Karnataka Times
Trending Stories, Viral News, Gossips & Everything in Kannada

Ambani: ಅಂಬಾನಿಗಿಂತಲೂ ದೊಡ್ಡ ಮನೆ ಹೊಂದಿರುವ ಈ ಕ್ರಿಕೆಟಿಗ ಯಾರು ಗೊತ್ತಾ?

Advertisement

ಸದ್ಯದ ಮಟ್ಟಿಗೆ ಕ್ರಿಕೆಟ್ ಲೋಕದಲ್ಲಿ ನೀವು ಗಮನಿಸುವುದಾದರೆ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎನ್ನುವುದಾಗಿ ವಿರಾಟ್ ಕೊಹ್ಲಿ ಅವರನ್ನು ಕರೆಯಲಾಗುತ್ತದೆ. ವಿರಾಟ್ ಕೊಹ್ಲಿ(Virat Kohli) ಸಾವಿರ ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿರುವಂತಹ ಕ್ರಿಕೆಟ್ ಆಗಿದ್ದು ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಅವರನ್ನು ಬಿಟ್ರೆ ಅವರಿಗಿಂತ ಹೆಚ್ಚು ಹಣವನ್ನು ಹೊಂದಿರುವಂತಹ ಕ್ರಿಕೆಟಿಗರು ಎಂದರೆ ಅದು ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ. ಆದರೆ ಅವರೆಲ್ಲರಿಗಿಂತಲೂ ವಿಭಿನ್ನವಾಗಿರುವಂತಹ ಒಬ್ಬ ಕ್ರಿಕೆಟಿಗರ ಬಗ್ಗೆ ಇಂದಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಆ ಕ್ರಿಕೆಟಿಗ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಇವತ್ತು ನಾವು ಹೇಳಲು ಹೊರಟಿರುವಂತಹ ಕ್ರಿಕೆಟಿಗ ಅಂಬಾನಿ(Ambani) ಅವರಿಗಿಂತಲೂ ಕೂಡ ದೊಡ್ಡ ಮನೆಯನ್ನು ಹೊಂದಿದ್ದ. ನಾವ್ ಮಾತನಾಡಲು ಹೊರಟಿರೋದು ಸಮರ್ಜಿತ್ ಸಿಂಗ್ ರಣಜಿತ್ ಸಿಂಗ್ ಗಾಯಕ್ವಾಡ್ ರವರ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು. ಇವರು ಬರೋಡಾದ ರಾಜ ಆಗಿದ್ದರು. 1967 ರಲ್ಲಿ ಜನಿಸಿರುವ ಈ ಕ್ರಿಕೆಟಿಗ ಹೆಚ್ಚಾಗಿ ಆಡಿರೋದು ಪ್ರಥಮ ದರ್ಜೆಯ ಕ್ರಿಕೆಟ್ ಅನ್ನು. ಬರೋಡ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇವರು ಜಗತ್ತಿನ ಅತ್ಯಂತ ಖ್ಯಾತ ಅರಮನೆಗಳಲ್ಲಿ ಒಂದಾಗಿರುವಂತಹ ಲಕ್ಷ್ಮಿ ವಿಲಾಸ್ ಪ್ಯಾಲೇಸ್(Lakshmi Vilas Palace) ನ ಒಡೆಯ ಕೂಡ ಆಗಿದ್ದಾರೆ. 3,04,92,000 ಸ್ಕ್ವೇರ್ ಫೂಟ್ ನಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿತ್ತು.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಅಂಬಾನಿ ಅವರ ಮನೆಗಿಂತ ಇದು ಸಾಕಷ್ಟು ದೊಡ್ಡ ಮಟ್ಟದ ವಿಸ್ತಾರವನ್ನು ಹೊಂದಿರುವಂತಹ ಮನೆ ಆಗಿದೆ ಎಂದು ಹೇಳಬಹುದಾಗಿದೆ. ಇನ್ನು ಸಮರ್ಜಿತ್ ಸಿಂಗ್ ರವರ ಒಟ್ಟಾರೆ ಆಸ್ತಿಯ ಮೌಲ್ಯ 20,000 ಕೋಟಿ ಅಧಿಕ ಎಂಬುದಾಗಿ ತಿಳಿದು ಬರುತ್ತದೆ. ಭಾರತೀಯ ಕ್ರಿಕೆಟ್ ತಂಡ ಆಗಿನ ಕಾಲದಲ್ಲೇ ಇಷ್ಟೊಂದು ಶ್ರೀಮಂತ ಕ್ರಿಕೆಟಿಗನನ್ನು ಕಂಡಿತ್ತು ಎಂಬುದನ್ನು ಈ ಮೂಲಕ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಕೇವಲ ಕ್ರಿಕೆಟಿಗರಲ್ಲಿ ಶ್ರೀಮಂತ ವ್ಯಕ್ತಿ ಮಾತ್ರವಲ್ಲದೆ ನಿಜವಾಗಿಯೂ ಕೂಡ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದರು. ಇಂದಿಗೂ ಕೂಡ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸ ನೆನಪಿಸಿಕೊಳ್ಳುತ್ತದೆ.

ಅವರ ಹೋಲಿಕೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಆಸ್ತಿಯನ್ನು ಗಮನಿಸುವುದಾದರೆ 1250 ಕೋಟಿ ಹಾಗೂ ಮಹೇಂದ್ರ ಸಿಂಗ್ ಧೋನಿ(Mahindra Singh Dhoni) ಅವರ ಆಸ್ತಿಯನ್ನು ಗಮನಿಸುವುದಾದರೆ 1040 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಬೆಂಗಳೂರು ತಂಡದ ಪರವಾಗಿ ಆಡುವುದಕ್ಕೆ ಪ್ರತಿ ವರ್ಷ 15 ಕೋಟಿ ಹಾಗೂ ಅದಕ್ಕಿಂತಲೂ ಹೆಚ್ಚಿನ ಹಣವನ್ನು ಬೇರೆ ಬೇರೆ ಮೂಲೆಗಳಿಂದ ಪಡೆದುಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವುದಕ್ಕೆ ವರ್ಷಕ್ಕೆ ಏಳು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇದಕ್ಕಿಂತಲೂ ಸಾಕಷ್ಟು ಪಟ್ಟು ದೊಡ್ಡ ಪ್ರಮಾಣದ ಹಣವನ್ನು ಬ್ರಾಂಡ್ ಡೀಲ್ಸ್ಗಳಿಗಾಗಿ ಅವರು ಚಾರ್ಜ್ ಮಾಡುತ್ತಾರೆ.

Leave A Reply

Your email address will not be published.