RTO New Rules: ಕಾರಿನಲ್ಲಿ ಇನ್ಮೇಲೆ ಈ ರೀತಿಯ ಸ್ಟಿಕರ್ ಅಂಟಿಸುವಂತಿಲ್ಲ! RTO ಹೊಸ ರೂಲ್ಸ್

Advertisement
ನಾವು ವಾಹನ ಖರೀದಿ ಮಾಡಿ ವಾಹನವನ್ನು ರೋಡಿಗೆ ಇಳಿಸಿದ ನಂತರ ಅದರ ಬಗ್ಗೆ ಇರುವ ಪ್ರತಿಯೊಂದು ನಿಯಮಗಳು ಕೂಡ ನಮಗೆ ಗೊತ್ತಿರಬೇಕು. ಇಲ್ಲವಾದಲ್ಲಿ ವಿನಾಕಾರಣ ದಂಡಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ ವಾಹನ ಚಲಾಯಿಸುವಾಗ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಇರಬೇಕು, ದ್ವಿಚಕ್ರವಾಹನನಾಗಿದ್ದರೆ ಹೆಲ್ಮೆಟ್ ಧರಿಸಬೇಕು ಇಂತಹ ಸಾಮಾನ್ಯ ನಿಯಮಾವಳಿಗಳು ಎಲ್ಲರಿಗೂ ಗೊತ್ತಿರುತ್ತೆ. ಆದರೆ ಇದನ್ನು ಹೊರತುಪಡಿಸಿ ಇನ್ನೂ ಕೆಲವು ನಿಯಮಗಳು ಇದ್ದು, ಇದನ್ನು ಉಲ್ಲಂಘನೆ ಮಾಡಿದ್ರೆ ಭಾರಿ ಮೊತ್ತದ ದಂಡ ಪಾವತಿ ಮಾಡಬೇಕಾಗುತ್ತದೆ.
ಇತ್ತೀಚಿಗೆ ನೋಯಿಡಾ ಮತ್ತು ಗಾಜಿಯಾಬಾದ್ ನಲ್ಲಿ ಪೊಲೀಸರು ವಾಹನದ ಮೇಲೆ ಜಾತಿ ಧರ್ಮದ ಸ್ಟಿಕರ್ ಅಥವಾ ಇದರ ಪೋಸ್ಟರ್ ಅಂಟಿಸಿಕೊಂಡು ಓಡಾಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಹೌದು ಕಳೆದ ಕೆಲವು ದಿನಗಳಿಂದ ನೋಯ್ಡಾ ಹಾಗೂ ಗಾಜಿಯಾಬಾದ್ ಭಾಗದಲ್ಲಿ ಜಾತಿ ಹಾಗೂ ಧರ್ಮವನ್ನು ಸೂಚಿಸುವಂತಹ ಸ್ಟಿಕರ್ಗಳನ್ನು ತಮ್ಮ ವಾಹನಕ್ಕೆ ಅಂಟಿಸಿಕೊಂಡು ತಿರುಗಾಡುತ್ತಿದ್ದಾರೆ. ಅಂತಹ ಸುಮಾರು 2300 ವಾಹನಗಳಿಗೆ ಈಗಾಗಲೇ ಚಲನ ನೀಡಲಾಗಿದೆ.
ಜಾತಿ ಧರ್ಮವನ್ನು ತೋರಿಸುವಂತ ಸ್ಟಿಕರ್ ಅಂಟಿಸಿಕೊಂಡು ಓಡಾಡುವವರ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ. ವಾಹನಗಳ ಗ್ಲಾಸ್ ಮೇಲೆ ಅಥವಾ ಯಾವುದೇ ವಿಭಾಗದಲ್ಲಿ ಜಾತಿ ಧರ್ಮ ತೋರಿಸುವ ಸ್ಟಿಕರ್ ಅಂಟಿಸಿಕೊಂಡಿದ್ದರೆ ಸಾವಿರ ರೂಪಾಯಿ ದಂಡ ಹಾಗೂ ನಂಬರ್ ಪ್ಲೇಟ್ ನಲ್ಲಿ ಸ್ಟಿಕರ್ ಅಂಟಿಸಿದರೆ 5000 ವರೆಗೆ ದಂಡ ವಿಧಿಸಲಾಗುತ್ತಿದೆ.
ಕಾನೂನಿನ ನಿಯಮಗಳು:
1989ರ ಮೋಟಾರ್ ವಾಹನ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಯಾವುದೇ ವ್ಯಕ್ತಿ ವಾಹನದ ನೋಂದಣಿ ಅಥವಾ ನಂಬರ್ ಪ್ಲೇಟ್ ಮೇಲೆ ಸ್ಟಿಕರ್ ಅಂಟಿಸುವಂತಿಲ್ಲ. ನಂಬರ್ ಪ್ಲೇಟ್ (Number Plate) ಮೇಲೆ ಸ್ಟಿಕರ್ (Sticker) ಅಥವಾ ಲೇಬಲ್ (Label) ಅಂಟಿಸಿದರೆ ಅದು ಮೋಟಾರ್ ವಾಹನ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ ಹಾಗೂ ಇದು ಅಪರಾಧ ಎಂದು ಕರೆಸಿಕೊಳ್ಳುತ್ತದೆ. ನಂಬರ್ ಪ್ಲೇಟ್ ಒಂದು ಎಂಎಂ ಅಲ್ಯೂಮಿನಿಯಂ ನಿಂದ ಮಾಡಿರಬೇಕು. ನಂಬರ್ ಪ್ಲೇಟ್ ಗಟ್ಟಿಯಾಗಿರಬೇಕು. ಇನ್ನು ನಂಬರ್ ಪ್ಲೇಟ್ ಎಡ ಭಾಗದಲ್ಲಿ ದೊಡ್ಡ ಅಕ್ಷರದಲ್ಲಿ ನೀಲಿ ಬಣ್ಣದಲ್ಲಿ IND ಅಕ್ಷರಗಳನ್ನು ಬರೆಯುವುದು ಕಡ್ಡಾಯ ಎಂದು 1989 ಮೋಟರ್ ವಾಹನ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇನ್ನು ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 192 ರ ಪ್ರಕಾರ ಯಾವುದೇ ಹಣದ ನಂಬರ್ ಪ್ಲೇಟ್ (Number Plate) ಸರಿಯಾಗಿ ಕಾಣಿಸಿದೆ ಇದ್ದರೆ ಅಥವಾ ಅದರ ಮೇಲೆ ಸ್ಟಿಕರ್ (Sticker) ಅಥವಾ ಲೇಬಲ್ ಅಂಟಿಸಿದರೆ 5,000 ರೂ, ವರೆಗೆ ಚಲನ ಕಟ್ಟಬೇಕು. ಈ ತಪ್ಪನ್ನು ಮತ್ತೆ ಚಾಲಕ ಪುನರಾವರ್ತಿಸಿದರೆ ಒಂದು ವರ್ಷದ ಜೈಲು ಊಟ ಹಾಗೂ ಸಾವಿರ ರೂಪಾಯಿಗಳ ತಂಡ ಫಿಕ್ಸ್. ಇನ್ನು ಮೋಟಾರ್ ವಾಹನ ಕಾಯ್ದೆ 1998ರ ಸೆಕ್ಷನ್ 179ರ ಅಡಿಯಲ್ಲಿ ಚಾಲಕ ಭದ್ರತಾ ಏಜೆನ್ಸಿಗಳು ಸರ್ಕಾರದ ನಿಯಮ ಅಥವಾ ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಅವರಿಗೆ ದಂಡ ವಿಧಿಸಲಾಗುವುದು. ರಿಸೆಪ್ಶನ್ ಅಡಿಯಲ್ಲಿ ಸ್ಟಿಕ್ಕರ್ ಅಂಟಿಸಿದರೆ 500 ರೂಪಾಯಿಗಳ ಬಗ್ಗೆ ದಂಡ ವಿಧಿಸಲಾಗುತ್ತಿತ್ತು. ಆದರೆ 2019ರ ನಂತರ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ ಈಗ ಕವನಗಳ ಮೇಲೆ ಜಾತಿ ಧರ್ಮದ ಸ್ಟಿಕರ್ ಅಂಟಿಸಿಕೊಂಡಿದ್ದು ಗಮನಕ್ಕೆ ಬಂದರೆ 2000 ರೂಪಾಯಿಗಳ ದಂಡ ಪಾವತಿಸಬೇಕು.
ಉತ್ತರ ಪ್ರದೇಶದ ಸಂಚಾರ ನಿರ್ದೇಶನಾಲಯ ಅಗಸ್ಟ್ ಹತ್ತರಿಂದ ಹೊಸ ಆದೇಶವನ್ನು ಹೊರಡಿಸಿದ್ದು ಜಾತಿ ಧರ್ಮದ ಸ್ಟಿಕರ್ ಅನ್ನು ವಾಹನದ ಮೇಲೆ ಹಾಕಿಕೊಳ್ಳುವವರ ವಿರುದ್ಧ ವಿಶೇಷ ಅಭಿಯಾನ ಪ್ರಾರಂಭಿಸಬೇಕು ಯಾರಾದರೂ ಸಿಕ್ಕಿ ಬಿದ್ದರೆ ಅವರಿಗೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.