Actress Haripriya: ಜೀವನದ ಪ್ರಮುಖ ಹೆಜ್ಜೆ ಇಟ್ಟ ಹರಿಪ್ರಿಯಾ, ಸಿಹಿಸುದ್ದಿ ಕೊಟ್ಟ ನಟಿ

Advertisement
ನಟಿ ಹರಿಪ್ರಿಯ (Hari priya) ಅವರು ನಟಿಸಿದ್ದು ಕೆಲವೇ ಸಿನೆಮಾವಾದರೂ ಕೂಡ ಬಹುತೇಕ ಎಲ್ಲವೂ ಅವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟದ್ದೇ ಆಗಿದೆ ಇತ್ತೀಚೆಗೆ ಮದುವೆಯಾದ ಬಳಿಕ ಅವರ ಸಿನೆಮಾ ಕೆರಿಯರ್ ಮುಂದುವರಿದಿಲ್ಲ ಎನ್ನಬಹುದು. ಅದೇ ರೀತಿ ಹರಿಪ್ರಿಯಾ ಅವರು ಮದುವೆಯಾದ ಬಳಿಕ ವಸಿಷ್ಠ ಸಿಂಹ (Vasista simha) ಅವರ ಜೊತೆ ಖುಷಿಯ ಜೀವನ ಕಳೆದಿದ್ದಾರೆ.
ಖುಷಿಯ ವಿಚಾರ ಹಂಚಿಕೆ
ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದು ಆ ವಿಚಾರವನ್ನು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಅದೇ ರೀತಿ ಆ ಪೋಸ್ಟರ್ ನಲ್ಲಿ ನಾನು ಸೆಕೆಂಡ್ ಇನ್ನಿಂಗ್ಸ್ (second Innings) ಆರಂಭಿಸಿದ್ದೇನೆ ಈ ವಿಚಾರ ಹೇಳಿಕೊಳ್ಳಲು ಖುಷಿಯಾಗುತ್ತದೆ. ಶೀಘ್ರದಲ್ಲಿ ನಿಮಗೆ ಒಳ್ಳೆ ಸುದ್ದಿ ನೀಡುತ್ತೇನೆ ಎಂದು ಹೇಳುವ ಪೋಸ್ಟರ್ ಒಂದನ್ನು ಹಾಕಿದ್ದಾರೆ.
ಯೂಟ್ಯೂಬ್ ಚಾನೆಲ್ ಪ್ರಾರಂಭ
ಎರಡನೇ ಇನ್ನಿಂಗ್ಸ್ ಏನು ಅಂದಾಗ ವಿಚಾರ ತಿಳಿದ ಕೂಡಲೇ ಎಲ್ಲರೂ ಹರಿಪ್ರಿಯಾ ಅವರು ಗರ್ಭಿಣಿಯಾಗಿದ್ದಾರೆ ಎಂದೆಲ್ಲ ವಿಶ್ ಮಾಡಿದ್ದರು ಆದರೆ ಅಸಲಿ ವಿಚಾರವನ್ನು ಅವರು ಬಿಚ್ಚಿಟ್ಟಿದ್ದಾರೆ. ಈ ಮೂಲಕ ತನ್ನದೆ ಆದ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಲಾಂಚ್ ಮಾಡುವುದಾಗಿ ನಟಿ ಹರಿಪ್ರಿಯಾ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿದು ಬಹುತೇಕ ಜನರು ಮೆಚ್ಚುಗೆಯ ಸುರಿಮಳೆ ಸುರಿಸಿದರೆ ಇನ್ನು ಕೆಲವರು ಬೇರೆ ಬೇರೆ ತರದಲ್ಲಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಮಾತಾಡಿದ್ದ ಅವರು ನೀವು ತಿಳಿದುಕೊಂಡಂತೆ ಏನು ಇಲ್ಲ.
ನನ್ನ ಹೊಸ ಉದ್ಯಮದ ಮಾಹಿತಿ
ನಾನು ಹೊಸ ಯೂಟ್ಯೂಬ್ (YouTube Chanel) ಚಾನೆಲ್ ಅನ್ನು ಸ್ಥಾಪಿಸಬೇಕೆಂದಿರುವೆ ಆ ವಿಚಾರವನ್ನೆ ನಿಮ್ಮ ಮುಂದೆ ಹೇಳಬಯಸಿದ್ದು. ನನ್ನನ್ನು ಬೆಳ್ಳಿ ಪರದೆ ಮೇಲೆ ಕಂಡು ನನಗೆ ಖುಷಿಯ ಶುಭಾಶಯ ಹಾರೈಸಿದ್ದೀರಿ ಈಗ ಇದಕ್ಕೂ ಕೂಡ ಸಪೋರ್ಟ್ ಮಾಡಬೇಕು ಎಂದಿದ್ದಾರೆ. ಈ ಮೂಲಕ ತನ್ನ ಹೊಸ ಯೂಟ್ಯೂಬ್ ಚಾನೆಲ್ ನಲ್ಲಿ ಡೈಲಿ ರುಟಿನ್, ಜೀವನ, ಸಾಧನೆ ಬೇರೆ ವ್ಯಕ್ತಿಗಳನ್ನು ಹರಿಪ್ರಿಯಾ ಅವರು ಸಂದರ್ಶನ ಮಾಡುವುದು, ಪ್ರವಾಸ, ಗೈಡ್ ಲೈನ್ಸ್ ಇನ್ನು ಅನೇಕವಿಧವಾದ ಮಾಹಿತಿಗಳು ಇದೇ ಯೂಟ್ಯೂಬ್ ಚಾನೆಲ್ ಮೂಲಕ ತಿಳಿದುಬರಲಿದೆ.