KSRTC: ಬೆಳ್ಳಂಬೆಳಿಗ್ಗೆ KSRTC ವಿಷಯವಾಗಿ ಪುರುಷರಿಗೆ ಅಧಿಕೃತವಾಗಿ ಸಿಹಿಸುದ್ದಿ ಕೊಟ್ಟ ಸಾರಿಗೆ ಸಚಿವರು

Advertisement
ಕಾಂಗ್ರೆಸ್ ನ (Congress) ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಜಾರಿ ಬಂದಿದ್ದು ಜನರು ಕೂಡ ಯೋಜನೆಗಳನ್ನು ಬಳಕೆ ಮಾಡುತ್ತಿದ್ದಾರೆ, ಈ ಮೂಲಕ ಅದರಲ್ಲಿ ಶಕ್ತಿ ಯೋಜನೆಯು ಬಹಳಷ್ಟು ಸುದ್ದಿಯಲ್ಲಿದೆ, ಈ ಯೋಜನೆ ಕುರಿತಂತೆ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ , ಉತ್ತರ ಕರ್ನಾಟಕದ ಎಲ್ಲಾ ಬಸ್ಸುಗಳು ತುಮಕೂರು ನಗರದ ಮೂಲಕವೇ ಚಲಿಸುವುದರಿಂದ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು, ಈಗಾಗಲೇ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಇನ್ನು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನೇಮಕ ಮಾಡಲಾಗುವುದು
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ ಖಾಲಿ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಲಾಗುವುದು, ಈಗಾಗಲೇ 13 ಸಾವಿರ ಚಾಲಕ ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅವಕಾಶ ದೊರೆತಿದ್ದು, ಕೂಡಲೇ ನೇಮಕ ಮಾಡಲಾಗುವುದು ಎಂದರು.
ನೇಮಕಾತಿ ಪ್ರಕ್ರಿಯೆ ನಡೆದಿಲ್ಲ
7 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಈ ವರ್ಷ ಹೊಸ ನೇಮಕಾತಿ ಮಾಡಿಕೊಳ್ಳಲು ಸಿದ್ದತೆ ನಡೆಸಲಾಗಿದೆ, ಅಲ್ಲದೇ ಹೊಸ ಬಸ್ಸುಗಳ ಖರೀದಿ ಮಾಡಲು ಅನುದಾನ ಬಿಡುಗಡೆ ಗೊಳಿಸಿದ್ದು ಹೊಸ ಬಸ್ ಗಳು ಕೂಡ ರಸ್ತೆಗೆ ಇಳಿಯಲಿವೆ.
ನೋಂದಣಿ ಮಾಡಲು ಇಲ್ಲ
ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ 15 ವರ್ಷದಿಂದ ಬಳಕೆ ಮಾಡುತ್ತಿದ್ದ ಸರ್ಕಾರಿ ವಾಹನ ನೋಂದಣಿ ಮಾಡಲು ಅವಕಾಶವಿಲ್ಲ. ಇನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಎಲ್ಲಾ ಕಾರ್ಯ ಗಳನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ
ಒಟ್ಟಿನಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಗಳು ದೊರೆತಿದ್ದು ಬಹಳಷ್ಟು ಮಹಿಳೆಯರು ಬಳಕೆ ಮಾಡುತ್ತಿದ್ದಾರೆ, ಈ ಮೂಲಕ ವಾಹನ ಸಾರಿಗೆ ಇಲಾಖೆಯಲ್ಲಿ ಹೊಸ ಖಾಲಿ ಹುದ್ದೆಗಳನ್ನು ನೇಮಕ ಮಾಡಿ ಹೊಸ ಬಸ್ ಕೂಡ ರಸ್ತೆಗೆ ಇಳಿಯಲಿದೆ