ಇಂದು ಒಂದು ಜಾಗ ನಿವೇಶನ ಪಡೆದು ಮನೆ ಕಟ್ಟುವುದು ಬಹಳ ಕಷ್ಟ, ಅದರಲ್ಲೂ ಹೆಚ್ಚು ಮೊತ್ತದ ಹಣ ಸೇವಿಂಗ್ ಮಾಡಿ ಜಾಗ ಖರೀದಿ ಮಾಡಬೇಕಾಗುತ್ತದೆ, ಒಮ್ಮೆ ಜಾಗ ಪರ್ಚೆಸ್ ಮಾಡಿ ಅದರಲ್ಲಿ ಮನೆ ಕಟ್ಟಿ ದರೆ ಒಮ್ಮೆ ಸಮಾಧಾನ ನೀಡಿ ದಂತಾಗುತ್ತದೆ, ಅದರೆ ಕೆಲವರು ಸರಕಾರ ಜಾಗದಲ್ಲಿ ಮನೆ ಕಟ್ಟಿದವರುಇದ್ದಾರೆ, ಇದೀಗ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿದ ಬಡ ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯುಸ್ (Good news) ನೀಡಿದೆ, ಅಕ್ರಮ ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಬಡವರಿಗೆ ಹಕ್ಕು ಪತ್ರ ನೀಡಲು ಯೋಜನೆ ಹಾಕಿ ಕೊಳ್ಳಲಾಗಿದೆ
ಹೊಸ ಸರಕಾರ ಶೀಘ್ರದಲ್ಲೆ ಮಾಡಲಿದೆ
ಇದೀಗ ಹೊಸ ಸರಕಾರ ಈ ಕೆಲಸಕ್ಕೆಮುಂದಾಗಿದೆ, ಶೀಘ್ರದಲ್ಲೆ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದೆ, ಬಡವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಿ ಆ ಜಾಗ ಅವರಿಗೆ ಸೇಪ್ ಆಗಿ ಇರುವಂತೆ ಮಾಡಲಾಗುವುದು ಎನ್ನಲಾಗಿದೆ, ಜನರ ವಾರ್ಷಿಕ ಆದಾಯವನ್ನು ಪರಿಗಣಿಸಿ ಯಾರು ಬಡವರಿದ್ದಾರೋ ಅವರನ್ನು ಗುರುತಿಸಿ ಹಕ್ಕುಪತ್ರ ನೀಡಲಾಗುವುದು ಎಂದಿದ್ದಾರೆ.
ಯಾರಿಗೆ ಅನ್ವಯ ವಾಗಲಿದೆ
30 ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವ ಜನರಿಗೆ ಈ ಅಕ್ರಮ ಸಕ್ರಮ ಯೋಜನೆ ಅಪ್ಲೈ ಆಗಲಿದೆ, 20*30 ಅಳತೆಯ ಮನೆಗಳಿಗೆ ಹಕ್ಕುಪತ್ರ ತೆಗೆದು ಕೊಳ್ಳಲು ಎಸ್ ಸಿ, ಎಸ್ ಟಿ ವರ್ಗದವರು 2,500 ರೂ. ನೋಂದಣಿ ಶುಲ್ಕ ಸಾಮಾನ್ಯ ವರ್ಗದವರಿಗೆ 5 ಸಾವಿರ ರೂ. ಶುಲ್ಕ ನೀಡಬೇಕು ಎಂದಿದೆ.
ಸೈಟು ನೋಂದಣಿ
ಮನೆ ಕಟ್ಟಿಕೊಂಡಿರುವ ಬಡವರ ಹೆಸರಿಗೆ ಸೈಟು ನೋಂದಣಿ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ, ಮನೆಗಳಿಗೆ 10 ವರ್ಷದಿಂದ 30 ವರ್ಷದ ಅವಧಿ ಆಗಿರಬೇಕಿದ್ದು, ಸುಮಾರು 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ.
ಒಟ್ಟಿನಲ್ಲಿ ಬಡವರ್ಗದ ಜನರಿಗೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಜನರಿಗೆ ಗುಡ್ ನ್ಯೂಸ್ ನೀಡಲಿದೆ