ಭದಲ್ಲಿ ಚಿನ್ನ ಬೆಳ್ಳಿಯ ದರದಲ್ಲಿ ಏರಿಕೆ (Rise) ಕಂಡುಬಂದಿದೆ. ಹೌದು ದೇಶದಲ್ಲಿ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 5,842 ರೂಪಾಯಿ ದಾಖಲಾಗಿದ್ದು ಸಿಲಿಕಾನ್ ಸಿಟಿ (Silicon City) ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 1 ಗ್ರಾಂ ಬಂಗಾರಕ್ಕೆ 5,847 ರೂಪಾಯಿ ನಿಗದಿಯಾಗಿದ್ದು 55 ರುಪಾಯಿ ಏರಿಕೆಯಾಗಿದೆ.
Advertisement
ಇನ್ನು ದೇಶದಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಬಂಗಾರದ ಬೆಲೆಯಲ್ಲಿ 50 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂ ಬೆಲೆ 500 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಬೆಳ್ಳಿ ದರವೂ ಕೂಡ ಏರಿಕೆ ಕಂಡಿದ್ದು ಬೆಂಗಳೂರಲ್ಲಿ ಗ್ರಾಂ ಗೆ 72.50 ರೂಪಾಯಿ ಇದ್ದು 10 ಗ್ರಾಂ ಗೆ 727 ರೂಪಾಯಿ ಇದೆ. ಇನ್ನು ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ಜಾವದ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 53,600 ರೂಪಾಯಿ ಅಷ್ಟಿದ್ದರೆ ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 58,470 ರುಪಾಯಿ ದಾಖಲಾಗಿದೆ. ಹೌದು ಬರೊಬ್ಬರಿ 550 ರುಪಾಯಿ ಏರಿಕೆಯಾಗಿದೆ.
ಇನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ತುಮುಲ ಹಣದುಬ್ಬರದ ಅನಿಶ್ಚಿತತೆ ನಿರುದ್ಯೋಗ ಎಲ್ಲವೂ ಸಹ ಹೂಡಿಕೆದಾರರನ್ನು ಬಂಗಾರದ ಮೇಲೆ ಹೂಡಿಕೆ ಮಾಡುವಂತೆ ಸೆಳೆದಿದ್ದು ಚಿನ್ನದ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಕೂಡ ಹೆಚ್ಚಿದೆ ಎನ್ನಬಹುದು. ಹೌದು ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸರಿಯಾದ ಸಮಯವಾಗಿದ್ದು ಅಲ್ಲದೆ ಇನ್ನಷ್ಟು ದಿನ ಚಿನ್ನದ ದರ ಏರುಗತಿಯಲ್ಲೇ ಇರುತ್ತದೆ ಎಂದು ಈಗಾಗಕೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದು ಸದ್ಯದ ಮಟ್ಟಿಗೆ ಚಿನ್ನ 1 ಗ್ರಾಂಗೆ 10 ರೂಪಾಯಿ ಇಳಿಕೆಯಾಗಿದೆ.ಇನ್ನು ಅಂತರಾಷ್ಟ್ರೀಯ ಟ್ರೆಂಡ್ ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನುಆಧರಿಸಿ ಆಯಾ ದಿನದ ಬಂಗಾರ ಮತ್ತು ಬೆಳ್ಳಿ ದರ ನಿರ್ಧಾರವಾಗುತ್ತದೆ.
Advertisement