Karnataka Times
Trending Stories, Viral News, Gossips & Everything in Kannada

Govt Employee: ಮತ್ತೆ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ! ಎಷ್ಟು % ಗೊತ್ತಾ?

ಹಬ್ಬಗಳ ನಾಡು ಭಾರತದಲ್ಲಿ ಇದೀಗ ಸಾಲು ಸಾಲು ಹಬ್ಬಗಳ ಸಂಭ್ರಮ ಮನೆ ಮಾಡಿದೆ, ಕೃಷ್ಣಾಷ್ಠಮಿ, ಗಣೇಶ ಚತುರ್ಥಿ, ಹಾಗೂ ದಸರಾ ಹಬ್ಬಗಳ ಸಂಭ್ರಮದಲ್ಲಿ ಜನರಿದ್ದಾರೆ. ಅದರಲ್ಲಿಯೂ ನೌಕರರಿಗೆ ಹಬ್ಬದ ರಜೆ ಸಿಕ್ಕಿರುವುದರಿಂದ ಉದ್ಯೋಗಗಳು ಕೂಡಾ ಖುಷಿಯಾಗಿದ್ದಾರೆ. ಇದೀಗ, ಕೇಂದ್ರ ಸರಕಾರಿ ನೌಕರರು (Govt Employee) ಕೇಂದ್ರ ಸರಕಾರದಿಂದ ಗುಡ್‌ನ್ಯೂಸ್‌ಗಾಗಿ ಕಾಯುತ್ತಿದ್ದಾರೆ. ಮಾಧ್ಯಮಗಳ ವರದಿಯ ಪ್ರಕಾರ ಕೇಂದ್ರ ಸರಕಾರ ಯಾವುದೇ ಸಮಯ ದಲ್ಲಿಯೂ ಕೇಂದ್ರ ಸರಕಾರಿ ನೌಕರರಿಗೆ (Govt Employee) 7ನೇ ವೇತನ ಆಯೋಗದ ವರದಿಯಂತೆ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Advertisement

ಲಭ್ಯವಿರುವ ಮಾಹಿತಿಯ ಪ್ರಕಾರ, ನವರಾತ್ರಿಯ ನಂತರ ಡಿಎ (DA)  ಹೆಚ್ಚಳ ಖಚಿತ ಎನ್ನಲಾಗುತ್ತಿದೆ.ಇದರಿಂದ ಹಬ್ಬದ ಸಮಯದಲ್ಲಿ ಸರ್ಕಾರಿ ನೌಕರರಿಗೆ ಭರಜರಿ (Govt Employee) ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರಕಾರಿ ನೌಕರರಿಗೆ ಜುಲೈ 1, 2023 ರಿಂದ ಜಾರಿಗೆ ಬರುವಂತೆ ಡಿಎ ಹೆಚ್ಚಳವಾಗಬೇಕಾಗಿತ್ತು. ಆದ್ರೆ ಈ ಬಾರಿ ಶೇ.3 ರಷ್ಟಿರುವ ಡಿಎ ಹೆಚ್ಚಳವು ಶೇ.45 ಕ್ಕೆ ತಲುಪುವ ಸಾಧ್ಯತೆಯಿದೆ. ಇನ್ನು ಈ ವಾರದ ಆರಂಭದಲ್ಲಿ ಹಿಮಾಚಲ ಪ್ರದೇಶ ಸರಕಾರವು ಜನವರಿ 1, 2022 ರಿಂದ ಅರಣ್ಯ ನಿಗಮದ ಉದ್ಯೋಗಿಗಳಿಗೆ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಿದೆ.

Advertisement

ಇನ್ನು ಕಾರ್ಮಿಕ ಬ್ಯೂರೋ (Labour Bureau) ಪ್ರತೀ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದ ಮೇಲೆ ತುಟ್ಟಿಭತ್ಯೆ ಯನ್ನು ನಿರ್ಧಾರ ಮಾಡಲಾಗುತ್ತದೆ. ಜುಲೈ 2023 ರ ಅಖಿಲ ಭಾರತ CPI-IW 3.3 ಪಾಯಿಂಟ್‌ಗಳಿಗೆ 139.7 ಕ್ಕೆ ಏರಿಕೆ ಆಗಿದೆ. ಈ ಬಾರಿ ಕೇಂದ್ರ ಸರಕಾರ (Central Govt) ಶೇ.3ರಷ್ಟು ಡಿಎ ಹೆಚ್ಚಳ ಮಾಡಿದ್ರೆ ಕೇಂದ್ರ ಸರಕಾರ ನೌಕರರ ವೇತನದಲ್ಲಿ ಬಾರೀ ಏರಿಕೆಯಾಗಲಿದೆ. ಒಂದೊಮ್ಮೆ ಉದ್ಯೋಗಿಗಳ ವೇತನವು 50,000 ರೂ ಆಗಿದ್ದರೆ. ಅವರ ಮೂಲ ವೇತನವು 15,000 ರೂ ಇದ್ದರೆ. ಅವರು ರೂ 6,300 ತುಟ್ಟಿ ಭತ್ಯೆಯಾಗಿ ಪಡೆಯುತ್ತಿದ್ದಾರೆ.

Advertisement

ಒಂದೊಮ್ಮೆ ನಿರೀಕ್ಷೆಯಂತೆ ಶೇ.3ರಷ್ಟು ಹೆಚ್ಚಳವಾದ್ರೆ, ಡಿಎ ತಿಂಗಳಿಗೆ 6,750 ರೂ.ಗೆ ಏರಿಕೆಯಾಗಲಿದೆ. ಪ್ರಸ್ತುತ ಪಡೆಯುತ್ತಿರುವ ವೇತನಕ್ಕೆ ಹೋಲಿಸಿದ್ರೆ 450 ರೂ. ಏರಿಕೆಯಾಗಲಿದೆ. ಸರಕಾರಿ ನೌಕರರಿಗೆ (Govt Employee) ಡಿಎ ಹೆಚ್ಚಳ ಮಾಡಿದ್ರೆ ನಿವೃತ್ತ ನೌಕರರಿಗೆ ಡಿಎಆರ್‌ ನೀಡಲಾಗುತ್ತದೆ. ಡಿಎ (DA) ಮತ್ತು ಡಿಎಆರ್‌ (DAR) ಅನ್ನು ವಾರ್ಷಿಕವಾಗಿ ಎರಡು ಬಾರಿ ಹೆಚ್ಚಳ ಮಾಡಲಾಗುತ್ತದೆ. ಜನವರಿ ಮತ್ತು ಜುಲೈ ಸಾಮಾನ್ಯವಾಗಿ ಡಿಎ ಹೆಚ್ಚಳವಾಗುತ್ತಿದ್ದು, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರು ಶೇ. 42ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

Advertisement

ಕೇಂದ್ರ ಸರಕಾರವು (Central Govt)  ಕಳೆದ ಮಾರ್ಚ್ 2023 ರಲ್ಲಿ ಡಿಎಯನ್ನು ಶೇಕಡಾ 4 ರಿಂದ 42 ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಹಣದುಬ್ಬರದ ಪ್ರಮಾಣವನ್ನು ಗಮನಿಸಿದ್ರೆ ವಿವಿಧ ವರದಿಗಳ ಪ್ರಕಾರ ಡಿಎ ಶೇ3ರಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ತುಟ್ಟಿ ಭತ್ಯೆಯು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (Pensioners) ಹೆಚ್ಚುತ್ತಿರುವ ಹಣದುಬ್ಬರವನ್ನು ಪರಿಹರಿಸಲು ಸಹಾಯ ಮಾಡಲು 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ನೀಡಲಾಗುವ ಅನುದಾನವಾಗಿದೆ. ಈ ಅನುದಾನವು ಸರಕು ಮತ್ತು ಸೇವೆಗಳ ಏರುತ್ತಿರುವ ಬೆಲೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಹಣದುಬ್ಬರದ ನಡುವೆ ಸರ್ಕಾರದ ಈ ಬೆಳವಣಿಗೆ ನೌಕರರಲ್ಲಿ ಸಂತೋಷ ತಂದಿದೆ.

Leave A Reply

Your email address will not be published.