Karnataka Times
Trending Stories, Viral News, Gossips & Everything in Kannada

BESCOM: ಕೃಷಿಭೂಮಿಯಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಇರುವ ಎಲ್ಲಾ ರೈತರಿಗೂ ಹೊಸ ಸೂಚನೆ, ಸರ್ಕಾರದ ಹೇಳಿಕೆ

advertisement

Electricity Department: ಸದ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಕರೆಂಟ್ ಕಂಬ ಅಥವಾ ಟ್ರಾನ್ಸ್ಫಾರ್ಮರ್(Transformers) ಗಳು ಇದ್ದರೆ ಅದಕ್ಕೆ ಇಂಧನ ಇಲಾಖೆಯಿಂದ ಹೆಚ್ಚಿನ ಪರಿಹಾರ ಹಣ(Compensation Money) ದೊರಕಲಿದೆ,ಈ ಕೂಡಲೇ ವಿದ್ಯುತ್ ಕಚೇರಿಗೆ(Electricity Office) ಭೇಟಿ ನೀಡಿ ಎಂಬ ಮಾಹಿತಿಗಳು ಸದ್ಯ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದರ ಅಸಲಿಯತ್ತೇನು? ಇದಕ್ಕೆಲ್ಲ ಸರ್ಕಾರದಿಂದ ಪರಿಹಾರಧನ ದೊರಕುತ್ತದೆಯೇ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

ವೈರಲ್ ಸುದ್ದಿ

ಸಾಕಷ್ಟು ಆನ್ಲೈನ್ ಪ್ಲಾಟ್ಫಾರ್ಮ್(Online Platform) ಗಳಲ್ಲಿ ಈ ಸುದ್ದಿ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡುತ್ತಿದ್ದು, ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ ಗಳನ್ನು ಇಂಧನ ಇಲಾಖೆಯವರು ಅಳವಡಿಸಿದ್ದರೆ ಅಂತಹ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ ಹಾಗೂ ಗೃಹ ಬಳಕೆದಾರರು ಅದರಿಂದ 2000- 5000 ಯೂನಿಟ್ ವಿದ್ಯುತ್( Unit Electricity) ಅನ್ನು ಬಳಸಬಹುದು. ಜೊತೆಗೆ ಸರ್ಕಾರದ ವತಿಯಿಂದ ಇದಕ್ಕೆ 5000 ಪರಿಹಾರ ಧನವನ್ನು ನೀಡಲಾಗುತ್ತದೆ ಎಂಬ ಮಾಹಿತಿ ವೈರಲ್ ಆಗುತ್ತಿದೆ.

Image Source: Alamy

advertisement

ಬೆಸ್ಕಾಂ ಅಧಿಕಾರಿಗಳ ಪ್ರತಿಕ್ರಿಯೆ

ಎಲ್ಲೆಡೆ ಈ ಸುದ್ದಿ ವೈರಲ್ ಆಗಲು ಪ್ರಾರಂಭವಾದ ತಕ್ಷಣ ಎಕ್ಸ್ ನಲ್ಲಿ ಬೆಸ್ಕಾಂ ಅಧಿಕಾರಿಗಳು ರೈತರ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫಾರ್ಮರ್ ಗಳ ಇರುವಿಕೆಗೆ 5000 ಪರಿಹಾರ ಧನ ನೀಡಲಿದ್ದೇವೆ ಎಂಬುದು ದೂರದ ಮಾತು. ಸುಳ್ಳು ಸುದ್ದಿಗಳತ್ತ ಕಿವಿಗೊಡಬೇಡಿ ಎಂದಿದ್ದಾರೆ. ಜೊತೆಗೆ ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಅಳವಡಿಸಿಕೊಂಡಿದ್ದಾರೆ ಸರ್ಕಾರ ಅಂತಹ ರೈತರಿಗೆ ಪ್ರತಿದಿನ ರೂ. 50 ಪರಿಹಾರಗಳ ನೀಡಲಿದೆ. ಹಾಗೂ 2000-500೦ ಯೂನಿಟ್ ವಿದ್ಯುತ್ಗಳನ್ನು ಉಚಿತವಾಗಿ ಬಳಸಬಹುದೆಂಬ ಯಾವುದೇ ಗಾಳಿ ಸುದ್ದಿಯನ್ನು ನಂಬಿ ನಕಲಿ ವೆಬ್ಸೈಟ್ಗಳಲ್ಲಿ(fake websites) ಅರ್ಜಿ ಸಲ್ಲಿಸಿ ನಿಮ್ಮ ಹಣವನ್ನು ಕಳೆದುಕೊಳ್ಳಬೇಡಿ ಎಂಬ ಎಚ್ಚರಿಕೆಯನ್ನು ಬೆಸ್ಕಾಂ ಅಧಿಕಾರಿಗಳು ರೈತರಿಗೆ ನೀಡಿದ್ದಾರೆ.

“ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದ ಕೂಡಿದೆ ಇಂತಹ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರ ಅಥವಾ ಇಂಧನ ಇಲಾಖೆ, ಕೆಪಿಟಿಸಿಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂ ಗಳು ಈ ರೀತಿಯ ಪ್ರಕಟಣೆಯನ್ನು ಹೊರಡಿಸಿಲ್ಲ. ಸಾರ್ವಜನಿಕರಿಂದ ಸುಳ್ಳು ಮಾಹಿತಿಯನ್ನು ಕಡೆಗಣಿಸಬೇಕಾಗಿ ವಿನಂತಿ! ಇಂತಹ ಗಾಳಿ ಸುದ್ದಿಗಳನ್ನು ನಂಬದಿರಿ ಹಾಗೂ ಯಾವುದೇ ಗೊಂದಲಗಳಿದ್ದಲ್ಲಿ ನಮ್ಮ 24×7 ಸಹಾಯವಾಣಿ 1912 ಗೆ ಕರೆ ಮಾಡಿ” ಎಂಬ ಮಾಹಿತಿಯನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Transformers in agricultural land in karnataka

advertisement

Leave A Reply

Your email address will not be published.