ಈ ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ (Smart Phone) ಬಳಸದ ಜನರು ಯಾರೂ ಇಲ್ಲ. ಆದರೆ ಯಾರಾದರೂ ಸ್ವಲ್ಪ ಸಮಯದವರೆಗೆ ಸ್ಮಾರ್ಟ್ ಫೋನ್ ಇಲ್ಲದೆ ಇರುವಾಗ ಹೇಗಾಗಿರುತ್ತದೆ, ಮೊಬೈಲ್ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಮುಖ್ಯ, ನಮ್ಮ ಕೆಲವೊಂದಿಷ್ಟು ದಾಖಲೆಗಳನ್ನು ಮೊಬೈಲ್ ನಲ್ಲಿ ಕೂಡ ಸೇವ್ ಮಾಡಿ ಇಟ್ಟುಕೊಂಡಿರುತ್ತೇವೆ, ಹೀಗಿರುವಾಗ ಏಕಾಏಕಿ ಫೋನ್ ಕಳವಾದರೆ ಏನು ಮಾಡುವುದು ಎಂದೇ ತೋಚುವುದಿಲ್ಲ, ಇನ್ನು ಪೊಲೀಸ್ ಠಾಣೆಗೆ ದೂರು ನೀಡಿದರೂ ಮೊಬೈಲ್ ಮರಳಿ ಸಿಗುವುದು ದೂರದ ಮಾತು. ಹಾಗಾದ್ರೆ ಮೊಬೈಲ್ ಫೋನ್ ಕಳೆದು ಹೋದರೆ, ಏನು ಮಾಡುವುದು ? ಸುಲಭದ ಟ್ರಿಕ್ಸ್ (Tricks) ಇಲ್ಲಿದೆ.
UPI ಸೇವೆ Block ಮಾಡಿ:
ಕಳೆದು ಹೋದ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆದ ಯುಪಿಐ (UPI) ಪಾವತಿಯನ್ನು ನಿಷ್ಕ್ರಿಯಗೊಳಿಸಿ. ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಯುಪಿಐ ಮತ್ತು ಇತರೇ ಮಾಹಿತಿಗಳನ್ನು ನಿಷ್ಕ್ರಿಯಗೊಳಿಸಿ. ಇದರಿಂದ ನಿಮ್ಮ ಮಾಹಿತಿ ಕಳವು ಮಾಡಿದವರಿಗೆ ಲಭ್ಯ ವಾಗುವುದಿಲ್ಲ.
ಕಳೆದು ಹೋದ Mobile ಮರಳಿ ಪಡೆಯಲು ಸುಲಭ ವಿಧಾನ:
ಕಳೆದು ಹೋದ ಮೊಬೈಲ್ (Lost Mobile) ಗಳನ್ನು ಪತ್ತೆಹಚ್ಚಲು ನೂತನ ಆನ್ಲೈನ್ ಪೋರ್ಟಲ್ (Online Portal) ಅನ್ನು ಪೊಲೀಸ್ ಇಲಾಖೆ ಪರಿಚಯಿಸಿದೆ, ಮೊದಲಿಗೆ ಬೇರೆ ಮೊಬೈಲ್ ನಲ್ಲಿ 8277952828 ಈ ನಂಬರ್‌ಗೆ ವಾಟ್ಸಾಪ್‌ನಲ್ಲಿ Hi ಎಂದು ಮೆಸೇಜ್ ಮಾಡಿ. ನೀವು ಮೆಸೇಜ್ ಕಳುಹಿಸಿದ ವಾಟ್ಸಾಪ್ ನಂಬರ್‌ಗೆ ಒಂದು ಸಂದೇಶದ ಲಿಂಕ್ ಬರುತ್ತದೆ. ಈ ಲಿಂಕ್ ನಲ್ಲಿ ಅಗತ್ಯ ಮಾಹಿತಿ ಗಳನ್ನು ಭರ್ತಿ ಮಾಡಿ ,ನಂತರದಲ್ಲಿ ನೀವು ಈ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿದ ನಂತರ ಕಳೆದುಹೋದ ಫೋನ್ ಪತ್ತೆಗೆ ಕ್ರಮ ಕೈಗೊಳ್ಳುತ್ತಾರೆ, ಇನ್ನು ಪತ್ತೆಯಾಗದ ಫೋನ್‌ಗಳನ್ನು ಬ್ಲಾಕ್ ಮಾಡಲು ಸಹ ಕ್ರಮ ಕೈಗೊಳ್ಳುತ್ತಾರೆ ಪೋಲಿಸ್ ಇಲಾಖೆಯವರು.
SIM Cardಮೊದಲು ಬ್ಲಾಕ್ ಮಾಡಿ:
ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ. ಇದರಿಂದ ಇತರ ವೈಯಕ್ತಿಕ ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ, ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಯುಪಿಐ ಮತ್ತು ಇತರ ಮೊಬೈಲ್ ವ್ಯಾಲೆಟ್‌ಗಳನ್ನು ನಿಷ್ಕ್ರಿಯಗೊಳಿಸಲು ಮರೆಯಬೇಡಿ.