Snake Bite: ಹಾವು ಕಚ್ಚಿದ ಅಮ್ಮನನ್ನು ಉಳಿಸಲು ಈಕೆ ಮಾಡಿದ ಕೆಲಸಕ್ಕೆ ದೇಶವೇ ಬೆರಗು

Advertisement
ವಿದ್ಯಾರ್ಥಿಯೊಬ್ಬಳ ಸಮಯ ಪ್ರಜ್ಞೆ, ಬುದ್ಧಿವಂತಿಕೆ ಹಾಗೂ ತಕ್ಷಣಕ್ಕೆ ಆಕೆ ಯೋಚನೆ ಮಾಡಿದ ಪರಿ ಆಕೆಯ ತಾಯಿಯ ಜೀವವನ್ನೇ ಉಳಿಸಿದೆ. ಬಹುತೇಕ ನಾವು ಸಿನಿಮಾಗಳಲ್ಲಿ ಇದನ್ನು ನೋಡಿರುತ್ತೇವೆ ಕಾಲಿಗೆ ವಿಷಕಾರಿ ಹಾವು ಕಚ್ಚಿದರೆ ಆ ಭಾಗದ ರಕ್ತ ಹೀರಿ ವಿಷ ಮೈಗೆ ಏರದಂತೆ ನೋಡಿಕೊಳ್ಳಲಾಗುತ್ತೆ. ಆದರೆ ನಿಜ ಜೀವನದಲ್ಲಿಯೂ ಇಂತಹ ಒಂದು ಘಟನೆ ನಡೆದಿದೆ ನೋಡಿ.
ಪುತ್ತೂರು (Puttur) ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಗ್ರಾಮ ಪಂಚಾಯಿತಿ ಸದಸ್ಯ ಆಗಿದ್ದ ಮಮತಾ ರೈ (Mamata Rai) ಎಂಬುವರಿಗೆ ತೋಟದಲ್ಲಿ ಹಾವು ಕಚ್ಚಿತ್ತು. ಸುಮಾರು ಸಂಜೆಯ ವೇಳೆ ಮನೆಯ ಎದುರು ಇದ್ದ ಮಾವಿನ ತೋಟದಲ್ಲಿ ಪಂಪ್ಸೆಟ್ ಸ್ವಿಚ್ ಹಾಕಲು ಮಮತಾ ರೈ ಹೋಗಿದ್ದರು ಆ ಸಮಯದಲ್ಲಿ ವಿಷಕಾರಿ ಹಾಗೂ ಅವರ ಕಾಲಿಗೆ ಕಚ್ಚಿದೆ. ಇದರಿಂದ ರಕ್ತಸ್ರಾವ ಆರಂಭವಾಯಿತು. ಕೂಡಲೇ ಮನೆಗೆ ಬಂದ ಮಮತಾ ರೈ ಮನೆಯವರಿಗೆ ಹಾವು ಕಚ್ಚಿರುವ ವಿಷಯ ತಿಳಿಸಿದ್ದಾರೆ.
ಮಮತಾ ರೈ ಅವರ ಮನೆಯ ಕೆಲಸದವರು ಆಕೆಯ ಕಾಲಿಗೆ ಬೈಹುಲ್ಲಿನಿಂದ ಸುತ್ತಿದ್ದಾರೆ. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಮಮತಾ ರೈ ಅವರ ಮಗಳು ಶ್ರಾವ್ಯ ಮುತುವರ್ಜಿಯಿಂದ ಕೂಡಲೇ ತಾಯಿಗೆ ಹಾವು ಕಚ್ಚಿದ ಜಾಗದಿಂದ ರಕ್ತವನ್ನು ಹೀರಿದ್ದಾಳೆ ನಂತರ ಮಮತಾ ರೈ ಅವರನ್ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಶ್ರಾವ್ಯ ಅವಳ ಸಮಯ ಪ್ರಜ್ಞೆಯನ್ನು ವೈದ್ಯರು ಪ್ರಶಂಸೆ ಮಾಡಿದ್ದು ಕೂಡಲೇ ಆಕೆ ಹಾಗೆ ಮಾಡದೆ ಇದ್ದಿದ್ದರೆ ಮಮತಾ ಅವರ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಎಂದು ಹೇಳಿದ್ದಾರೆ ಯಾಕೆಂದರೆ ಅವರಿಗೆ ಕಚ್ಚಿದ್ದು ವಿಷ ಪೂರಿತ ಹಾವಾಗಿತ್ತು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಶ್ರಾವ್ಯಾ ರೈ ಇದೀಗ ಎಲ್ಲರ ಪ್ರಶಂಸೆಯನ್ನು ಗಳಿಸಿಕೊಂಡಿದ್ದಾರೆ.