Karnataka Times
Trending Stories, Viral News, Gossips & Everything in Kannada

Gruha Jyothi: ಉಚಿತ ಕರೆಂಟ್ ಇದ್ದವರು ಮನೆ ಬದಲಿಸಿದರೆ ಹೊಸ ರೂಲ್ಸ್! ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ

advertisement

Gruha Jyothi: ಇತ್ತೀಚಿನ ದಿನದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಬಾಡಿಗೆ ನಿವಾಸಿಗಳ ಸಂಖ್ಯೆ ಅಧಿಕವಾಗುತ್ತಿದೆ ಎನ್ನಬಹುದು. ಅದರಲ್ಲೂ ಬೆಂಗಳೂರಿಗೆ ಕೆಲಸ , ಶಿಕ್ಷಣಕ್ಕಾಗಿ ತಮ್ಮ ಸ್ವಂತ ಊರನ್ನು ತೊರೆದು ಸಾಗುತ್ತಾರೆ. ಹಾಗಾಗಿ ಬಾಡಿಗೆ ಮನೆಯಲ್ಲಿ ವಾಸ ಮಾಡುವುದು ಅನಿವಾರ್ಯ ಎನ್ನಬಹುದು. ಬಾಡಿಗೆ ಮನೆಯ ನಿವಾಸಿಗಳು ಮನೆ ಬಾಡಿಗೆ ಪಡೆದಿದ್ದರು ಸರಕಾರದ ಕೆಲವು ಸೌಲಭ್ಯ ಪಡೆಯಬಹುದು. ಅದರಲ್ಲಿ ಗೃಹಜ್ಯೋತಿ ಕೂಡ ಒಂದು ಎನ್ನಬಹುದಾಗಿದೆ.ಮನೆ ಬದಲಿಸಿದರೆ ಸರಕಾರದ ಸೌಲಭ್ಯ ಪಡೆಯುವ ವಿಚಾರಕ್ಕೆ ಹೊಸ ರೂಲ್ಸ್ ಅಪ್ಲೈ ಆಗುತ್ತಿದೆ ಎನ್ನಬಹುದು.

ಗೃಹಜ್ಯೋತಿ ಸೌಲಭ್ಯವನ್ನು ಆಧಾರ್ ಕಾರ್ಡ್ ಮೂಲಕ ಅರ್ಜಿ ಹಾಕಿ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಗೃಹಜ್ಯೋತಿ ಸೌಲಭ್ಯ ಪಡೆದು ಒಂದೆರೆಡು ತಿಂಗಳಲ್ಲೇ ಮನೆ ಬದಲಿಸಿ ಗೃಹಜ್ಯೋತಿ ಸೌಲಭ್ಯ ಹೊಸ ಮನೆಗೆ ಬೇಕು ಎಂದು ಬಯಸಿದ್ದು ಇದೆ ಆದರೆ ಈ ಪ್ರಕ್ರಿಯೆ ಬಹಳ ವಿಳಂಬ ಹಾಗೂ ಕೆಲವೊಂದು ಸಂದರ್ಭದಲ್ಲಿ ಹೊಸ ಬಾಡಿಗೆ ಮನೆಗೆ ಗೃಹಜ್ಯೋತಿ ಅಪ್ಲೈ ಆಗಲಾರದು ಎನ್ನಬಹುದು ಅಂತಹ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಮನಗಂಡ ಸರಕಾರ ಹೊಸ ನಿರ್ಣಯ ಕೈಗೊಂಡಿದೆ.

Image Source: Star of Mysore

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಂದ ಪಂಚ ಯೋಜನೆಗಳ ಸಾಲಿನಲ್ಲಿ ಗೃಹಜ್ಯೋತಿ ಯೋಜನೆ ಮೂಲಕ ರಾಜ್ಯದ ಜನತೆಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ಸಿಗುತ್ತಿದೆ. ಸುಮಾರು 200 ಯುನಿಟ್ ತನಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಬಹುದಾಗಿದ್ದು ಪ್ರತೀ ಹಂತದಲ್ಲಿ ಕೂಡ ಮಾನ್ಯತೆ ಪಡೆಯುತ್ತಲಿದೆ. ಗೃಹಜ್ಯೋತಿ ಸೌಲಭ್ಯ ಆರಂಭ ಮಾಡುವಾಗಲೇ 200 ಯುನಿಟ್ ತನಕ ಉಚಿತ ವಿದ್ಯುತ್ ಎಂದು ಹೇಳಲಾಗಿದ್ದು ಅದಕ್ಕಿಂತ ಹೆಚ್ಚು ಯುನಿಟ್ ಬಳಕೆ ಮಾಡಿದರೆ ಸಮಸ್ಯೆ ಎಂದು ಹೇಳಬಹುದು.ಆಗ ಯಾರು 200 ಯುನಿಟ್ ಗಿಂತ ಅಧಿಕ ಬಳಕೆ ಮಾಡುತ್ತಾರೆ ಅವರೇ ಅಷ್ಟು ಮೊತ್ತ ಪಾವತಿ ಮಾಡಬೇಕಾಗಲಿದೆ. ಇದೀಗ ಗೃಹಜ್ಯೋತಿ ಸೌಲಭ್ಯದಲ್ಲಿ ಬಾಡಿಗೆ ಮನೆ ನಿವಾಸಿಗಾಳಿಗೆ ಗುಡ್ ನ್ಯೂಸ್ ಒಂದು ಕಾಯುತ್ತಿದೆ.

ಮನೆ ಬದಲಿಸಿದರೂ ಗೃಹಜ್ಯೋತಿ ಸುಲಭಕ್ಕೆ ವರ್ಗಾವಣೆ
ನೀವು ನಿಮ್ಮ ಬಾಡಿಗೆ ಮನೆ ಬದಲಾವಣೆ ಮಾಡಿದರು ಕೂಡ ಇನ್ನು ಮುಂದೆ ಸುಲಭಕ್ಕೆ ಗೃಹಜ್ಯೋತಿ ಸೌಲಭ್ಯ ಪಡೆಯಬಹುದು. ಬಾಡಿಗೆ ಮನೆ ನಿವಾಸಿಗಳಿಗೆ ಗೃಹಜ್ಯೋತಿ ಸೌಲಭ್ಯ ಅನುಕೂಲ ಆಗುವಂತೆ ಕೆಲವು ಮಹತ್ವದ ಬದಲಾವಣೆ ಜಾರಿಗೆ ತರಲಾಗುತ್ತಿದೆ. ಬಾಡಿಗೆ ಮನೆಯಲ್ಲಿ ಗೃಹಜ್ಯೋತಿ ನೋಂದಣಿಯನ್ನು ರದ್ದು ಮಾಡಲು ವಿದ್ಯುತ್ ಕಚೇರಿ ಅಲೆಯಬೇಕಿತ್ತು ಸರಕಾರ ಈಗ ನಿಯಮದಲ್ಲಿ ಬದಲಾವಣೆ ಮಾಡಿ ಸೇವಾ ಸಿಂಧು ಪೋರ್ಟಲ್ ಮೂಲಕವೇ ನೋಂದಣಿ ರದ್ದು ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

Image Source: Coastal Digest

ನೀವು ಹಳೆ ಬಾಡಿಗೆ ಮನೆಯ ನೋಂದಣಿ ರದ್ದು ಮಾಡಿದ್ದ ಬಳಿಕ ಹೊಸ RR ನಂಬರ್ ಗೆ ಆಧಾರ್ ಕಾರ್ಡ್ ಮೂಲಕ‌ ಹೊಸ ಬಾಡಿಗೆ ಮನೆಗೆ ಗೃಹಜ್ಯೋತಿ ಸೌಲಭ್ಯ ಪಡೆಯಲು ನೋಂದಣಿ ಪಡೆಯಬಹುದು. ಈ ಬಗ್ಗೆ ಇಂಧನ ಇಲಾಖೆ ಆದೇಶ ಹೊರಡಿಸಿದ್ದು ಹೊಸ ಮನೆಗೆ ಗೃಹಜ್ಯೋತಿ ಸೌಲಭ್ಯಕ್ಕೆ ಸುಲಭಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಎಲ್ಲ ವಿದ್ಯುತ್ ಸರಬರಾಜು ಕಂಪೆನಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಹಾಗಾಗಿ ಸೇವಾ ಸಿಂಧುವಿನಲ್ಲಿ ಡಿ ಲಿಂಕ್ ಸೌಲಭ್ಯ ಇರಲಿದೆ. ಹಾಗಾಗಿ ಬಾಡಿಗೆ ಮನೆ ನಿವಾಸಿಗಳು ನೋಂದಣಿ ರದ್ದು ಮಾಡಲು ಇಂಧನ ಇಲಾಖೆಗೆ ಅಲೆಯುವ ಅಗತ್ಯ ಕೂಡ ಇಲ್ಲ ಎನ್ನಬಹುದು.

advertisement

Leave A Reply

Your email address will not be published.