ರಾಜ್ಯಾದ್ಯಂತ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬಂದಿರುವಂತಹ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ರಾಜ್ಯದ ಒಳಗೆ ಕೆಎಸ್ಆರ್ಟಿಸಿ(KSRTC) ಬಸ್ಸುಗಳಲ್ಲಿ ನೀಡುವಂತಹ ಶಕ್ತಿ ಯೋಜನೆಯನ್ನು ಜೂನ್ 16 ರಿಂದ ಪ್ರಾರಂಭ ಮಾಡಿದ್ದು ರಾಜ್ಯದಂತ ಪ್ರತಿದಿನ ಲಕ್ಷಾಂತರ ಮಹಿಳೆಯರು ಈಗ ಉಚಿತ ಬಸ್ ಪ್ರಯಾಣದ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದು ಕಡೆ ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂಬುದಾಗಿ ಹೇಳಲಾಗುತ್ತದೆ. ಇನ್ನೊಂದು ಕಡೆ ಇದರಿಂದಾಗಿ ಯಾವುದು ನಷ್ಟ ಆಗುತ್ತಿಲ್ಲ ಮಾತ್ರವಲ್ಲದೆ ದೇವಸ್ಥಾನಗಳಲ್ಲಿ ಕೂಡ ಆದಾಯ ಹೆಚ್ಚಾಗುತ್ತಿದೆ ಎಂಬುದಾಗಿ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ರೆ ಬನ್ನಿ ಇವತ್ತಿನ ಆರ್ಟಿಕಲ್ ನಲ್ಲಿ ಶಕ್ತಿ ಯೋಜನೆ(Shakthi Yojane) ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳೋಣ.
ಶಕ್ತಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವ ಮುಂಚೆ ಮಹಿಳೆಯರು ಕೆಲವೊಂದು ವಿಚಾರಗಳನ್ನು ಪ್ರಮುಖವಾಗಿ ಗಮನಿಸಿಕೊಳ್ಳಬೇಕಾಗುತ್ತದೆ ಹೀಗಾಗಿ ಬನ್ನಿ ಆ ಪ್ರಮುಖ ವಿಚಾರಗಳೇನು ಹಾಗೂ ಮಹಿಳೆಯರು ಶಕ್ತಿ ಯೋಜನೆ ಸಂದರ್ಭದಲ್ಲಿ ಪಾಲಿಸಬೇಕಾದಂತಹ ನಿಯಮಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ ಪ್ರಯಾಣವನ್ನು ಮಾಡಲು ಪ್ರಮುಖವಾಗಿ ಅವರು ಶಕ್ತಿ ಸ್ಮಾರ್ಟ್ ಕಾರ್ಡ್(Shakthi Smart Card) ಅನ್ನು ಹೊಂದಿರಬೇಕಾಗುತ್ತದೆ ಇಲ್ಲದವರು ಸೇವಾ ಸಿಂಧು ಪೋರ್ಟಲ್ ಮೂಲಕ ರಿಜಿಸ್ಟರ್ ಮಾಡಿಕೊಂಡು ಈ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ಇನ್ನು ಕೂಡ ನೀವು ಸ್ಮಾರ್ಟ್ ಕಾರ್ಡ್ ಮಾಡಿಕೊಂಡಿಲ್ಲ ಎಂದಾದರೆ ಆ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಸೇರಿದಂತೆ ಭಾರತ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಮಾಣಿಕರಿಸಿರುವಂತಹ ಯಾವುದೇ ಗುರುತು ಪತ್ರಗಳನ್ನು ಕೂಡ ಬಳಸಿಕೊಳ್ಳಬಹುದಾಗಿದೆ. ಇವುಗಳನ್ನು ತೋರಿಸಿದರೆ ಮಾತ್ರ ನೀವು ಉಚಿತ ಬಸ್ ಪ್ರಯಾಣದ ಟಿಕೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯದ ಒಳಗೆ ಮಾತ್ರ ಕೆಎಸ್ಆರ್ಟಿಸಿ ನಿಗಮದ ನಾಲ್ಕು ಅಂಗಸಂಸ್ಥೆಗಳ ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಂತಹ ಅವಕಾಶವನ್ನು ನೀಡಲಾಗಿದ್ದು, ETM ಮಷೀನ್ ಗಳಲ್ಲಿ ನೀಡಿರುವಂತಹ ಟಿಕೆಟ್ ಆಧಾರದ ಮೇಲೆ ಹಣವನ್ನು ಲೆಕ್ಕಾಚಾರ ಮಾಡಿ ಕೆಎಸ್ಆರ್ಟಿಸಿ ನಿಗಮಕ್ಕೆ ಸರ್ಕಾರ ಹಣವನ್ನು ಪಾವತಿ ಮಾಡುತ್ತದೆ. ಮಹಿಳೆಯರಿಗೆ ಮುಂಗಡ ಸೀಟ್ಗಳನ್ನು ಕೂಡ ಬುಕ್ ಮಾಡುವಂತಹ ಅವಕಾಶವನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಿದ ನಂತರ ಪುರುಷರಿಗೆ ಹಾಸನದ ವ್ಯವಸ್ಥೆ ಇಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಆದರೆ KSRTC ಈಗಾಗಲೇ ಪುರುಷರಿಗೆ ಬಸ್ಸಿನಲ್ಲಿ 50 ಪ್ರತಿಶತ ಸೀಟಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂಬುದಾಗಿ ಸ್ಪಷ್ಟಪಡಿಸಿದೆ. ಎಸಿ ಹಾಗೂ ಕೆಲವೊಂದು ಸ್ಪೆಷಲ್ ಬಸ್ಸುಗಳನ್ನು ಹೊರತುಪಡಿಸಿ ಪ್ರತಿಯೊಂದು ಸರ್ಕಾರಿ ಬಸ್ಸುಗಳಲ್ಲಿ ಕೂಡ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಲಾಗಿದೆ. ಆದರೆ ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್ ಹೊಂದಿರಬೇಕು ಇಲ್ಲವಾದಲ್ಲಿ ಕೊನೆ ಪಕ್ಷ ನೀವು ಕರ್ನಾಟಕದ ಮಹಿಳೆ ಎನ್ನುವ ಗುರುತು ಪತ್ರವಾದರೂ ಇರಲೇಬೇಕು ಎಂಬುದನ್ನು ಕೂಡ ಸಾರಿಗೆ ನಿಗಮ ಸ್ಪಷ್ಟಪಡಿಸಿದೆ.