ಅದೃಷ್ಟ ಒಂದಿದ್ದರೆ ಎಂತವರಿಗಾದರೂ ಲಾಟರಿ (Lottery) ಹೊಡೆಯಬಹುದು ಎನ್ನುವುದಕ್ಕೆ ಹಲವು ಉದಾಹರಣಾ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಅದೃಷ್ಟವಿದ್ದರೆ ನೇರವಾಗಿ ಬಾಗಿಲು ತೆರೆದು ಮನೆಯೊಳಗೆ ಬರುತ್ತಾಳೆ ಲಕ್ಷ್ಮಿ ಎಂದು ಹೇಳಲಾಗುತ್ತದೆ. ಹೀಗೆ ಹಲವರು ಲಾಟರಿ ಹಣ ಗಳಿಸಿ ಲಾಟ್ರಿ ಹೊಡೆದವರಿದ್ದಾರೆ. ಥಾಯ್ಲೆಂಡ್ ನ ಮಹಿಳೆಯೊಬ್ಬಳು ತನಗೆ ಹೊಡೆದ ಮೂರು ಕೋಟಿ ಹಣವನ್ನು ಎತ್ತಿಕೊಂಡು ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ಸುದ್ದಿ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದೆ.
ಈ ಘಟನೆ ದಾಖಲಾಗಿರುವುದು ಥೈಲ್ಯಾಂಡ್ ನಲ್ಲಿ. ಥೈಲ್ಯಾಂಡ್ (Thailand) ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿನ ನರಿನ್ ಎಂಬ ವ್ಯಕ್ತಿ ತನ್ನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದು ಕೇಸ್ (Case) ಬಗ್ಗೆ ಮಾಹಿತಿ ಸಂಗ್ರಹಿಸಿದ ಪೋಲಿಸರಿಗೇ ಶಾಕ್ ಆಗಿದೆ. ಏಕೆಂದರೆ ಕಂಪ್ಲೆಂಟ್ (Compliant) ನೀಡಿದ ವ್ಯಕ್ತಿಯ ಪತ್ನಿ ತನಗೆ ಲಾಟರಿ ಹೊಡೆದ ಮೂರು ಕೋಟಿ ಲಾಟರಿ (Three Crore Lottery) ಹಣವನ್ನು ತೆಗೆದುಕೊಂಡು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಆ ಲಾಟರಿಯಲ್ಲಿ ತನಗೂ ಪಾಲು ಇದೆ ಅದನ್ನು ಕೊಡದೇ ಓಡಿಹೋಗಿದ್ದಾಳೆ ಎನ್ನುವುದು ಅವರ ಅವರ ಆರೋಪ.
ನರಿನ್ ಎನ್ನುವ ವ್ಯಕ್ತಿ ದಕ್ಷಿಣ ಕೊರಿಯಾದಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಥೈಲ್ಯಾಂಡ್‌ನಲ್ಲಿ (Thailand) ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದಳು. ನರಿನ್ ತನ್ನ ಕುಟುಂಬಕ್ಕಾಗಿ ಪ್ರತಿ ತಿಂಗಳು ಹಣವನ್ನು ಕಳುಹಿಸುತ್ತಿದ್ದರು. ಇತ್ತೀಚಿಗೆ ನರಿನ್ ಅವರ ಪತ್ನಿ 2.9 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಳು. ಆದರೆ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದು, ಹಣದ ಜೊತೆ ಆತನೊಂದಿಗೆ ಪರಾರಿಯಾಗಿದ್ದಾಳೆ.
ಈ ವಿಷಯ ಆಕೆಯ ಪತಿಗೆ ತಿಳಿದಾಗ ಆಶ್ಚರ್ಯ, ಆತಂಕ ಎಲ್ಲವೂ ಆಗಿದೆ. ಇಬ್ಬರು ಪುಟ್ಟ ಮಕ್ಕಳನ್ನೂ ಬಿಟ್ಟು ಆಕೆ ಓಡಿ ಹೋಗಿದ್ದಾಳೆ. ನನ್ನ ಹೆಂಡತಿ ನನಗೆ ಹೀಗೆ ಮೋಸ ಮಾಡುತ್ತಾಳೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಹೇಳುವ ನರಿನ್ ಸದ್ಯ ಹೆಂಡತಿ ಹಾಗೂ ಹಣವನ್ನು ಪತ್ತೆಹಚ್ಚಿಕೊಡಬೇಕು ಎಂದು ಪೋಲಿಸರಲ್ಲಿ ದೂರು ನೀಡಿದ್ದಾರೆ. ಪರಾರಿಯಾದ ನರಿನ್ ಪತ್ನಿ ಹಾಗೂ ಆಕೆಯ ಪ್ರಿಯಕರನಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.