Labour Card Benefits: ಕಾರ್ಮಿಕ ಕಾರ್ಡ್ ಇದ್ದರೆ ಸಿಗಲಿದೆ 20000 ರೂ, ಇಲ್ಲಿದೆ ಪಡೆಯುವ ವಿಧಾನ
ಸದ್ಯ ಕಾರ್ಮಿಕ ಕಾರ್ಡ್ (LaborCard) ಇದ್ದವರಿಗಾಗಿ ಎರಡು ಸ್ಕೀಮ್ ಗಳ ಅರ್ಜಿಯನ್ನು (Application) ಇದೀಗ ಆಹ್ವಾನಿಸಲಾಗಿದ್ದು ನೊಂದಾಯಿತ ಕಾರ್ಮಿಕರ ಆರೋಗ್ಯದ (Health of registered workers)ಹಿತ ದೃಷ್ಟಿಯಿಂದಾಗಿ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ(Labor Welfare Board)ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎನ್ನಲಾಗಿದೆ.
ಕಾರ್ಮಿಕರ ಚಿಕಿತ್ಸಾ ಭಾಗ್ಯ(Treatment fate of workers):
ಸದ್ಯ ಈ ಸ್ಕೀಮ್ ನ ಅಡಿಯಲ್ಲಿ ಹೃದ್ರೋಗ ಕಿಡ್ನಿ ಜೋಡಣೆ ಕಾನ್ಸರ್ ಶಸ್ತ್ರಚಿಕಿತ್ಸೆ ಕಣ್ಣಿನ ಶಸ್ತ್ರಚಿಕಿತ್ಸೆ ಸೇರಿದಂತೆ ಈ ರೀತಿಯ ಅನೇಕ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ 2,00,000 ರೂಪಾಯಿಗಳವರೆಗೆ ಸಹಾಯ ಧನವನ್ನು ನೀಡಲಾಗುತ್ತದೆ.
ಕಾರ್ಮಿಕರ ಆರೋಗ್ಯ ಭಾಗ್ಯ :
ಇನ್ನು ಈ ಸ್ಕೀಮ್ ನ ಅಡಿಯಲ್ಲಿ ನೊಂದಾಯಿತ ಫಲಾನುಭವಿಗಳಿಗೆ ಹಾಗೂ ಅವರ ಅವಲಂಬಿತರಿಗೆ ಕನಿಷ್ಠ 300 ರೂಪಾಯಿಗಳಿಂದ ಗರಿಷ್ಠ 20,000 ರೂಪಾಯಿಗಳವರೆಗೆ ಕೂಡ ಸಹಾಯ ಧನವನ್ನು ನೀಡಲಾಗುವುದು.ಈ ರೀತಿಯಾಗಿ ಕಾರ್ಮಿಕ ಕಾರ್ಡ್ ಇದ್ದವರು ಮೇಲಿನ ಎರಡು ಸ್ಕೀಮ್ ಗಳ ಪ್ರಯೋಜನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕಾಗಿದ್ದು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹಾಗೂ ಅಗತ್ಯ ಡಾಕ್ಯುಮೆಂಟ್ಸ್ ಗಳನ್ನು ಹೊಂದಿರಬೇಕು.
ಇನ್ನು ವೊದಲನೇಯದಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತರಾಗಿರಬೇಕಿದ್ದು ನೊಂದಣಿ ಚಾಲ್ತಿಯಲ್ಲಿರಬೇಕಾಗುತ್ತದೆ. ಫಲಾನುಭವಿಗಳು ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಮಾಣಪತ್ರವನ್ನು ಲಗತ್ತಿಸಬೇಕಿದ್ದು ಕನಿಷ್ಠ ಅಂದರು 2 ದಿನಗಳ ಕಾಲ ಒಳರೋಗಿ(Admitted) ಆಗಿರುವ ಬಗ್ಗೆ ದಾಖಲೆ ನೀಡಬೇಕು.
ಇನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವು ಕೂಡ ಆರು ತಿಂಗಳ ಕಾಲ ಅರ್ಜಿಯನ್ನು ಸಲ್ಲಿಸಲು ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿಯಲ್ಲಿ ಅವಕಾಶ ಇರಲಿದ್ದು ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಿನಾಂಕದಿಂದ ಆರು ತಿಂಗಳ ಅವದಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಅವಕಾಶ ಕೂಡ ನೀಡಲಾಗಿದೆ.
ಇನ್ನು ಅರ್ಜಿ ಸಲ್ಲಿಸುವ ಮುನ್ನ ಅವಶ್ಯಕವಾಗಿ ಹೊಂದಿರಬೇಕಾದ ದಾಖಲೆಗಳೆಮ ಬಗ್ಗೆ ನೋಡುವುದಾದರೆ ಮಂಡಳಿಯಿಂದ ನೀಡಲಾದ ನೊಂದಣಿ ಇಲ್ಲವೇ ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕು. ನಂತೆ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪೇಜ್ ನ ಪ್ರತಿಯನ್ನು ಹೊಂದಿರಬೇಕು. ಉದ್ಯೋಗ ಅಥವಾ ಸ್ವಯಂ ಧೃಡಿಕರಣ ಪತ್ರವನ್ನು ಹೊಂದಿರಬೇಕಿದ್ದು ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕದೊಂದಿಗೆ ಚಿಕಿತ್ಸಾ ವಿವರಗಳನ್ನು ಒಳಗೊಂಡ ದಾಖಲಾತಿಯ ಅವಶ್ಯಕತೆ ಇದೆ. ಇನ್ಜು ಬಿಡುಗಡೆ ಪ್ರಮಾಣ ಪತ್ರ (discharge) ಬೇಕಾಗುತ್ತದೆ.
ಅಲ್ಲದೇ ಕಾರ್ಮಿಕ ಚಿಕಿತ್ಸಾ ಭಾಗ್ಯ ಸ್ಕೀಮ್ ನ ಪ್ರಯೋಜನ ಪಡೆಯಲು ನಮೂನೆ 22ಎ ರಲ್ಲಿ ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿಯನ್ನು ಇಟ್ಟುಕೊಂಡಿರಬೇಕಿದ್ದು ಈ ದಾಖಲೆಯನ್ನು ವೈದ್ಯರ ಸಹಾಯದಿಂದ ಪಡೆಯಬೇಕು.ಈ ರೀತಿಯ ಎಲ್ಲಾ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿದವರು ಮೇಲಿನ ಸ್ಕೀಮ್ ಗಳ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.