Karnataka Times
Trending Stories, Viral News, Gossips & Everything in Kannada

Maya Tata: ಟಾಟಾ ಗ್ರೂಪ್ ನಲ್ಲಿ ದೊಡ್ಡ ಸ್ಥಾನ ಹೊಂದಿರುವ ಮಾಯಾ ಟಾಟಾ ಯಾರು ಗೊತ್ತಾ?

Advertisement

ಭಾರತದಲ್ಲಿ ಉದ್ದ ಉದ್ಯಮ ಕ್ಷೇತ್ರದಲ್ಲಿ ಟಾಟಾ ಗ್ರೂಪ್ (Tata Group) ಮತ್ತು ದೊಡ್ಡ ಹೆಸರು. ಟಾಟಾ ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ಫೇಮಸ್ ಆಗಿರುವ ಕಂಪನಿ. ರತನ್ ಟಾಟಾ (Ratan Tata) ಟಾಟಾ ಗ್ರೂಪ್ ಅನ್ನು ಕಟ್ಟಿ ಬೆಳೆಸಿ ಇಂದು ಅದನ್ನ ಅತ್ಯುನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸಿದ್ದಾರೆ. ಒಂದು ವೇಳೆ ರತನ ಟಾಟಾ ತಮ್ಮ ವ್ಯವಹಾರವನ್ನೆಲ್ಲ ನೋಡಿಕೊಳ್ಳುವುದನ್ನು ಬಿಟ್ಟರೆ ಮುಂದೆ ಯಾರಪ್ಪ ಟಾಟಾ ಗ್ರೂಪ್ ಗೆ ಉಸ್ತುವಾರಿಯಾಗಿ ಬರುತ್ತಾರೆ ಅಂತ ಹಲವರಿಗೆ ಕುತೂಹಲ ಇದ್ದೇ ಇರುತ್ತೆ. ಅದಕ್ಕೆ ಉತ್ತರವು ಸಿಕ್ಕಿದೆ ಟಾಟಾ ಗ್ರೂಪ್ನ ಮುಂದಿನ ಪೀಳಿಗೆ ಮಾಯ ಟಾಟಾ (Maya Tata) ಟಾಟಾ ಗ್ರೂಪ್ ಸೇರಿಕೊಂಡಿದ್ದಾರೆ.

Maya Tata ಯಾರು:

ಇತ್ತೀಚಿಗೆ ಟಾಟಾ ಗ್ರೂಪ್ನಲ್ಲಿ ನೀವು ಕೂಡ ಈ ಹೆಸರನ್ನ ಹೆಚ್ಚಾಗಿ ಕೇಳಿರಬಹುದು ಮಾಯಾ ಟಾಟಾ (Maya Tata) ಟಾಟಾ ಗ್ರೂಪ್ ನಲ್ಲಿ ದೊಡ್ಡ ಸ್ಥಾನವನ್ನ ಗೆಟ್ಟಿಸಿಕೊಂಡಿದ್ದಾರೆ ಇಷ್ಟಕ್ಕೂ ಅವರು ಯಾರು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ಅದಕ್ಕೆ ಇಲ್ಲಿದೆ ಸರಿಯಾದ ಉತ್ತರ.

ರತನ್ ಟಾಟಾ (Ratan Tata) ಅವರ ಮಲ ಸೊಸೆ ಹಾಗೂ ಮೊಮ್ಮಗಳು ಮಾಯ ಟಾಟಾ (Ratan Tata). ರತನ್ ಟಾಟಾ ಅವರ ಮಲ ಸೊಸೆ ಮಾಯಾ ಟಾಟಾ ಅವರಿಗೆ 34 ವರ್ಷ ವಯಸ್ಸು. ಇವರು ಹುಟ್ಟಿದಾಗಿನಿಂದ ಭಾರತದಲ್ಲಿ ವಾಸಿಸಿದವರಲ್ಲ. ಆದರೆ ಈಗ ಟಾಟಾ ಗ್ರೂಪ್ ಸೇರಿಕೊಂಡಿದ್ದಾರೆ. ತಮ್ಮ ಸಹೋದರ ಸಹೋದರಿಯಾಗಿರುವ ಲೇಹ್ ಮತ್ತು ನೀವಿಲ್ಲೆ ಜೊತೆಗೆ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ನ ಸದಸ್ಯೆಯಾಗಿ ಸೇರಿಕೊಂಡಿದ್ದಾರೆ. ಮಾಯಾ ಟಾಟಾ ಅವರು ರತನ್ ಟಾಟಾ ಅವರ ಮಲ ಸಹೋದರ ಆಗಿರುವ ನೋಯಲ್ ಟಾಟಾ (Noel Tata) ಹಾಗೂ ಅವರ ಎರಡನೇ ಪತ್ನಿ ಸಿಮೋನ್ ಟಾಟಾ (Simone Tata) ಅವರ ಮೊಮ್ಮಗಳು. ಮಾಯ ಟಾಟಾ ಅವರ ಅಜ್ಜಿ ಸಿಮೋನ್ ಟಾಟಾ ಲ್ಯಾಕ್ಮಿ ಹಾಗೂ ಟ್ರೆಂಟ್ ಕಂಪನಿಯನ್ನು ಸ್ಥಾಪಿಸಿದವರು.

 

Maya Tata ಅವರ ಶಿಕ್ಷಣ:

ಮಾಯ ಟಾಟಾ (Maya Tata) ಓದಿರುವುದು ಯುಕೆಯ ಬಿ ಎಸ್ ಬಿಸಿನೆಸ್ ಸ್ಕೂಲ್ ಹಾಗೂ ವಾರ್ವಿಕ್ ಯುನಿವರ್ಸಿಟಿಯಲ್ಲಿ. ಟಾಟಾ ಕಂಪನಿಯ ಸಂಘ ಸಂಸ್ಥೆ ಆಗಿರುವ ಟಾಟಾ ಆಪರ್ಚುನಿಟಿ ಫಂಡ್ ಗೆ ಮಾಯ ಟಾಟಾ ಸೇರಿದ್ದು ತಮ್ಮ ಕುಟುಂಬದ ವ್ಯಾಪಾರ ನಿರ್ವಹಣೆಗೆ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ಇವರು ಪೋರ್ಟ್ಫೋಲಿಯೋ ನಿರ್ವಹಣೆ ಹಾಗೂ ಹೂಡಿಕೆದಾರರ ಸಂಬಂಧಿತ ವ್ಯವಹಾರದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದು, ಕಾರ್ಪೊರೇಟ್ ಪ್ರಪಂಚದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ.

ಟಾಟಾ ಆಪರ್ಚುನಿಟಿ ಫಂಡ್ ಮುಚ್ಚಿದ ನಂತರ ಮಾಯ ತಮ್ಮ ವೃತ್ತಿ ಜೀವನದಲ್ಲಿ ಹೊಸ ಆಯಾಮವನ್ನು ಕಂಡುಕೊಂಡರು ಟಾಟಾ ಗ್ರೂಪ್ ನ ಅಂಗ ಸಂಸ್ಥೆಯಾಗಿರುವ ಟಾಟಾ ಡಿಜಿಟಲ್ ಅನ್ನು ಸೇರಿದರು. ಟಾಟಾ ಡಿಜಿಟಲ್ ಗಾಗಿ ಸಾವಿರ ಕೋಟಿ ರೂಪಾಯಿಗಳ ಇನ್ವೆಸ್ಟ್ಮೆಂಟ್ ಮಾಡಲಾಗಿದೆ. ಟಾಟಾ ಸಹಯೋಗದಲ್ಲಿ ಹೊಸ ಅಪ್ಲಿಕೇಶನ್ ಕೂಡ ಬಿಡುಗಡೆ ಮಾಡಲು ಮಾಯ ಟಾಟಾ ಡಿಜಿಟಲ್ ನೊಂದಿಗೆ ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಮಾಯಾ ಅವರು ಟಾಟಾ ಗ್ರೂಪ್ನ ಕೆಲವು ವ್ಯವಹಾರಗಳಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ರತನ್ ಟಾಟಾ ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್ ನಲ್ಲಿ ಜೊತೆಗೆ ಮಾಯಾ ಟಾಟಾ ಅವರನ್ನು ಕೂಡ ಸೇರಿಸಿದ್ದಾರೆ. ಒಟ್ಟಿನಲ್ಲಿ ಮಾಯ ಟಾಟಾ ತಮ್ಮ ಕೌಟುಂಬಿಕ ಬಿಸಿನೆಸ್ ನಲ್ಲಿ ಸೇರಿಕೊಂಡಿದ್ದು ಟಾಟಾ ಗ್ರೂಪ್ ದೇಶದಲ್ಲಿ ಇನ್ನಷ್ಟು ಬೆಳವಣಿಗೆ ಆಗುವುದಕ್ಕೆ ಪ್ರಮುಖ ಕಾರಣವೂ ಆಗಬಹುದು.

Leave A Reply

Your email address will not be published.