ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದು 9 ವರ್ಷ ಸಂದಿವೆ. 2014ರ ಮೇ 24ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ, ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಸಾಮಾಜಿಕ, ಆರ್ಥಿಕ, ಮೂಲಸೌಕರ್ಯ, ರಕ್ಷಣೆ, ವಿದೇಶಾಂಗ ಕ್ಷೇತ್ರಗಳಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು, ಯೋಜನೆಗಳನ್ನು ತರುವ ಮೂಲಕ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ.
ಪ್ರಧಾನಿ ಮೋದಿ ನೈರ್ಮಲ್ಯ, ಶುದ್ಧ ನೀರು ಪೂರೈಕೆಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಬಯಲು ಶೌಚಕ್ಕೆ ಅಂತ್ಯ ಹಾಡಿದ್ದಾರೆ. ಭಾರತವನ್ನು ಸ್ವಚ್ಛಗೊಳಿಸುವ ಮತ್ತು ಜನರಿಗೆ ಶುದ್ಧ ನೀರನ್ನು ಒದಗಿಸುವ ತನ್ನ ಧ್ಯೇಯದಲ್ಲಿ ಸರ್ಕಾರವು ಯಶಸ್ವಿಯಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿವೆ.
2.5 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಹೊಂದಿವೆ ಮತ್ತು ಸುಮಾರು 2 ಲಕ್ಷ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿವೆ. ದೇಶದಲ್ಲಿ ನೀರಿನ ಲಭ್ಯತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಜಲ ಶಕ್ತಿ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವದಾದ್ಯಂತ ಅತ್ಯದ್ಭುತ ಅಭಿಮಾನಿ ಬಳಗ ಇದೆ. ಜಗತ್ತಿನ ಯಾವುದೇ ಮೂಲೆಗೂ ಹೋದರೂ ಮೋದಿ ಕ್ರೇಜ್ ಯಾವತ್ತೂ ಕಡಿಮೆಯಾಗಿಲ್ಲ.
ಅಭಿಮಾನಿಗಳು ಮೋದಿ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂದ್ರೆ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಾರೆ, ಅನ್ನದಾನ ಮಾಡುತ್ತಾರೆ. ಅಷ್ಟೆ ಅಲ್ಲ ದೇವಾಲಯಕ್ಕೆ ಧತ್ತಿ ನಿಧಿ ಕೊಡುವಾಗ ನರೇಂದ್ರ ಮೋದಿ ಅವರ ಹೆಸರನ್ನು ಹಾಕುತ್ತಾರೆ. ಮೋದಿ ಅವರಿಗೆ ಕೂಡ ದೈವ ಭಕ್ತಿ ಹೆಚ್ಚು ಅವರು ಕೂಡಾ ಶಿವ ನ ಪರಮ ಭಕ್ತರು. ಅನೇಕ ದೇವಾಲಯಗಳ ಅಭಿವೃದ್ದಿ ಮಾಡಿದ್ದಾರೆ. ಕರ್ನಾಟಕಕ್ಕೆ ಬಂದಾಗ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ಹಾಗಾಗಿ ಮೋದಿ ಅಭಿಮಾನಿಗಳ ಕೂಡಾ ಮೋದಿಯವರಿಗಾಗಿ ದೇವಾಲಯಗಳಲ್ಲಿ ಸೇವೆ ಕೊಡುತ್ತಾರೆ, ಅದೇ ರೀತಿ ಇಲ್ಲಿ ಒಬ್ಬರು ನರೆಂದ್ರ ಮೋದಿ ಅವರ ಹೆಸರಿನಲ್ಲಿ ಗುರು ರಾಯರ ಮಠಕ್ಕೆ ಸೇವೆ (Receipt) ಸಲ್ಲಿಸಿದ್ದಾರೆ, ಸದ್ಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.