Karnataka Times
Trending Stories, Viral News, Gossips & Everything in Kannada

Gold Price Today: ಇಂದಿನ ಬಂಗಾರದ ಬೆಲೆಯಲ್ಲಿ ಮತ್ತೆ ವ್ಯತ್ಯಾಸ, ಇಲ್ಲಿದೆ ದರ

Advertisement

ಜನರಿಗೆ ಕಷ್ಟಕಾಲದಲ್ಲಿ (Difficult Times) ನೆರವಾಗುವ ಏಕೈಕ ವಸ್ತು ಎಂದರೆ ಅದು ಚಿನ್ನ (Gold) . ಆದರೆ ಚಿನ್ನದ ಮೇಲೆ ಹೂಡಿಕೆ (Invest) ಮಾಡುವುದು ಈಗಿನ ಪದ್ಧತಿಯಲ್ಲ ಎಂಬುದು ಆಶ್ಚರ್ಯ ಸಂಗತಿಯೇ ಸರಿ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ (For Emergency Use) ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ (Indians)ಲೆಕ್ಕಾಚಾರವಾಗಿದ್ದು ಹೀಗಾಗಿ ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಸಹ ಹೆಚ್ಚಾಗುತ್ತಲೆ ಬಂದಿದೆ .

ಆದರೆ ದೇಶಾದ್ಯಂತ (Country) ಕಳೆದ ಮೂರು ವರುಷದ ಹಿಂದೆ ಕೊರೋನಾದಿಂದಾಗಿ (Covid) ಚಿನ್ನವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಅದೇ ರೀತಿ ಚಿನ್ನದ ಪೂರೈಕೆಯಲ್ಲಿಯೂ(Gold Supply)ವ್ಯತ್ಯಯವಾಗಿದೆ. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿರುವುದಂತು ಸತ್ಯ. ಹೌದು ಕರೋನಾ ಹರಡುವಿಕೆಯಿಂದಾಗಿ ಬಹುತೇಕ ಆರ್ಥಿಕ ವ್ಯವಹಾರಗಳು ಸ್ಥಗಿತಗೊಂಡಿದ್ದು ರಿಯಲ್ ಎಸ್ಟೇಟ್ (Real Estate) ಸೇರಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿ ಹೋಗಿದ್ದವು.

ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ (Gold Market) ಮೇಲೂ ಕೂಡ ಬಿದ್ದಿದ್ದು ಲಾಕ್ ಡೌನ್ (Lockdown) ತೆರವಾಗುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಂಡಿದೆ. ಆಯಾ ರಾಜ್ಯಗಳು (States) ವಿಧಿಸುವ ಸೇವಾ ತೆರಿಗೆಯಿಂದ (Service Tax)ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ.

ಇನ್ನು ಹಬ್ಬದ ದಿನ ಸ್ವಲ್ಪ ಏರಿಕೆ ಕಂಡಿದ್ದ ಚಿನ್ನ ಇದೀಗ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಹೌದು ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 5,480 ರೂ ಆಗಿದ್ದು ಇಂದು ಅದೇ ಒಂದು ಗ್ರಾಂ ಚಿನ್ನದ ಬೆಲೆ 5,420 ರೂ ಆಗಿದೆ. ಇದು ನಿಮಗೆ ಗ್ರಾಂ ಲೆಕ್ಕದಲ್ಲಿ ತೆಗೆದುಕೊಳ್ಳುವಾಗ ಅಯ್ಯೋ ಇಷ್ಟೇನಾ ಎಂದೆನಿಸುತ್ತದೆ. ಆದರೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವಾಗ ಬಹಳ ಲಾಭವಾಗುತ್ತದೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಹೆಚ್ಚಳವಾಗಿದೆ.

ಹೌದು 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 163 ರೂಪಾಯಿ ಜಗಿತ ಕಂಡಿದೆ.ಇನ್ಕು ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 54,250 ಆಗಿದ್ದರೆ ಚೆನ್ನೈ ಮುಂಬೈ ಮತ್ತು ಕೊಲ್ಕತ್ತಾದಂತಹ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 54,700 ರೂ. 54,200, ರೂ. 54,200 ಆಗಿದೆ. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 54,350 ರೂ. ಆಗಿದೆ.

ಇನ್ನು ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 5,420 ಆಗಿದ್ದು ಇತ್ತ 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,913- ಆಗಿದೆ. ಇನ್ನು ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,360 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 47,304 ಆಗಿದೆ.

ಇನ್ಜು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,200 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 59,130 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,42,000 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,91,300 ಆಗಿದೆ.

ಇನ್ನು ಇತ್ತ ಬೆಳ್ಳಿಯೂ ಕೂಡ ತನ್ನ ಬೆಲೆಯಲ್ಲಿ ಸ್ವಲ್ಪ ಮುಗ್ಗರಿಸಿದೆ ಎನ್ನಬಹುದು . ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 72,100 ಇದ್ದದ್ದು ಇಂದು 500 ಕಡಿಮೆಯಾಗುವ ಮೂಲಕ 71,600 ಆಗಿದೆ. ಇನ್ನು ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm 100gm 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 740, ರೂ. 7,400 ಹಾಗೂ ರೂ. 74,000 ಗಳಾಗಿವೆ. ಇನ್ನು ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,000 ಆಗಿದ್ದರೆ ದೆಹಲಿಯಲ್ಲಿ ರೂ. 72,600, ಮುಂಬೈನಲ್ಲಿ ರೂ. 71,600 ಮತ್ತು ಕೊಲ್ಕತ್ತದಲ್ಲೂ ರೂ. 71,600 ಗಳಾಗಿದೆ.

Leave A Reply

Your email address will not be published.