ಈಗಂತೂ ಪ್ರತಿಯೊಬ್ಬರೂ ಕ್ಯಾಶ್ ವ್ಯವಹಾರ ಮಾಡುವುದಕ್ಕಿಂತ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕವೇ ಹಣಕಾಸಿನ ವ್ಯವಹಾರ ಮಾಡುತ್ತಾರೆ. ಉದ್ಯೋಗದಲ್ಲಿ ತೊಡಗಿರುವವರಿಗೆ ಬ್ಯಾಂಕ್ ವಿವಿಧ ರೀತಿಯ ವಿವಿಧ ಬೆಲೆ ಇರುವ ಕ್ರೆಡಿಟ್ ಕಾರ್ಡ್ (Credit Card) ಕೂಡ ನೀಡುತ್ತದೆ. ತಿಂಗಳ ಪ್ರತಿಯೊಂದು ಖರ್ಚುಗಳು ಕೂಡ ಕ್ರೆಡಿಟ್ ಕಾರ್ಡ್ ನಲ್ಲಿಯೇ ಪಾವತಿ ಮಾಡಬಹುದು ಅದರಲ್ಲೂ ಆನ್ಲೈನ್ ಮೂಲಕವೇ ಪಾವತಿ ಮಾಡಬಹುದಾದ್ದರಿಂದ ಇನ್ನಷ್ಟು ಕೆಲಸ ಸುಲಭ.
ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿ ಮಾಡಲು ಒಂದು ದಿನಾಂಕವನ್ನು ನಿಗದಿಪಡಿಸಿ ಇಡಲಾಗುತ್ತೆ. ಆ ದಿನಾಂಕದಂದು ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಬೇಕು ಒಂದು ವೇಳೆ ದಿನಾಂಕವನ್ನು ಮೀರಿದರೆ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಕೊನೆಯ ದಿನಾಂಕದವರೆಗೂ ಕಾಯದೆ ಅದಕ್ಕಿಂತ ಮೊದಲೇ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದ್ರೆ ನಿಮಗೆ ಎಷ್ಟು ಪ್ರಯೋಜನ ಇದೆ ಗೊತ್ತಾ?
Credit Card ಬಳಕೆ:
ಕ್ರೆಡಿಟ್ ಕಾರ್ಡ್ ನ ಒಟ್ಟು ಮಿತಿಯಲ್ಲಿ ನೀವು ಬಳಕೆ ಮಾಡಿದರೆ ಅದನ್ನು ಕ್ರೆಡಿಟ್ ಬಳಕೆ ಎಂದು ಕರೆಯಲಾಗುತ್ತೆ. ನೀವು ಕ್ರೆಡಿಟ್ ಬಳಕೆಯನ್ನು ಅನುಪಾತದ ಅನುಸಾರವಾಗಿ ಬಳಸಿಕೊಂಡಿದ್ದರೆ ಆಗ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತೆ ಅದರ ಬದಲು ದಿನಾಂಕದ ಮೊದಲು ಪಾವತಿ ಮಾಡಿದ್ರೆ ಕ್ರೆಡಿಟ್ ಸ್ಕೋರ್ ಜಾಸ್ತಿ ಆಗುತ್ತದೆ ಜೊತೆಗೆ ಕ್ರೆಡಿಟ್ ಬಳಕೆಯನ್ನು ಕೂಡ ನಿಯಂತ್ರಿಸಬಹುದು.
ಬಡ್ಡಿಹೊರೆ ತಪ್ಪಿಸಿ:
ಕ್ರೆಡಿಟ್ ಕಾರ್ಡ್ (Credit Card) ನಿಗದಿ ದಿನದ ನಂತರವೂ ನೀವು ಪಾವತಿಸದೆ ಇದ್ದರೆ ಒಂದಕ್ಕೆ ಡಬಲ್ ಬಡ್ಡಿ ಪಾವತಿಸಬೇಕಾಗುತ್ತದೆ. ಹಾಗಾಗಿ ಸಕಾಲಿಕ ಪಾವತಿ ಅಥವಾ ನಿಗದಿತ ದಿನಾಂಕಕ್ಕಿಂತ ಮೊದಲೇ ಪಾವತಿ ಮಾಡಿದರೆ ಸಾಕಷ್ಟು ಬಡ್ಡಿ ಕಡಿಮೆಯಾಗುತ್ತದೆ.
ದಂಡ ತಪ್ಪಿಸಿಕೊಳ್ಳಿ:
ಕ್ರೆಡಿಟ್ ಕಾರ್ಡ್ ನೀವು ಆ ದಿನಾಂಕವನ್ನು ಮೀರಿ ಇನ್ನು ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ ಆಗ ಹೆಚ್ಚಿನ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಸಮಯೋಚಿತ ಕ್ರೆಡಿಟ್ ಬಿಲ್ ಪಾವತಿ ಮಾಡಿದ್ರೆ ನಿಮ್ಮ ಜೀವನ ಇನ್ನಷ್ಟು ಸುಲಭವಾಗುತ್ತದೆ.
ಕ್ರೆಡಿಟ್ ಮಿತಿ ಹೆಚ್ಚಿಸಲು ಸಹಾಯಕ:
ಇನ್ನು ಸರಿಯಾದ ಸಮಯಕ್ಕೆ ಕ್ರೆಡಿಟ್ ಬಿಲ್ ಪಾವತಿ ಮಾಡುವುದು ಅಥವಾ ಕ್ರೆಡಿಟ್ ಬಿಲ್ (Credit Bill) ಅವಧಿಗಿಂತ ಮೊದಲೇ ಕ್ರೆಡಿಟ್ ಬಿಲ್ ಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಣೆಯಾಗುತ್ತದೆ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ನೀವು ಹೊಂದಿರುವ ಕ್ರೆಡಿಟ್ ಕಾರ್ಡ್ ನ ಮಿತಿಯನ್ನು ಕೂಡ ಹೆಚ್ಚಿಸಿಕೊಳ್ಳಬಹುದು.
ಆರ್ಥಿಕ ಶಿಸ್ತು:
ಕ್ರೆಡಿಟ್ ಕಾರ್ಡ್ (Credit Card) ಬಳಸುವುದು ಮಾತ್ರವಲ್ಲ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡುವುದು ಕೂಡ ಗೊತ್ತಿರಬೇಕು ಇದು ನಿಮ್ಮಲ್ಲಿ ಇರುವ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಆರ್ಥಿಕ ಶಿಸ್ತು ನಮ್ಮಲ್ಲಿ ಇದ್ದರೆ ಮಿತವಾದ ಖರ್ಚು ಸಮತೋಲಿತ ವ್ಯವಹಾರ ರೂಢಿಯಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಖರ್ಚನ್ನು ತಪ್ಪಿಸಬಹುದು.
ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸಿಕೊಳ್ಳಿ:
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ. ಸಿಬಿಲ್ ಸ್ಕೋರ್ ಚೆನ್ನಾಗಿದ್ದಾಗ ಮಾತ್ರ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು ಅಥವಾ ಯಾವುದೇ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು.
ಕ್ರೆಡಿಟ್ ರೇಟಿಂಗ್ ಹೆಚ್ಚಿಸಿಕೊಳ್ಳಿ:
ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದು ಹಣಕಾಸು ಮಾರುಕಟ್ಟೆಯಲ್ಲಿ ನಿಮ್ಮ ಕ್ರೆಡಿಟ್ ಸ್ಕೋರಿಂಗ್ ಚೆನ್ನಾಗಿ ಇರುವಂತೆ ಮಾಡುತ್ತದೆ ಇದಕ್ಕಾಗಿ ನೀವು ಯಾವುದೇ ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರು ತಕ್ಷಣ ನಿಮಗೆ ಸಾಲ ಮಂಜೂರಾಗುತ್ತದೆ.
ನಿಮ್ಮ ಬಳಿ ಇರುವ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ಸಮಯಕ್ಕೆ ಮುಂಚೆ ಪಾವತಿ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನ ಇದೆ ಅಂದಮೇಲೆ ಸುಮ್ಮನೆ ಬಾಕಿ ಉಳಿಸಿಕೊಳ್ಳುವುದು ಯಾಕೆ ಯೋಚನೆ ಮಾಡಿ.
ಇದರಲ್ಲಿ ಏನೋ ಖುಷಿ ಸುದ್ದಿ ನಿಮ್ದು ಒಂದು news☺️