Karnataka Times
Trending Stories, Viral News, Gossips & Everything in Kannada

Aadhar Card New Rules: ವ್ಯಕ್ತಿ ಮೃತಪಟ್ಟ ನಂತರ ಆಧಾರ್ ಕಾರ್ಡ್ ಏನಾಗಲಿದೆ? ಇಲ್ಲಿದೆ ಹೊಸ ನಿಯಮ

Advertisement

ಇಂದು ನಾವು ಯಾವುದೇ ವ್ಯವಹಾರ ಮಾಡುವುದಾದರೂ ಅದಕ್ಕೆ ಆಧಾರ್ ಕಾರ್ಡ್ ಬೇಕೇ ಬೇಕು. ಭಾರತೀಯ ನಾಗರಿಕನ ಗುರುತಿನ ಆಧಾರಕ್ಕೆ ಆಧಾರ್ ಕಾರ್ಡ್(Aadhar Card) ಬಳಸಲಾಗುತ್ತದೆ. ಬ್ಯಾಂಕಿಂಗ್(Banking) ವ್ಯವಹಾರ ಇರಬಹುದು ಅಥವಾ ಬೇರೆ ಯಾವುದೇ ಹಣಕಾಸಿನ ವ್ಯವಹಾರ ಇದ್ದರೂ ಆಧಾರ್ ಕಾರ್ಡ್ ಅತ್ಯವಶ್ಯಕ. ಇನ್ನು ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ ಆತನ ಆಧಾರ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ. ಇದಕ್ಕಾಗಿ ಸರ್ಕಾರ ಒಂದು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ಆ ಆಧಾರ್ ಕಾರ್ಡ್ ದುರುಪಯೋಗದಂತೆ ಯೋಜನೆ ರೂಪಿಸಲಿದೆ.

ಸಾಕಷ್ಟು ಬಾರಿ ವ್ಯಕ್ತಿಯ ಮರಣದ ನಂತರವೂ ಅವರ ಆಧಾರ್ ಕಾರ್ಡ್ ಮೂಲಕ ಪಿಂಚಣಿ ಹಾಗೂ ಇತ್ಯಾದಿ ಸರ್ಕಾರಿ ಪ್ರಯೋಜನ ಪಡೆದಿರುವ ಘಟನೆಗಳು ನಡೆದಿದೆ. ಯುಐಡಿಎಐ(UIDAI) ಹಾಗೂ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಎರಡು ಸಂಸ್ಥೆ ಸೇರಿ ದೇಶದಲ್ಲಿ ಜನನ ಮತ್ತು ಮರಣದ ದಾಖಲೆಗಳನ್ನು ಸಂಗ್ರಹಿಸಲಿದೆ.

ಈ ಮೂಲಕ ಮರಣ ಪ್ರಮಾಣ ಪತ್ರ ನೀಡಿದ ತಕ್ಷಣ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಅಂದರೆ ಆ ಆಧಾರ್ ಸಂಖ್ಯೆಯನ್ನು ಯಾರು ಮತ್ತೆ ಬಳಸುವಂತಿಲ್ಲ. ಮರಣ ಪ್ರಮಾಣ ಪತ್ರ ಮಾಡಿಸಲು ಆಧಾರ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ಆಧಾರ್ ಕಾರ್ಡನ್ನು ನೀಡುವ ಯುಐಡಿಎಐ ಎಲ್ಲ ರಾಜ್ಯಗಳಲ್ಲಿಯೂ ಈ ಯೋಜನೆಯನ್ನು ಜಾರಿಗೆ ತರಲಿದೆ ಇದುವರೆಗೆ 20 ರಾಜ್ಯಗಳಲ್ಲಿ ಈ ವ್ಯವಸ್ಥೆ ಆರಂಭವಾಗಿದ್ದು ಉಳಿದ ರಾಜ್ಯಗಳಿಗೂ ಕೂಡ ಮುಂದಿನ ದಿನಗಳಲ್ಲಿ ಈ ನಿಯಮ ಅನ್ವಯವಾಗಲಿದೆ.ಇದು ಆಧಾರ್ 2.0 ಸೌಲಭ್ಯದ ಭಾಗವಾಗಿದ್ದು ಈಗಾಗಲೇ ಯುಐಡಿಎಐ 10 ವರ್ಷದ ಹಿಂದೆ ಮಾಡಲಾಗಿದ್ದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ಜನರಿಗೆ ಈಗಾಗಲೇ ನಿರ್ದೇಶನ ನೀಡಿದೆ.

Leave A Reply

Your email address will not be published.