Taj Mahal: ತಾಜ್ ಮಹಲ್ 22 ಮುಚ್ಚಿದ ಕೋಣೆಗಳಲ್ಲಿ ಏನಿದೆ ಗೊತ್ತಾ? ತಾಜ್ ಮಹಲ್ ನಿರ್ಮಿಸಿದ ಕುಶಲಕರ್ಮಿಯ ವಂಶಸ್ಥರು ಬಹಿರಂಗಪಡಿಸಿದ ಬಿಗ್ ಸೀಕ್ರೆಟ್!
ತಾಜ್ ಮಹಲ್ (Taj Mahal) ಎನ್ನುವ ಕಟ್ಟಡ ದೇಶಕ್ಕೆ ದೊಡ್ಡ ಹೆಮ್ಮೆ ತಾಜ್ ಮಹಲ್ ನಿರ್ಮಿಸಿದ ಹಿಂದೆಯೂ ಸಾಕಷ್ಟು ಐತಿಹಾಸಿಕ ಕಥೆಗಳು ಪುರಾವೆಗಳು ಇವೆ. ಇನ್ನು ತಾಜ್ ಮಹಲ್ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ತಾಜ್ ಮಹಲ್ ನಲ್ಲಿ 22 ಕೋಣೆಗಳ ಬಾಗಿಲು ಮುಚ್ಚಿದೆ ಯಾಕೆ ಎಂಬುದರ ಬಗ್ಗೆ ಹಲವರಿಗೆ ಕುತೂಹಲ ಇದೆ. ಇದೀಗ ತಾಜಮಹಲ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಕುಶಲ ಕರ್ಮಿಗಳ ವಂಶಸ್ಥರು 22 ಬಾಗಿಲುಗಳು ಮುಚ್ಚಿರುವುದರ ಹಿಂದಿನ ಸೀಕ್ರೆಟ್ ಹೇಳಿದ್ದಾರೆ.
ತಾಜ್ ಮಹಲ್ ನಲ್ಲಿ 22 ಕೋಣೆಗಳ ರಹಸ್ಯಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ವಿವಾದಗಳು ತಲೆಯೆತ್ತಿವೆ. ಆ ಮುಚ್ಚಿದ 22 ಕೊಠಡಿಗಳಲ್ಲಿ ಏನಿರಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಇದೀಗ ಆಗ್ರದಲ್ಲಿ ವಾಸಿಸುತ್ತಿರುವ ತಾಜ್ ಮಹಲ್ ಕೆತ್ತಿದ ಅನೇಕ ಕುಶಲಕರ್ಮಿಗಳ ವಂಶಸ್ಥರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕುಶಲಕರ್ಮಿಗಳ ವಂಶಸ್ಥರು ಹೇಳಿದ್ದೇನು?
ತಾಜ್ ಮಹಲ್ ನಲ್ಲಿ ಇರುವ ಸೀಕ್ರೆಟ್ ಬಗ್ಗೆ ಹಾಜಿ ತಾಹಿರುದ್ದೀನ್ ಎನ್ನುವವರು ಸುದ್ದಿ ವಾಹಿನಿ ಯೊಂದಿಗೆ ಮಾತನಾಡಿದ್ದಾರೆ. ಇವರು ತಾಜ್ ಮಹಲ್ ನಿರ್ಮಾಣದಲ್ಲಿ ಇದ್ದ ಕುಶಲಕರ್ಮಿಯ ವಂಶಸ್ಥರು ಎಂದು ಹೇಳಲಾಗಿದೆ. ಹಾಜಿ ತಾಹಿರುದ್ದೀನ್ ಕಲ್ಲಿನ ಕೆತ್ತನೆ ಕೆಲಸವನ್ನು ಮಾಡುತ್ತಾರೆ. ತಾಹಿರುದ್ದ ತಾಜ್ ಮಹಲ್ ನಲ್ಲಿ ಗೈಡ್ ಆಗಿಯೂ ಕೆಲಸ ಮಾಡಿದ್ದಾರೆ ತಾಜ್ ಮಹಲ್ ಗೆ ಸಂಬಂಧಪಟ್ಟ ಹಲವಾರು ರಹಸ್ಯಗಳು ಅವರಿಗೆ ತಿಳಿದಿದೆ.
Taj Mahal ನ 22 ಕೊಠಡಿಗಳಲ್ಲಿ ಏನಿದೆ ಗೊತ್ತಾ?
ಹಾಜಿ ತಾಹಿರುದ್ದೀನ್ ಹೇಳುವಂತೆ ಸಮಾಧಿಯ ಕೆಳಗೆ ತಾಜ್ ಮಹಲ್ ನ 20 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕೊಠಡಿಗಳ ಮೇಲ್ವಿಚಾರಣೆ ಎ ಎಸ್ ಐ ನವರು ಮಾಡುತ್ತಾರೆ. ಈ ಕೊಠಡಿಗಳನ್ನು ಬೂಟ್ ಗಳನ್ನು ಇಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತೆ. ಆದರೆ ಈಗ ಎ ಎಸ್ ಐ ಇದನ್ನು ತನ್ನ ಶೇಖರಣೆಗಾಗಿ ಬಳಸಿಕೊಂಡಿದೆ. ಹೆಚ್ಚುತ್ತಿರುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾಗಿಲುಗಳನ್ನು ಮುಚ್ಚುವಂತಹ ನಿರ್ಧಾರ ಕೈಗೊಳ್ಳಲಾಗಿದೆ ಆದರೆ ಕಾಲಕಾಲಕ್ಕೆ ಅದನ್ನ ಸ್ವಚ್ಛಗೊಳಿಸಲಾಗುತ್ತದೆ ಎಂದು ಹಾಜಿ ತಿಳಿಸಿದ್ದಾರೆ.
Taj Mahal ಬಾವಿ ಮೇಲೆ ನಿರ್ಮಿಸಲಾಗಿದೆಯಾ?
ತಾಜ್ ಮಹಲ್ ಎನ್ನುವ ಐತಿಹಾಸಿಕ ಕಟ್ಟಡವನ್ನು ಬಾವಿಗಳ ಮೇಲೆ ನಿರ್ಮಾಣ ಮಾಡಲಾಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ತಾಹಿರುದ್ದೀನ್ ಇದು ಸತ್ಯ ಎಂದು ಹೇಳಿದ್ದಾರೆ. ಅಮೃತ ಶಿಲೆಗಳನ್ನು ತಂಪಾಗಿಡುವುದಕ್ಕಾ ಬಾವಿಯ ಮೇಲೆ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಾವಿಗಳು ಎಂದಿಗೂ ಉಕ್ಕಿ ಹರಿಯುವುದಿಲ್ಲ ಯಮುನೆಗೆ ಇದು ಸಂಬಂಧಿಸಿದೆ. ಇನ್ನು ಅಮೃತ ಶಿಲೆಗೆ ಬಳಸಲಾದ ಸುಣ್ಣವೂ ಕೂಡ ಅದರ ಹಿಡಿತವನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ತಾಹಿರುದ್ದೀನ್ ತಿಳಿಸಿದ್ದಾರೆ.
Taj Mahal ನಲ್ಲಿ ಕುಶಲಕರ್ಮಿಗಳ ಕೈಗಳನ್ನು ಕತ್ತರಿಸಲಾಗಿತ್ತಾ?
ತಾಜ್ ಮಹಲ್ ಕಟ್ಟಡದ ಸುತ್ತ ಸಾಕಷ್ಟು ಊಹಾಪೋಹಗಳು ಹಬ್ಬಿಕೊಂಡಿವೆ. ಅದರಲ್ಲಿ ತಾಜ್ ಮಹಲ್ ಕಟ್ಟಿದವರ ಕೈಗಳನ್ನು ಕತ್ತರಿಸಲಾಗಿತ್ತು ಎಂದು ಕೆಲವು ವದಂತಿಗಳು ಇವೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಹಿರುದಿನ್ ಈ ಮಾತಿನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದಾರೆ.
Taj Mahal ನಲ್ಲಿ ಹಿಂದೂ ಚಿಹ್ನೆಗಳು ಇವೆಯಾ?
ಡಾ. ಭಾನು ಪ್ರತಾಪ್ ಸಿಂಗ್ ತಾಜ್ ಮಹಲ್ ನ ಕೆಲವು ಸ್ಥಳಗಳಲ್ಲಿ ಹಿಂದೂ ಚಿಹ್ನೆಗಳು ಇವೆ ಎಂದು ಹೇಳಿದ್ದರು. ತಾಜ್ ಮಹಲ್ ಅನ್ನು ಪ್ರದಕ್ಷಿಣೆ ಮಾಡಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಇಂತಹ ಮಾರ್ಗಗಳು ದೇವಾಲಯಗಳಲ್ಲಿ ಮಾತ್ರ ಕಂಡುಬರುತ್ತವೆ. ತಾಜ್ ಮಹಲ್ ನಲ್ಲಿ ರಾಮ್, ಮೋಹನ್ ಎನ್ನುವ ಹೆಸರುಗಳು ಕೆತ್ತಲಾಗಿದೆ ಎಂದು ಹೇಳಿದ್ದರು.