ಸದ್ಯ ಇದೀಗ ಬಂಗಾರದ ಬೆಲೆ (Gold Rate) ಕಳೆದ ಮೂರು ದಿನಗಳಿಂದ ಗಗನಕ್ಕೇರುತ್ತಲೇ ಇದೆ ಎನ್ನಬಹುದು. ಆದರೆ ಇಂದು ಮಾತ್ರ ಈ ಏರಿಕೆಯ ಓಟಕ್ಕೆ ಕೊಂಚ ಬ್ರೇಕ್(Break) ಬಿದ್ದಿದ್ದು ಸ್ವಲ್ಪ ಇಳಿಕೆ ಕಂಡಿದೆ. ಪ್ರತಿ ಗ್ರಾಂ ಆಭರಣ (Jewelry) ಚಿನ್ನದ ಬೆಲೆ ರೂ 5,530 ರೂ ಆಗಿದ್ದು ಇಂದು ಅದೇ ಒಂದು ಗ್ರಾಂ ಚಿನ್ನದ ಬೆಲೆ 5,480 ರೂ ಆಗಿದೆ. ಇನ್ನು ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ (Global market)ಇರುವ ಮಹತ್ವ ಇಂದಿನದ್ದಲ್ಲ.ಹೌದು ಕ್ರಿಸ್ತ ಪೂರ್ವ 5 ನೇ ಶತಮಾನದಿಂದಲೂ ಸಹ ಬಂಗಾರಕ್ಕೆ ಬಂಗಾರದ್ದೇ ಮೌಲ್ಯವಿದ್ದು ಚಿನ್ನ ನಮ್ಮ ದೇಶದಲ್ಲಿ (Country) ಕೇವಲ ಆಭರಣವಾಗಿ ಉಳಿಯದೇ ಉಳಿತಾಯ ಹೂಡಿಕೆಯಾಗಿ ಕೂಡ ಇದೆ. ಚಿನ್ನದಿಂದ ಉಳಿತಾಯವನ್ನು ಪ್ರಾರಂಭಿಸಲು ನೀವು ಆರ್ಥಿಕ(Financial) ಪರಿಣತರಾಗಿರಬೇಕಿಲ್ಲ ಬದಲಿಗೆ ಆಗಾಗ ಒಂದಿಷ್ಟು ಚಿನ್ನ ಮಾಡಿಸಿಟ್ಟುಕೊಂಡರೆ ಸಾಕು.
ಇನ್ನು ಚಿನ್ನದ ಮೇಲಿನ ಹೂಡಿಕೆ ಈಗ ಹೆಚ್ಚುತ್ತಲೇ ಇದ್ದು ದೇಶದ ಆರ್ಥಿಕ ಸದೃಢತೆಯೂ ಅದು ತಾನು ಹೊಂದಿರುವ ಚಿನ್ನದ ಪ್ರಮಾಣದ ಮೇಲೆ ಅವಲಂಬಿತವಾಗಿದೆ ಮತ್ತು ಚಿನ್ನ ಪ್ರಪಂಚಾದಾದ್ಯಂತ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ. ಇನ್ನು ಈ ಎಲ್ಲ ಅಂಶಗಳಿಂದಾಗಿ ಚಿನ್ನಕ್ಕೆ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ. ಇನ್ನು ಚಿನ್ನದ ದರದಲ್ಲಿ ಏರಿಳಿಕೆ ತುಂಬಾ ಸಾಮಾನ್ಯ. ಇನ್ನು ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟಾಗಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ.
ಆಭರಣ ಪ್ರಿಯರು ಮತ್ತು ಹೂಡಿಕೆದಾರರಿಗಾಗಿ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಸುತ್ತೇವೆ ಬನ್ನಿ..ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 54,850 ಆಗಿದ್ದರೆ ಚೆನ್ನೈ ಮುಂಬೈ ಮತ್ತು ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,800, ರೂ. 54,800, ರೂ. 54,800 ಆಗಿದೆ. ಇನ್ನುದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 54,950 ರೂ. ಆಗಿದೆ.ಇನ್ನು ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,480 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ – ರೂ. 5,978 ಆಗಿದೆ. ಇನ್ನು ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,840 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 47,824 ಆಗಿದೆ.
ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,800 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 59,780 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,48,000 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,97,800 ಆಗಿದೆ.ಅತ್ತ ಚಿನ್ನ ಇಳಿಕೆಯಾದರೆ ಇತ್ತ ಬೆಳ್ಳಿಯೂ ತನ್ನ ಬೆಲೆಯಲ್ಲಿ ಸ್ವಲ್ಪ ಮುಗ್ಗರಿಸಿದೆ.
ಇನ್ನು ಬೆಳ್ಳಿ ಕೂಡ ನಿನ್ನೆ ಮಹತ್ವದ ಏರಿಕೆ ಕಂಡಿದ್ದು ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 72,100 ಇದ್ದು, ಇಂದು 72,000 ರೂ ಆಗಿದೆ.ಇನ್ನು ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 746, ರೂ. 7,460 ಹಾಗೂ ರೂ. 74,600 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,600 ಆಗಿದ್ದರೆ, ದೆಹಲಿಯಲ್ಲಿ ರೂ. 72,000, ಮುಂಬೈನಲ್ಲಿ ರೂ. 72,000 ಹಾಗೂ ಕೊಲ್ಕತ್ತದಲ್ಲೂ ರೂ. 72,000 ಗಳಾಗಿದೆ.