Govt Employees: ಸರ್ಕಾರೀ ಕೆಲಸದಲ್ಲಿರುವವರು ಬೇರೆ ಬಿಸಿನೆಸ್ ಮಾಡಬಹುದೇ? ಬಂತು ಹೊಸ ರೂಲ್ಸ್
Government Employees: ಪ್ರತಿಯೊಬ್ಬರು ಕೂಡ ಹುಟ್ಟಿದ ಮೇಲೆ ಏನಾದರೂ ಮಾಡಲೇಬೇಕು ಅನ್ನೋ ಹಾಗೆ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಆದಾಯವನ್ನು ಪಡೆದುಕೊಳ್ಳಲು ಬೇರೆ ಬೇರೆ ರೀತಿಯ ಕೆಲಸಗಳನ್ನು ಹಾಗೂ ವ್ಯಾಪಾರಗಳನ್ನು ಮಾಡುತ್ತಾರೆ. ಕೆಲವರಿಗೆ ಬೇರೆಯವರ ಕೆಳಗೆ ಕೆಲಸ ಮಾಡಲು ಇಷ್ಟ ಇರುವುದಿಲ್ಲ ಕಾರಣಕ್ಕಾಗಿ ಸ್ವಂತ ವ್ಯಾಪಾರವನ್ನು(Business) ಕೂಡ ಮಾಡುತ್ತಾರೆ. ಇನ್ನು ಕೆಲವರು ಕೆಲಸ ಮಾಡುತ್ತಾರೆ ಅದರಲ್ಲೂ ವಿಶೇಷವಾಗಿ ಸರ್ಕಾರಿ ಕೆಲಸವನ್ನು ಮಾಡುತ್ತಾರೆ. ಸರ್ಕಾರಿ ಕೆಲಸವನ್ನು ಮಾಡುವಂತಹ ಕನಸಿಟ್ಟುಕೊಂಡು ಶೈಕ್ಷಣಿಕ ಅರ್ಹತೆಯನ್ನು ಪಡೆದುಕೊಳ್ಳುವಂತಹ ಸಾಕಷ್ಟು ಜನರನ್ನು ಕೂಡ ನಾವು ನೋಡಬಹುದಾಗಿದೆ.
ಆದರೆ ನೀವು ಸರ್ಕಾರಿ ಕೆಲಸವನ್ನು(Government Job) ಮಾಡುತ್ತಾ ಹೆಚ್ಚಿನ ಆದಾಯಕ್ಕಾಗಿ(Income) ಬಿಸಿನೆಸ್ ಅನ್ನು ಕೂಡ ಮಾಡಬಹುದೇ ಎಂಬುದಾಗಿ ಭಾವಿಸುತ್ತೀರಿ. ಆದರೆ ಅದು ಕಾನೂನು ಪ್ರಕಾರ ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಕೂಡ ಮೊದಲಿಗೆ ತಿಳಿದುಕೊಳ್ಳಬೇಕಾಗುತ್ತದೆ. ಇದನ್ನು ಕೇವಲ ಹೆಚ್ಚಿನ ಆದಾಯಕ್ಕಾಗಿ ಮಾಡಬಹುದು ಎಂಬುದಾಗಿ ಸರ್ಕಾರಿ ಉದ್ಯೋಗದಲ್ಲಿರುವವರು ಭಾವಿಸುತ್ತಾರೆ ಆದರೆ ನಿಜವಾದ ವಿಚಾರ ಏನೆಂದರೆ ಸರ್ಕಾರಿ ಉದ್ಯೋಗದಲ್ಲಿ ಇರುವಂತಹ ಯಾರೊಬ್ಬರೂ ಕೂಡ ಅಲ್ಲಿನ ನಿಯಮಾವಳಿಗಳ ಪ್ರಕಾರ ಸ್ವಂತವಾದ ವ್ಯಾಪಾರವನ್ನು ಅಥವಾ ಉದ್ಯಮವನ್ನು ಮಾಡುವ ಹಾಗಿಲ್ಲ ಎಂಬುದಾಗಿ ನಿಯಮವನ್ನು ತಿಳಿಸುತ್ತದೆ.
ಸರ್ಕಾರಿ ನೌಕರಿಯನ್ನು ಪಡೆಯುವ ಸಂದರ್ಭದಲ್ಲಿ ಆರಂಭದಲ್ಲಿ ಕೆಲವೊಂದು ಅಗ್ರಿಮೆಂಟ್ ಗಳಿಗೆ ಸಹಿ ಹಾಕಿಸಲಾಗುತ್ತದೆ ಹಾಗೂ ಆ ಸಂದರ್ಭದಲ್ಲಿ ಯಾವುದೇ ವ್ಯಾಪಾರವನ್ನು ಅವರು ಮಾಡುವ ಹಾಗಿರುವುದಿಲ್ಲ ಎಂಬುದಾಗಿ ಕೂಡ ಅದರಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕಾಗಿ ಕೂಡ ಸರ್ಕಾರಿ ನೌಕರಿಯಲ್ಲಿರುವಂತಹ ಉದ್ಯೋಗಿಗಳು ತಮ್ಮ ಸ್ವಂತ ಉದ್ಯಮವನ್ನು(Own Business) ಪ್ರಾರಂಭಿಸಲು ಸಾಧ್ಯವೇ ಇಲ್ಲ ಎಂಬುದಾಗಿ ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಅಂತಹ ಸರ್ಕಾರಿ ಉದ್ಯೋಗಿಗಳಿಗೆ ಇರುವಂತಹ ಒಂದೇ ಒಂದು ಆಯ್ಕೆ ಏನೆಂದರೆ ಅವರು ಯಾವುದೇ ಉದ್ಯಮ ಅಥವಾ ವ್ಯಾಪಾರವನ್ನು ತಮ್ಮ ಮನೆಯವರ ಹೆಸರಿನಲ್ಲಿ ಮಾಡಿಸಬಹುದಾಗಿದೆ ಇದೊಂದೇ ಆಪ್ಷನ್ ಅವರಿಗೆ ಕೊನೆಯದಾಗಿ ಉಳಿದಿರುವುದು ಎಂದು ಹೇಳಬಹುದು.
ಆದರೆ ಈ ಸಂದರ್ಭದಲ್ಲಿ ಕೂಡ ಅದರಿಂದ ಬರುವಂತಹ ಆದಾಯವನ್ನು ಅವರೇ ಪಡೆದುಕೊಳ್ಳುತ್ತಾರೆ ನೀವು ಕೇವಲ ಆ ವ್ಯಾಪಾರದಲ್ಲಿ ಸಲಹೆಯನ್ನು ನೀಡುವಂತಹ ಕೆಲಸವನ್ನು ಮಾಡಬಹುದಾಗಿದೆ ಯಾವುದೇ ಮಾಲಿಕತ್ವವನ್ನು ಪಡೆದುಕೊಳ್ಳುವಂತಹ ಹಕ್ಕು ನಿಮಗಿರುವುದಿಲ್ಲ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ಸರ್ಕಾರಿ ಕೆಲಸದಲ್ಲಿರುವವರು ಒಂದು ವೇಳೆ ತಮ್ಮದೇ ವ್ಯಾಪಾರವನ್ನು ಮಾಡಿಕೊಂಡರೆ ಅಲ್ಲಿ ಆಗುವಂತಹ ಕೆಲವೊಮ್ಮೆ ನಷ್ಟಗಳಿಂದಾಗಿ ಅವರು ತಮ್ಮ ನಿಜವಾದ ಸರ್ಕಾರಿ ಕೆಲಸದ ಮೇಲೆ ನೇರವಾದ ಪ್ರತಿನಿತ್ಯ ಪರಿಣಾಮವನ್ನು ಬೀರುತ್ತಾರೆ ಹಾಗೂ ಅಲ್ಲಿನ ಟೆನ್ಶನ್ ಅನ್ನು ತಮ್ಮ ಸರ್ಕಾರಿ ಕೆಲಸದ ಮೇಲೆ ಬೀರುತ್ತಾರೆ ಎನ್ನುವ ಕಾರಣಕ್ಕಾಗಿ ಸರ್ಕಾರಿ ಕೆಲಸದಲ್ಲಿರುವಂತಹ ವ್ಯಕ್ತಿಗಳು ಯಾರು ಕೂಡ ಸ್ವಂತ ವ್ಯಾಪಾರವನ್ನು ಪ್ರಾರಂಭಿಸುವ ಹಾಗಿಲ್ಲ ಎನ್ನುವುದಾಗಿ ಕೆಲಸದ ಆರಂಭದಲ್ಲಿಯೇ ಪ್ರತಿಯೊಬ್ಬರಿಗೂ ಕೂಡ ತಾಕೀತು ಮಾಡಲಾಗುತ್ತದೆ.