Karnataka Times
Trending Stories, Viral News, Gossips & Everything in Kannada

Flat: 6 ಕೋಟಿಯ ಫ್ಲ್ಯಾಟ್ ಕೇವಲ 100 ರೂಗೆ ಕ ಸೋಲ್ಡ್ ಔಟ್. ಇದೇನಿದು ಹೊಸ ಯೋಜನೆ!

ಅನ್ಯವಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡೆಲ್ಲಿ ಮುಂಬೈ (Mumbai) ಹಾಗೂ ಬೆಂಗಳೂರು (Bangalore) ಮೆಟ್ರೋ ಸಿಟಿಗಳಲ್ಲಿ (Metro City) ನಿಜಕ್ಕೂ ಕೂಡ ಪ್ರಾಪರ್ಟಿಯನ್ನು ಖರೀದಿಸುವುದೇ ದುಸ್ತರವಾಗಿಬಿಟ್ಟಿದೆ ಎಂದರು ತಪ್ಪಾಗಲಾರದು. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಕೂಡ ಕೆಲವೊಂದು ಕಡೆಗಳಲ್ಲಿ ಈಗ ಪ್ರಾಪರ್ಟಿಯನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಮನೆಯನ್ನು ಕೂಡ ಕಟ್ಟಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರು ತಮ್ಮ ಮನೆಯನ್ನು ಕಟ್ಟುವಂತಹ ಕನಸನ್ನು ಲೋನ್ (Loan) ಮೂಲಕ ಪೂರೈಸಿಕೊಳ್ಳುತ್ತಿದ್ದಾರೆ.

Advertisement

ಆದರೆ ಇಲ್ಲೊಂದು ಕಡೆಯಲ್ಲಿ ಕೋಟಿ ರೂಪಾಯಿ ಮೌಲ್ಯದ ಪ್ರಾಪರ್ಟಿ (Property) ಕೇವಲ ನೂರು ರೂಪಾಯಿಯಲ್ಲಿ ಸಿಗುತ್ತಿದೆ ಎಂಬುದಾಗಿ ಸುದ್ದಿ ಕೇಳಿ ಬರುತ್ತಿದ್ದು ಖಂಡಿತವಾಗಿ ಇದನ್ನು ನೀವು ಕೇಳಿದರೆ ಎಲ್ಲೋ ಕಾಮಿಡಿ ಮಾಡುತ್ತಿದ್ದಾರೆ ಅಂತ ಭಾವಿಸ್ತೀರಾ. ಆದರೆ ಇದು ನಿಜ ಅನ್ನೋದನ್ನ ಕೂಡ ನೀವು ಒಪ್ಪಲೇಬೇಕಾಗುತ್ತದೆ ಆದರೆ ಇದು ನಡೆದಿರೋದು ಇಲ್ಲ ಅಲ್ಲ ಬದಲಾಗಿ ಬ್ರಿಟನ್ ನ ಕಾರ್ನಿಶ್ ಟೌನ್ ಸೆಂಟರ್ ನ ಕಮ್ಯುನಿಟಿ ಲ್ಯಾಂಡ್ ಟ್ರಸ್ಟ್ ಮಾಡ್ತಾ ಇರೋದು. ಇಲ್ಲಿನ ಸಾಕಷ್ಟು ಜನರಿಗೆ ವಾಸಕ್ಕೆ ಮನೆ ಸಿಕ್ತಾ ಇಲ್ಲ ಅನ್ನೋ ಕಾರಣಕ್ಕಾಗಿ ಈ ಟ್ರಸ್ಟ್ ನವರು ಅಂತಹ ಆರ್ಥಿಕವಾಗಿ ಹಿಂದುಳಿದಿರುವಂತಹ ಜನರಿಗೆ ಕಡಿಮೆ ದರದಲ್ಲಿ ಮನೆಯನ್ನು ನೀಡುವಂತಹ ಕೆಲಸವನ್ನು ಮಾಡ್ತಾ ಇದೆ. ಇಷ್ಟೊಂದು ಕಡಿಮೆ ದರದಲ್ಲಿ ಮನೆ ಸಿಕ್ತಾ ಇದೆಯಲ್ಲ ನಾವು ಕೂಡ ಖರೀದಿಸೋಣ ಅಂತ ನೀವು ಯೋಚನೆ ಮಾಡ್ತಾ ಇದ್ರೆ ಖಂಡಿತವಾಗಿ ಅದು ಮೂರ್ಖತನ ಯಾಕೆ ಅಂದ್ರೆ ಇದು ಎಲ್ಲರಿಗೂ ಕೂಡ ಸಿಗಲ್ಲ. Daily Express ವರದಿಯ ಪ್ರಕಾರ 6.6 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಕೇವಲ ನೂರು ರೂಪಾಯಿ ಮೌಲ್ಯಕ್ಕೆ ಮಾರಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Advertisement

ಇದರ ರೆನೆವಲ್ ಗಾಗಿ 10 ಲಕ್ಷ ಪೌಂಡುಗಳನ್ನು ಖರ್ಚು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಲ್ಲಿ 11 ಫ್ಲಾಟ್ ಗಳನ್ನು ಈಗಾಗಲೇ ಮಾರಾಟ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಪ್ಲಾಟ್ ಗಳನ್ನು ಕೇವಲ ಕಾರ್ನ್ವಾಲ್ ಕೌನ್ಸಿಲಿಂಗ್ ಕಮ್ಯುನಿಟಿಯವರಿಗೆ ಮಾತ್ರ ನೀಡಲಾಗುತ್ತಿದೆ. ಹೆಚ್ಚಾಗಿ ಈ ಮನೆಗಳನ್ನು ಸೆಕೆಂಡ್ ಹೋಂ (Secound Home) ರೀತಿಯಲ್ಲಿ ಕಾಣಲಾಗುತ್ತದೆ. 13,000 ಕ್ಕಿಂತಲೂ ಅಧಿಕ ಪ್ರಾಪರ್ಟಿಗಳನ್ನು ನೀವು ಸೆಕೆಂಡ್ ಹೋಂ ರೀತಿಯಲ್ಲಿ ಕಾಣಬಹುದಾಗಿದ್ದು ಕೇವಲ ರಜ ದಿನಗಳಲ್ಲಿ ಮಾತ್ರ ಇಲ್ಲಿ ಇರಲು ಆಗಮಿಸುತ್ತಾರೆ ಹೀಗಾಗಿ ಇದೇ ಕಾರಣಕ್ಕಾಗಿ ಇಲ್ಲಿ ಇಷ್ಟೊಂದು ಕಡಿಮೆಯಲ್ಲಿ ಫ್ಲಾಟ್ (Cheap Rate Flats) ಗಳು ದೊರಕುತ್ತಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಇದರ ಸತ್ಯಾಸತ್ಯಗಳನ್ನು ನಾವು ಅಲ್ಲಿಗೆ ಹೋಗಿಯೇ ಪರಿಶೀಲಿಸಬೇಕಾಗಿದೆ ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂತಹ ಸುದ್ದಿಗಳು ಕೇಳಿ ಬರುತ್ತವೆ ಎನ್ನುವುದನ್ನು ಕೂಡ ನೀವು ಗಮನಿಸಿರುತ್ತೀರಿ.

Leave A Reply

Your email address will not be published.