ಭಾರತ ದೇಶ ಜನಸಂಖ್ಯೆ ವಿಚಾರಕ್ಕೆ ಬಂದ್ರೆ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರೋ ದೇಶ. ಹೀಗಾಗಿ ಯಾವುದೇ ವಸ್ತುವಿಗೂ ಕೂಡ ಭಾರತ ದೇಶ ಯಾವುದೇ ಅನುಮಾನವಿಲ್ಲದೆ ದೊಡ್ಡ ಮಟ್ಟದ ಮಾರುಕಟ್ಟೆ ಅಂತ ಹೇಳ್ಬೋದು. ಅದ್ರಲ್ಲೂ ವಿಶೇಷವಾಗಿ ಬಂಗಾರದ ವಿಚಾರಕ್ಕೆ ಬಂದ್ರೆ ಭಾರತ ಮುಂಚೂಣಿಯಲ್ಲಿದೆ. ಚಿನ್ನವನ್ನು ನಮ್ಮ ಭಾರತೀಯರು, ಅದ್ರಲ್ಲೂ ಭಾರತೀಯ ಮಹಿಳೆಯರು ಖರಿದಿಸೋ ರೀತಿ ಹಾಗೂ ಭಾರತದಲ್ಲಿ ಚಿನ್ನಕ್ಕೆ ಇರೋ ಬೇಡಿಕೆ ಅತ್ಯಂತ ಅಧಿಕ. ಭಾರತದಲ್ಲಿ ಚಿನ್ನಕ್ಕೆ ಯಾವಾಗಲೂ ವಿಶೇಷ ಸ್ಥಾನ. ಆಭರಣದಿಂದ ಹಿಡಿದು ಹೂಡಿಕೆಯವರೆಗೆ ಚಿನ್ನಕ್ಕೆ ಬೇಡಿಕೆ ಎಂದಿಗೂ ಕಡಿಮೆಯಾಗಿಲ್ಲ. ಆದರೆ ಇತ್ತೀಚಿಗೆ ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದಕ್ಕೆ ಕಾರಣವೇನು? ಈ ಲೇಖನದಲ್ಲಿ ಚಿನ್ನದ ಬೆಲೆ ಏರಿಕೆಯ ಹಿಂದಿನ ಕಾರಣಗಳನ್ನು ತಿಳಿಯೋಣ.
ಚಿನ್ನದ ಬೇಡಿಕೆ ಮತ್ತು ಪೂರೈಕೆಯ ಸಮಸ್ಯೆ
ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖರೀದಿ ಮಾಡೋರು ಕೂಡ ನಾಳೆ ಮತ್ತೆ ಹೆಚ್ಚಾಗಬಹುದು ಈಗಲೇ ಖರೀದಿ ಮಾಡೋಣ ಎನ್ನುವಂತಹ ಯೋಚನೆಯಲ್ಲಿ ಚಿನ್ನದ ಖರೀದಿಯನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಚಿನ್ನದ ಬೇಡಿಕೆ ಹೆಚ್ಚಾಗಿದೆ ಆನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಯಾವಾಗಲೂ ಗಗನಕ್ಕೇರಿದೆ. ಮದುವೆಯ ಋತು, ಹಬ್ಬ-ಹರಿದಿನಗಳಲ್ಲಿ ಜನರು ಚಿನ್ನ ಖರೀದಿಗೆ ಮುಗಿಬೀಳುತ್ತಾರೆ. ಆದರೆ ಚಿನ್ನದ ಪೂರೈಕೆ ಈ ಬೇಡಿಕೆಗೆ ತಕ್ಕಂತೆ ಇಲ್ಲ. ಈ ಅಸಮತೋಲನವೇ ಬೆಲೆ ಏರಿಕೆಗೆ ಪ್ರಮುಖ ಕಾರಣ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೇಡಿಕೆ ಗಗನಕ್ಕೇರಿದೆ. ಅಮೆರಿಕನ್ ಡಾಲರ್ ಮೌಲ್ಯದ ಏರಿಳಿತ, ಬ್ಯಾಂಕ್‌ಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿರುವುದು ಮತ್ತು ಹೂಡಿಕೆದಾರರ ಒಲವು ಚಿನ್ನದ ಬೆಲೆಯನ್ನು ಮತ್ತಷ್ಟು ತಲೆಯೆತ್ತುವಂತೆ ಮಾಡಿದೆ. ತಜ್ಞರ ಪ್ರಕಾರ, ಮುಂದಿನ 3-4 ತಿಂಗಳು ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಚಿನ್ನದ ಮೇಲೆ ಹೂಡಿಕೆ: ಲಾಭದಾಯಕವೇ?
ಚಿನ್ನ ಯಾವಾಗಲೂ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿದೆ. ಬೆಲೆ ಏರಿಕೆಯ ಭಯದಿಂದ ಜನರು ಈಗಲೇ ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ತಜ್ಞರು ಹೇಳುವಂತೆ, ದೀರ್ಘಕಾಲಿಕ ಯೋಜನೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವಾಗಿರಲಿದೆ. ಆದರೆ, ಮಾರುಕಟ್ಟೆಯ ಏರಿಳಿತವನ್ನು ಗಮನಿಸುವುದು ಮುಖ್ಯ.