Karnataka Times
Trending Stories, Viral News, Gossips & Everything in Kannada

ATM Machine: ಒಂದು ATM ಮಷೀನ್ ನಲ್ಲಿ ಎಷ್ಟು ಹಣ ಇರುತ್ತೆ ಗೊತ್ತಿದೆಯಾ? ಇಲ್ಲಿದೆ ಅಸಲಿ ಸತ್ಯ

Advertisement

ನಮ್ಮ ಭಾರತ ದೇಶ ಮೊದಲಿಗೆ ಹೋಲಿಸಿದರೆ ಈಗ ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ಒಗ್ಗಿಕೊಂಡಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಪ್ರತಿಯೊಬ್ಬರೂ ಕೂಡ ಭಾರತದ ಅರ್ಥ ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ನೊಂದಿಗೆ ಲಿಂಕ್ ಆಗುವ ಮೂಲಕ ಪ್ರತಿಯೊಬ್ಬರೂ ಕೂಡ ಅರ್ಥ ವ್ಯವಸ್ಥೆಯ ಭಾಗವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ವಹಿವಾಟುಗಳು ಕೂಡ ಭಾರತ ದೇಶದಲ್ಲಿ ಬೇರೆಯದೇ ರೂಪವನ್ನು ಪಡೆದುಕೊಂಡಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ನಮ್ಮ ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ತಮ್ಮ ಅಧಿಕಾರ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯರಿಂದಲೂ ಕೂಡ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದುವ ರೀತಿಯಲ್ಲಿ ಮಾಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಇಲ್ಲಿಂದಲೇ ಭಾರತೀಯರು ತಮ್ಮ ಪಾತ್ರವನ್ನು ಭಾರತದ ಅರ್ಥವ್ಯವಸ್ಥೆಯಲ್ಲಿ ಗಂಭೀರವಾಗಿ ಪರಿಗಣಿಸುವುದಕ್ಕೆ ಪ್ರಾರಂಭಿಸುತ್ತಾರೆ ಎಂದರು ಕೂಡ ತಪ್ಪಾಗಲಾರದು. ಇಲ್ಲಿಂದಲೇ ಅವರು ತಮ್ಮ ಖಾತೆಗಳಿಗೆ ನೇರವಾಗಿ ಬರುವಂತಹ ಸರ್ಕಾರಿ ಯೋಜನೆಯ ಹಣದ ಬಗ್ಗೆ ಹೆಚ್ಚಾದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಪಾಸ್ ಬುಕ್ ಚೆಕ್ ಬುಕ್ ಹಾಗೂ ಡೆಬಿಟ್ ಕಾರ್ಡ್ ಅಂದರೆ ಎಟಿಎಂ ಕಾರ್ಡ್(ATM Card) ಅನ್ನು ನೀಡುತ್ತದೆ. ಎಟಿಎಂ ಮಷೀನ್ ನಲ್ಲಿ ನಿಮ್ಮ ಖಾತೆಯಲ್ಲಿ ಇರುವಂತಹ ಹಣವನ್ನು ನಗದು ರೂಪದಲ್ಲಿ ಪಡೆದುಕೊಳ್ಳುವುದಕ್ಕೆ ಎಟಿಎಂ ಕಾರ್ಡ್ ಅನ್ನು ನೀವು ಬಳಕೆ ಮಾಡಬಹುದಾಗಿದೆ. ಹಾಗಿದ್ರೆ ನೀವು ಯಾವತ್ತಾದ್ರೂ ಎಟಿಎಂ ಮಷೀನ್ ಒಳಗೆ ಎಷ್ಟು ಹಣ ಇರಬಹುದು ಎನ್ನುವ ಬಗ್ಗೆ ಯೋಚನೆ ಮಾಡಿದ್ದೀರಾ. ಇಂತಹ ಚಿತ್ರ ವಿಚಿತ್ರವಾದ ಆಲೋಚನೆಗಳು ಖಂಡಿತವಾಗಿ ನಿಮಗೂ ಕೂಡ ಬಂದಿರುತ್ತದೆ. ಹಾಗಿದ್ರೆ ಬನ್ನಿ ಎಟಿಎಂ ಒಳಗೆ ಇರಬಹುದಾದಂತಹ ಒಟ್ಟಾರೆ ಹಣದ ಬಗ್ಗೆ ಇವತ್ತಿನ ಈ ಆರ್ಟಿಕಲ್ ಮೂಲಕ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ.

ಸಾಮಾನ್ಯವಾಗಿ ನೀವು ನಿಮ್ಮ ಊರುಗಳಲ್ಲಿ ಇರುವಂತಹ ಬ್ಯಾಂಕುಗಳ ಬ್ರಾಂಚಿನ ಎಟಿಎಂ ಅನ್ನು ಒಂದೋ ಬ್ಯಾಂಕಿನ ಒಳಗೆ ನೋಡಿರುತ್ತೀರಿ ಇಲ್ಲವೇ ಬ್ಯಾಂಕಿನ ಹೊರಭಾಗದಲ್ಲಿ ಕೂಡ ಎಟಿಎಂ ಮಷೀನ್(ATM Machine) ಅನ್ನು ಇರುವುದನ್ನು ನೀವು ನೋಡಿರುತ್ತೀರಿ. ಕೆಲವೊಂದು ಸುದ್ದಿ ಪತ್ರಿಕೆಗಳಲ್ಲಿ ಎಟಿಎಂನಿಂದ ಕಳ್ಳರು ಹಣವನ್ನು ಕದ್ದು ಹೋಗಿರುವುದನ್ನು ಕೂಡ ಕೇಳಿರಬಹುದು. ಅದೇ ಸುದ್ದಿಯಿಂದ ಈ ಮಷೀನ್ ನಲ್ಲಿ ಎಷ್ಟು ಹಣ ಇರಬಹುದು ಎನ್ನುವಂತಹ ಕುತೂಹಲ ಕೂಡ ಪ್ರಾರಂಭವಾಗಿರುತ್ತದೆ.

ಮಾಹಿತಿಗಳ ಪ್ರಕಾರ ಒಂದು ಎಟಿಎಂ ನಲ್ಲಿ 8 ರಿಂದ 15 ಲಕ್ಷ ರೂಪಾಯಿಗಳನ್ನು ಲೋಡ್ ಮಾಡಲಾಗಿರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಮಷೀನ್ ಒಳಗೆ ನಾಲ್ಕು ರೀತಿಯ ವಿಭಿನ್ನ ನೋಟುಗಳನ್ನು ಇಡುವಂತಹ ಸ್ಲಾಟ್ ಗಳನ್ನು ಕೂಡ ಇಡಲಾಗುತ್ತದೆ. ಉದಾಹರಣೆಗೆ ನಾಲ್ಕು ವಿಭಿನ್ನ ಸ್ಲಾಟುಗಳಲ್ಲಿ ನೂರು ರೂಪಾಯಿ 200 ರೂಪಾಯಿ ಐನೂರು ರೂಪಾಯಿ ಹಾಗೂ ಈ ಹಿಂದೆ ಸಾವಿರ ರೂಪಾಯಿ ನೋಟುಗಳನ್ನು ಕೂಡ ಇಡಲಾಗುತ್ತಿತ್ತು. ಒಟ್ಟಾರೆ 8 ರಿಂದ 15 ಲಕ್ಷ ರೂಪಾಯಿಗಳ ಹಣವನ್ನು ಹಿಡಿದಿಟ್ಟುಕೊಳ್ಳುವಂತಹ ಸಾಮರ್ಥ್ಯವನ್ನು ಎಟಿಎಂ ಮಿಷಿನ್ ಗಳು ಹೊಂದಿವೆ ಎಂಬುದಾಗಿ ಮೂಲಗಳು ತಿಳಿಸುತ್ತವೆ.

Leave A Reply

Your email address will not be published.