ಗಣೇಶ ಚತುರ್ಥಿ(Ganesha Chaturthi) ಹಬ್ಬದ ಸೀಸನ್ ಮುಗಿಯುತ್ತಿದ್ದಂತೆಯೇ, ಮುಂದಿನ ದಸರಾ ಹಬ್ಬ ಹಾಗೂ ದೀಪಾವಳಿಗೆ ರಜೆ ಕಾದಿರಿಸುವವರ ಭರಾಟೆ ಜೋರಾಗಿದೆ. ಹಬ್ಬಗಳ ಸೀಸನ್ನಲ್ಲಿ ಊರಿಗೆ ತೆರಳಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಉದ್ಯೋಗಿಗಳು, ವ್ಯಾಪಾರಸ್ಥರು ಮುಂತಾದವರು, ಮುಂಗಡವಾಗಿ ಟಿಕೆಟ್ ಕಾದಿರಿಸಲು ಈಗಾಗಲೇ ಮುಗಿಬೀಳುತ್ತಿದ್ದಾರೆ. ಈ ನಡುವೆ ದಸರಾ ಹಾಗೂ ದೀಪಾವಳಿಗೆ ಟಿಕೆಟ್ ಕಾದಿರಿಸುವವರಿಗೆ ರೈಲ್ವೆ ಇಲಾಖೆ (Indian Railways) ಗುಡ್ ನ್ಯೂಸ್ ನೀಡಿದೆ.
ಹೌದು. ಈಗಾಗಲೇ ಮುಗಿದ ಗಣೇಶ ಹಬ್ಬ, ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಸಾಲು ಸಾಲು ರಜೆಗಳಿರುವ ಕಾರಣಕ್ಕೆ ಊರಿಗೆ ಹೋಗಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಿಸಿ ಬರುವವರ ಸಂಖ್ಯೆ ಹೆಚ್ಚು. ಅದಕ್ಕಾಗಿಯೇ ಹೆಚ್ಚಿನವರು ತಿಂಗಳುಗಳ ಮುಂಚೆಯೇ ಬಸ್, ರೈಲು ಟಿಕೆಟ್ ಕಾಯ್ದಿರಿಸಿಕೊಳ್ಳುತ್ತಿದ್ದು, ಅಂತಹವರಿಗಾಗಿ ರೈಲ್ವೆ ಇಲಾಖೆ (Indian Railways) ಹೊಸ ವಿಶೇಷ ಟ್ರೈನ್ (Special Trains) ಗಳನ್ನು ಬಿಡುವ ಮೂಲಕ ಸಂತಸ ನೀಡಿದೆ.
ರೈಲ್ವೆ ಇಲಾಖೆಯು, ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಈ ಸೀಸನ್ಗಳಿಗಾಗಿ ಒಟ್ಟು 20 ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದ್ದು, ಊರಿಗೆ ತೆರಳುವವರಿಗೆ ಟಿಕೆಟ್ ಬುಕಿಂಗ್ಗಾಗಿ ಹೆಚ್ಚು ರೈಲುಗಳ ಸೌಲಭ್ಯ ನೀಡಿದೆ. ಯಾವೆಲ್ಲಾ ಮಾರ್ಗಗಳಿಂದ ವಿಶೇಷ ರೈಲುಗಳಿವೆ ಹಾಗೂ ರೈಲಿನ ವೇಳಾಪಟ್ಟಿ (Train Schedule) ಹೇಗಿದೆ ಎನ್ನುವುದನ್ನು ಹೇಳ್ತೀವಿ ನೋಡಿ.
Indian Railways: ದಸರಾ ಹಬ್ಬಕ್ಕೆ (Dasara Festival) ಯಾವೆಲ್ಲಾ ವಿಶೇಷ ರೈಲು?
ಅಕ್ಟೋಬರ್ 09 ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಅಥವಾ ನವರಾತ್ರಿಗೆ ರೈಲ್ವೆ ಇಲಾಖೆ (Indian Railways) ವಿಶೇಷ ರೈಲು ಸೌಲಭ್ಯ ನೀಡಿದ್ದು, ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಮೈಸೂರು, ಚಾಮರಾಜನಗರ ಸ್ಥಳಗಳಿಗೆ ವಿಶೇಷ ರೈಲು ಸೌಲಭ್ಯ ನೀಡಲಾಗಿದೆ. ಅದರ ವಿವರ ಈ ಕೆಳಗಿನಂತಿದೆ:
- ಅಕ್ಟೋಬರ್ 09 ಮತ್ತು 12 – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ವಿಜಯಪುರ ಮಾರ್ಗ
- ಅಕ್ಟೋಬರ್ 10 ಮತ್ತು 13 ರಂದು ವಿಜಯಪುರದಿಂದ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ಗೆ
- ಅಕ್ಟೋಬರ್ 09 ಮತ್ತು 12 ರಂದು ಯಶವಂತಪುರದಿಂದ ಬೆಳಗಾವಿ ಮಾರ್ಗ
- ಅಕ್ಟೋಬರ್ 10 ಮತ್ತು 13 ರಂದು ಬೆಳಗಾವಿಯಿಂದ ಯಶವಂತಪುರಕ್ಕೆ
- ಅಕ್ಟೋಬರ್ 09 ರಿಂದ 13 ರವರೆಗೆ ಮೈಸೂರಿನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು (KSR Bengaluru)
- ಅಕ್ಟೋಬರ್ 10 ರಿಂದ 14 ರವರೆಗೆ ಬೆಂಗಳೂರಿನಿಂದ ಮೈಸೂರು
- ಅಕ್ಟೋಬರ್ 09 ರಿಂದ 14 ರವರೆಗೆ ಚಾಮರಾಜನಗರ – ಮೈಸೂರು
- ಅಕ್ಟೋಬರ್ 10 ರಿಂದ 14 ರವರೆಗೆ ಮೈಸೂರಿನಿಂದ ಚಾಮರಾಜನಗರ
ದೀಪಾವಳಿ ಹಬ್ಬಕ್ಕೆ ಯಾವೆಲ್ಲಾ ಮಾರ್ಗಕ್ಕೆ ವಿಶೇಷ ರೈಲು?
ಅಕ್ಟೋಬರ್ 30 ರಿಂದ ಆರಂಭವಾಗಲಿರುವ ಬೆಳಕಿನ ದೀಪಾವಳಿಗೆ ಕೂಡ ರೈಲ್ವೆ ಇಲಾಖೆ (Indian Railways) ವಿಶೇಷ ರೈಲುಗಳ ಸೌಲಭ್ಯ ನೀಡಿದ್ದು ಅವುಗಳ ಮಾರ್ಗದ ವಿವರ ಇಂತಿದೆ.
-
- ಅಕ್ಟೋಬರ್ 30 ಮತ್ತು ನವೆಂಬರ್ 02 ರಂದು ಮೈಸೂರು – ವಿಜಯಪುರ
- ಅಕ್ಟೋಬರ್ 31 ಮತ್ತು ನವೆಂಬರ್ 03 ರಂದು ವಿಜಯಪುರ – ಮೈಸೂರು
- ಅಕ್ಟೋಬರ್ 30 ಮತ್ತು ನವೆಂಬರ್ 01 ರಂದು ಯಶವಂತಪುರದಿಂದ ಬೆಳಗಾವಿ
- ಅಕ್ಟೋಬರ್ 31 ಮತ್ತು ನವೆಂಬರ್ 03 ರಂದು ಬೆಳಗಾವಿ – ಯಶವಂತಪುರ
ಈ ವಿಶೇಷ ರೈಲುಗಳು ಹಾಗೂ ದೈನಂದಿನ ಸಾಮಾನ್ಯ ರೈಲುಗಳ ವೇಳಾಪಟ್ಟಿ ಹಾಗೂ ಇತರ ಎಲ್ಲಾ ವಿವರಗಳಿಗಾಗಿ ರೈಲ್ವೆ ಇಲಾಖೆ (Indian Railways) ಯ ಅಧಿಕೃತ ವೆಬ್ಸೈಟ್ https://enquiry.indianrail.gov.in/ ಅಥವಾ IRCTC ಅಧಿಕೃತ ಮೊಬೈಲ್ ಆ್ಯಪ್ ಬಳಸಿ ಮಾಹಿತಿ ಪಡೆಯಬಹುದು.
ಸಾಲು ಸಾಲು ರಜೆಗಳಿರೋದ್ರಿಂದ ತಮ್ಮ ತಮ್ಮ ಊರಿಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿಕೊಳ್ಳುವವರು ಸಂಭ್ರಮದ ಜೊತೆ ಸುರಕ್ಷತೆಗೂ ಆದ್ಯತೆ ನೀಡಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ.