RTO Rules: ನಿಮ್ಮ ಕಾರಿಗೆ ನಿಮಗಿಷ್ಟವಾದ ಬಣ್ಣ ಚೇಂಜ್ ಮಾಡಬಹುದಾ? ಇಲ್ಲಿದೆ RTO ನಿಯಮ

Advertisement
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಅವರಿಗೆ ಆದಂತಹ ಕೆಲವೊಂದು ಆಸೆಗಳನ್ನು ಪೂರೈಸುವಂತಹ ಯೋಚನೆ ಇರುತ್ತದೆ. ಅದರಲ್ಲಿ ವಿಶೇಷವಾಗಿ ಕಾರು ಬೈಕುಗಳಂತಹ ವಾಹನಗಳನ್ನು ಖರೀದಿಸುವುದು, ಪ್ರತಿಯೊಬ್ಬರ ಆಸೆಯ ಲಿಸ್ಟಿನಲ್ಲಿ ಮೊದಲನೇ ಸ್ಥಾನವನ್ನು ಹೊಂದಿರುತ್ತದೆ. ಇನ್ನು ಕೆಲವರಿಗೆ ತಾವು ಖರೀದಿಸುವಂತಹ ಕಾರು ಅಥವಾ ವಾಹನಗಳನ್ನು ತಮಗೆ ಇಷ್ಟ ಆಗುವಂತಹ ಕಲರ್ ಮಾಡಿಸಬೇಕು ಎನ್ನುವಂತಹ ಆಸೆ ಕೂಡ ಇರುತ್ತದೆ ಆದರೆ ಭಾರತದ ವಾಹನ ನಿಯಮಗಳ(Indian Vehicle Act) ಪ್ರಕಾರ ಅದು ಎಷ್ಟು ಸರಿ ಎಷ್ಟು ತಪ್ಪು ಎನ್ನುವುದನ್ನು ಕೂಡ ನೀವು ಅರ್ಥಮಾಡಿಕೊಳ್ಳಬೇಕಾಗಿರುತ್ತದೆ.
ಹೌದು ಪ್ರತಿಯೊಬ್ಬರಿಗೂ ಕೂಡ ಈ ರೀತಿಯ ಆಲೋಚನೆ ಒಂದಲ್ಲ ಒಂದು ಬಾರಿ ಖಂಡಿತವಾಗಿ ಬಂದೇ ಇರುತ್ತದೆ. ಆದರೆ ಹಣ ಕೊಟ್ಟು ವಾಹನದ ಮೇಲೆ ಬಣ್ಣ ಹಾಕಿಸಿಕೊಳ್ಳುವುದು ಅತ್ಯಂತ ಸುಲಭದ ಕೆಲಸ ಆದರೆ ಅದರ ಹಿಂದಿನ ನಿಯಮಗಳನ್ನು ತಿಳಿದರೆ ಖಂಡಿತವಾಗಿ ನೀವು ಹಣ ಖರ್ಚು ಮಾಡಿದ್ದು ಕೂಡ ವೇಸ್ಟ್ ಎಂಬುದಾಗಿ ಭಾವಿಸುತ್ತೀರಿ. ಯಾಕೆಂದರೆ ಪ್ರತಿಯೊಂದು ಕೆಲಸಗಳಿಗೂ ಕೂಡ ಸರ್ಕಾರದ ನಿಯಮಗಳ ಅನ್ವಯ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಅದು ನಮ್ಮನ್ನು ಒಬ್ಬ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುತ್ತದೆ. ಹಾಗಿದ್ರೆ ಬನ್ನಿ ಕಾಡಿನ ಮೇಲೆ ನಿಮಗಿಷ್ಟವಾದ ಬಣ್ಣಗಳನ್ನು ಹಾಕಿಸಿಕೊಳ್ಳುವುದರ ಬಗ್ಗೆ ಭಾರತದ ವಾಹನ ನಿಯಮಗಳ ಸಾಲುಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ವಾಹನಗಳನ್ನು ನೀವು ಖರೀದಿಸಿದ ನಂತರ ಅವುಗಳಿಗೆ ನಿಮ್ಮ ಇಷ್ಟವಾದ ಬಣ್ಣಗಳನ್ನು ಪೈಂಟ್ ಮಾಡೋದಕ್ಕೆ ಒಂದು ಲೆಕ್ಕದಲ್ಲಿ ನೋಡುವುದಾದರೆ ಯಾವುದೇ ಅಡ್ಡಿ ಇರುವುದಿಲ್ಲ ಯಾಕೆಂದರೆ ನೀವು RTO ದವರ ಬಳಿ ನೀವು ಇದರ ಕುರಿತಂತೆ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ನಿಮ್ಮ Registration Certificate ನಲ್ಲಿ ನಿಮ್ಮ ವಾಹನದ ಬಣ್ಣವನ್ನು ಬದಲಾವಣೆ ಮಾಡುವಂತಹ ಅಪ್ಡೇಟ್ ಅನ್ನು ಮಾಡಿದರೆ ಸಾಕು ಯಾವುದೇ ಸಮಸ್ಯೆಗಳನ್ನು ನೀವು ಅನುಭವಿಸ ಬೇಕಾಗಿರುವ ಅಗತ್ಯವಿರುವುದಿಲ್ಲ. ಹೌದು, ಯಾಕೆಂದರೆ RC ನಲ್ಲಿ ಅಧಿಕೃತವಾಗಿ ನಿಮ್ಮ ವಾಹನದ ಬಣ್ಣ ಯಾವುದು ಎನ್ನುವುದನ್ನು ರಿಜಿಸ್ಟರ್ ಮಾಡಲಾಗಿರುತ್ತದೆ ಹಾಗೂ ಇದು ಅತ್ಯಂತ ಪ್ರಮಾಣೀಕೃತವಾದ ದಾಖಲೆಯಾಗಿರುತ್ತದೆ. ನಿಮ್ಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನಲ್ಲಿ ಇರುವಂತಹ ಬಣ್ಣ ಬೇರೆಯಾಗಿದ್ದು ನೀವು ನಿಮಗೆ ಇಷ್ಟ ಆಗಿರುವಂತಹ ಬಣ್ಣವನ್ನು ನಿಮ್ಮ ಕಾರಿಗೆ ಪೇಂಟ್ ಮಾಡಿದರೆ ಆ ಸಂದರ್ಭದಲ್ಲಿ ನಿಮ್ಮನ್ನು ಪೊಲೀಸ್ ಹಿಡಿದರೆ ದೊಡ್ಡ ಅವಾಂತರವಾಗುತ್ತದೆ.
ಹೌದು RTO ದಲ್ಲಿ ನೀವು ಯಾವುದೇ ಅಪ್ಡೇಟ್ ಮಾಡಿಲ್ಲದೆ ಹೋದಲ್ಲಿ ಹಾಗೂ ಅದಾಗಲೇ ನೀವು ಕಾರಿಗೆ ಬೇರೆ ಬಣ್ಣವನ್ನು ಹಾಕಿದ್ರೆ ಆ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿದರೆ ನಿಮ್ಮ ಮೇಲೆ ದೊಡ್ಡ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ ಹಾಗೂ ಮತ್ತೆ ಹೊಸದಾಗಿ ನಿಮ್ಮ RC ಕಾರ್ಡ್ ನಲ್ಲಿರುವಂತಹ ಗಾಡಿಯ ಒರಿಜಿನಲ್ ಬಣ್ಣವನ್ನೇ ಮತ್ತೆ ಪೈಂಟ್ ಮಾಡಿಸಲು ಹೇಳುತ್ತಾರೆ. ಹೀಗಾಗಿ ಇವೆರಡರಿಂದಲೂ ಕೂಡ ತಪ್ಪಿಸಿಕೊಳ್ಳುವುದಕ್ಕಾಗಿ ನೀವು ಮೊದಲಿಗೆ RTO ಅಧಿಕಾರಿಗಳಿಂದ ಅಧಿಕೃತವಾದ ಒಪ್ಪಿಗೆಯನ್ನು ಪಡೆದು RC ಕಾರ್ಡ್ ನಲ್ಲಿ ನಿಮ್ಮ ವಾಹನದ ಬಣ್ಣವನ್ನು ಬದಲು ಮಾಡಿಸಿದಲ್ಲಿ ಮಾತ್ರ ನೀವು ನಿಮಗಿಷ್ಟವಾದ ಬಣ್ಣವನ್ನು ನಿಮ್ಮ ಕಾರಿಗೆ ಹಾಕಿಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ನೀವು ಪೊಲೀಸರಿಗೆ ಸಿಕ್ಕಿ ಬಿದ್ದರೆ ಸಾವಿರಾರು ರೂಪಾಯಿ ದಂಡವನ್ನು ಕೂಡ ಕಟ್ಟಬೇಕಾದಂತಹ ಸಾಧ್ಯತೆ ಇರುತ್ತದೆ.