ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶ ಆಟೋಮೊಬೈಲ್ (Automobile) ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಹೇಳಬಹುದು. ಕಾರುಗಳಿಂದ ಹಿಡಿದು ಬೈಕುಗಳನ್ನು ಕೂಡ ಖರೀದಿಸುವ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ಕೂಡ ಭಾರತೀಯರು ಮುಂಚೂಣಿ ಸ್ಥಾನದಲ್ಲಿದ್ದಾರೆ. 140 ಕೋಟಿಗೂ ಅಧಿಕ ಜನಸಂಖ್ಯೆ ಇದೆ ಎಂದ ಮೇಲೆ ಖಂಡಿತವಾಗಿ ವಾಹನಗಳನ್ನು ಖರೀದಿಸುವ ಸಂಖ್ಯೆ ಕೂಡ ಅದೇ ಲೆವೆಲ್ ನಲ್ಲಿ ಇರುತ್ತದೆ ಎಂಬುದನ್ನು ಕೂಡ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಕಾರುಗಳಿಗೆ ಹೋಲಿಸಿದರೆ ಬೈಕುಗಳ ಖರೀದಿ ಸಂಖ್ಯೆ ಭಾರತ ದೇಶದಲ್ಲಿ ಸಾಕಷ್ಟು ಹೆಚ್ಚಾಗಿದೆ.
ಬೈಕನ್ನು ದೈನಂದಿನ ಓಡಾಟಗಳಿಗೆ ಹೆಚ್ಚಾಗಿ ಬಳಸುವಂತಹ ವರ್ಗ ನಿಮಗೆ ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಅದರಲ್ಲೂ ವಿಶೇಷವಾಗಿ ಪ್ರತಿದಿನ ಕೆಲಸಕ್ಕೆ ಹೋಗುವಂತಹ ವ್ಯಕ್ತಿಗಳು ಬೈಕು ಅಥವಾ ಸ್ಕೂಟರ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆ ಸಂದರ್ಭದಲ್ಲಿ ನಿಮ್ಮ ದ್ವಿಚಕ್ರ ವಾಹನಗಳಲ್ಲಿ ಮಿರರ್ ಇರೋದು ಅತ್ಯಂತ ಪ್ರಮುಖವಾಗಿರುತ್ತದೆ.
ಎರಡು ರೀತಿಯಲ್ಲಿ ಮಿರರ್ (2 Wheeler Mirror) ಇರೋದು ಅತ್ಯಂತ ಪ್ರಮುಖವಾಗಿರುತ್ತದೆ ಮೊದಲನೇದಾಗಿ ನಿಮ್ಮ ಸುರಕ್ಷತೆಗಾಗಿ ನೀವು ವಾಹನವನ್ನು ಚಲಿಸುವಾಗ ಹಿಂದೆ ಯಾವಲ್ಲ ವಾಹನಗಳು ಎಲ್ಲಿ ಬರುತ್ತವೆ ಎನ್ನುವುದು ನಿಮಗೆ ತಿಳಿದಿದ್ದರೆ ನೀವು ಟರ್ನ್ ಮಾಡುವಾಗ ಸುರಕ್ಷಿತವಾಗಿ ಹೋಗಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯುವಕರು ತಮ್ಮ ಸ್ಟೈಲ್ ಹಾಳಾಗಬಾರದು ಎನ್ನುವ ಕಾರಣಕ್ಕಾಗಿ ವಾಹನದಲ್ಲಿರುವಂತಹ ಮಿರರ್ ಅನ್ನು ತೆಗೆದಿಟ್ಟು ವಾಹನವನ್ನು ಚಲಾಯಿಸುತ್ತಾರೆ.
ಈ ರೀತಿ ಮಾಡುವುದರಿಂದ ನಿಮ್ಮ ಹಾಗೂ ನಿಮ್ಮ ಹಿಂದೆ ವಾಹನವನ್ನು ಚಲಾಯಿಸುತ್ತಿರುವಂತಹ ಮತ್ತೊಬ್ಬರ ಸುರಕ್ಷತೆಗೂ ಕೂಡ ಕುತ್ತು ಬರಬಹುದು ಎಂಬುದಾಗಿ ಹೇಳಬಹುದಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಕೂಡ ನೀವು ಯೋಚನೆ ಮಾಡಬೇಕಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ಭಾರತದ ವಾಹನ ನಿಯಮಗಳ (Indian Vehicle Act) ಅನುಸಾರವಾಗಿ ಕೂಡ ನೀವು ನಿಮ್ಮ ವಾಹನದಲ್ಲಿ ಎರಡು ಮಿರರ್ಗಳನ್ನು ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದನ್ನು ನಾವು ಹೇಳ್ತಿರೋದಲ್ಲ ಬದಲಾಗಿ ಭಾರತದ ಸಾರಿಗೆ ನಿಯಮಗಳು ಹೇಳಿರುವುದು ಹಾಗಾಗಿ ಬನ್ನಿ ಯಾವ ನಿಯಮ ಏನನ್ನು ಹೇಳುತ್ತದೆ ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
Motot Vehicle Act 1988 Section 5 ಹಾಗೂ 7 ನೇ ನಿಯಮಗಳ ಪ್ರಕಾರ ಪ್ರತಿಯೊಂದು ದ್ವಿಚಕ್ರ ವಾಹನಗಳು ಕೂಡ ಎರಡು ಮಿರರ್ ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬುದಾಗಿ ನಿಯಮವನ್ನು ರೂಪಿಸಲಾಗಿದೆ. ಒಂದು ವೇಳೆ ಈ ನಿಯಮಗಳ ಅನುಸಾರವಾಗಿ ಯಾವುದೇ ದ್ವಿಚಕ್ರ ವಾಹನಗಳು ಎರಡು ಮಿರರ್ ಗಳನ್ನು ಹೊಂದಿಲ್ಲದೆ ಹೋದಲ್ಲಿ ಆ ವಾಹನಗಳ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸುವಂತಹ ಅಧಿಕಾರವನ್ನು ಹೊಂದಿರುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ನಿಯಮಗಳ ಅನುಸಾರವಾಗಿ ಯಾರಾದರೂ ಎರಡು ಮಿರರ್ ಗಳನ್ನು ಹೊಂದಿಲ್ಲದೆ ಹೋದಲ್ಲಿ ಟ್ರಾಫಿಕ್ ಪೊಲೀಸರು ಹಿಡಿದಾಗ ನೀವು ದಂಡವನ್ನು ಕಟ್ಟಲೇ ಬೇಕಾಗುತ್ತದೆ ಹೀಗಾಗಿ ನಿಮ್ಮ ದ್ವಿಚಕ್ರ ವಾಹನಗಳಲ್ಲಿ ಎರಡು ಮಿರರ್ ಗಳು ಇರುವುದನ್ನು ಖಚಿತಪಡಿಸಿಕೊಂಡು ನಿಮ್ಮ ವಾಹನವನ್ನು ರೋಡಿಗೆ ಇಳಿಸಿ