ಜನರಿಗೆ ತಮ್ಮ ಕಷ್ಟಕಾಲದಲ್ಲಿ(Difficult Times) ನೆರವಾಗುವ ಏಕೈಕ ವಸ್ತು ಎಂದರೆ ಅದು ಚಿನ್ನ (Gold). ಆದರೆ ಚಿನ್ನದ ಮೇಲೆ ಹೂಡಿಕೆ (Investment) ಮಾಡುವುದು ಈಗಿನ ಪದ್ಧತಿಯಲ್ಲ ಎಂಬುದು ಆಶ್ಚರ್ಯ ಸಂಗತಿಯೇ ಸರಿ. ಹೌದು ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ (Help) ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ (Indians) ಲೆಕ್ಕಾಚಾರವಾಗಿದ್ದು ಈ ಕಾರಣದಿಂದಾಗಿ ಕೈಯಲ್ಲಿ ಹಣವಿದ್ದಾಗ (Money) ಚಿನ್ನದ ಮೇಲೆ ಹೂಡಿಕೆ (Investment in gold) ಮಾಡುವವರ ಸಂಖ್ಯೆ ಇಂದಿಗೂ ಕೂಡ ಹೆಚ್ಚಾಗುತ್ತಲೆ ಬಂದಿದೆ .
ಇನ್ನು ಚಿನ್ನದ ಮಾರುಕಟ್ಟೆಯಲ್ಲಿ (Gold Market) ಅದರ ಬೆಲೆಯೂ ದಿನದಿಂದ ದಿನಕ್ಕೆ ಹಾವು ಏಣಿ ಆಟದಂತರ ಏರಿಳಿತ ಕಂಡುಕೊಳ್ಳುತ್ತಲೇ ಇರುತ್ತದೆ. ಚಿನ್ನದ ಬೆಲೆಯೂ ಯಾವಾಗ ಕುಸಿಯುತ್ತದೆ ಹಾಗೂ ಯಾವಾಗ ಗಗನಕ್ಕೆ ಏರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದ ಕಾರಣ ಸಾಕಷ್ಟು ಮಂದಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಕಡಿಮೆಯಾದಾಗ ಹೂಡಿಕೆಯನ್ನು ಮಾಡಿ ಬಿಡುತ್ತಾರೆ.
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ.
ಹೌದು ಇಂದು ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದುಬ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಹೆಚ್ಚಳವಾಗಿದೆ. ಇನ್ನು 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 163 ರೂಪಾಯಿ ಜಗಿತ ಕಂಡಿದ್ದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1500 ರೂಪಾಯಿ ಹೆಚ್ಚಳವಾಗಿ 55,300 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ. ಇಂದು ಬೆಂಗಳೂರಿನಲ್ಲಿಯೂ ಕೂಡ ಬಂಗಾರ ಕೊಂಚ ಭಾರವಾಗಿದೆ ಎನ್ನಬಹುದು. ಹೌದು 22 ಕ್ಯಾರಟ್ 1 ಗ್ರಾಂ 8 ಗ್ರಾಂ, 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,535 ರೂಪಾಯಿ 44,280 ರೂಪಾಯಿ ಹಾಗೂ 55,350 ರೂಪಾಯಿ ಆಗಿದೆ.
ಅದೇ ರೀತಿಯಾಗಿ 24 ಕ್ಯಾರಟ್ 1 ಗ್ರಾಂ 8 ಗ್ರಾಂ ಹಾಗೂ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 6037 ರೂಪಾಯಿ 48,296 ರೂಪಾಯಿ 60,370 ರೂಪಾಯಿ ಆಗಿದ್ದು ಚೆನ್ನೈ ಮುಂಬೈ ದೆಹಲಿ ಕೋಲ್ಕತ್ತಾ ಸೇರಿದಂತೆ ಹೈದರಾಬಾದ್ ನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಕ್ರಮವಾಗಿ 55,600 ರೂ 55,300 ರೂ 55,450 ರೂ 55,300 ರೂ 55,300 ರೂಪಾಯಿ ಆಗಿದೆ.
ಇನ್ನು ಅದೇ ರೀತಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಕ್ರಮವಾಗಿ 60,650 ರೂ 60,320 ರೂ 60,470 ರೂ 60,320 ಆಗಿದೆ. ಇನ್ನು ದೇಶದಲ್ಲಿ ಬೆಳ್ಳಿ ಬೆಲೆಯೂ ಕೂಡ ಏರಿಕೆಯಾಗಿದ್ದು 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 23 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆಯಲ್ಲಿ 721 ರೂಪಾಯಿ ಮತ್ತು 1 ಕೆಜಿ ಬೆಳ್ಳಿ ಬೆಲೆ 72,100 ರೂಪಾಯಿ ಆಗಿದೆ.ಸದ್ಯ ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸಲಿದ್ದು ಜಿಎಸ್‍ಟಿ ಟಿಸಿಎಸ್ ಮತ್ತು ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚಿನ ನಿಖರ ಬೆಲೆಗಳಿಗಾಗಿ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸತಕ್ಕದ್ದು.