ಬಿಗ್ ಬಾಸ್ ಸೀಸನ್ 9ರ ವಿನ್ನರ್ (Bigg Boss Kannada) ಆಗಿ ಮಿಂಚಿದ ರೂಪೇಶ್ ಶೆಟ್ಟಿ (Roopesh Shetty) ಬಿಗ್ ಬಾಸ್ ವಿನ್ ಆದ ನಂತರ ಯಾವುದೇ ಅಪ್‌ಡೇಟ್ ಸಿಗದೇ ಇದ್ದ ಅಭಿಮಾನಿಗಳಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಉತ್ತಮ ಆಟಗಾರರು ಆಗಿದ್ದರು . ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಮಿಂಚಿದರು,
ಆರ್ ಜೆ ಜೊತೆಗೆ ನಟ ಹಾಗೂ ನಿರ್ದೇಶಕ ಆಗಿರುವ ರೂಪೇಶ್
ಗಿರಿಗಿಟ್ (Girgit) ತುಳು ಚಿತ್ರ ಖ್ಯಾತಿಯ ಪ್ರತಿಭಾವಂತ ನಾಯಕ ನಟ ರೂಪೇಶ್ ಶೆಟ್ಟಿ ಅಗಿದ್ದಾರೆ, ಆರ್ ಜೆ (RJ) ಜೊತೆಗೆ ನಟ ಹಾಗೂ ನಿರ್ದೇಶಕ ಕೂಡ ಆಗಿರುವ ರೂಪೇಶ್ ಹಲವಾರು ತುಳು ಚಿತ್ರದಲ್ಲಿ ನಟಿಸಿ ಫೇಮ್ ಕ್ತಿಯೇಟ್ ಮಾಡಿಕೊಂಡಿದ್ದಾರೆ, 2016ರಲ್ಲಿ ಇವರು ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 2015ರ ಡೇಂಜರ್ ಜೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿದರು.
ಜೂನ್ 23 ಕ್ಕೆ ರೂಪೇಶ್ ನಿರ್ದೇಶನದ ತುಳು ಸಿನೆಮಾ ಸರ್ಕಸ್ ತೆರೆಗೆ
ಸರ್ಕಸ್ ಚಿತ್ರದ ಟೈಟಲ್ ಟ್ರ್ಯಾಕ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಂಗಳೂರಿನ ಬಿಗ್ ಸಿನಿಮಾಸ್‍ನಲ್ಲಿ ರಿಲೀಸ್ ಅಗಿದ್ದು, ಕನ್ನಡದ ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಹಾಡಿಗೆ ಲೋಯ್ ವಾಲೆಂಟೈನ್ ಸಲ್ದಾನ ಇವರ ಸಂಗೀತವಿದೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಜೂನ್ 23 ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಏಕಕಾಲದಲ್ಲಿ ವಿದೇಶದಲ್ಲೂ ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದಾರೆ
ತುಳುನಾಡಿನ ಖ್ಯಾತ ಹಾಸ್ಯ ದಿಗ್ಗಜರು ಇದ್ದಾರೆ
ತುಳುನಾಡಿನ ಹಾಸ್ಯ ಕಲಾವಿದರಾದ ಅರವಿಂದ್ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಬೈಲೂರು, ಸಂದೀಪ್ ಶೆಟ್ಟಿ ಸೇರಿದಂತೆ ತುಳು ಚಿತ್ರರಂಗದ ದಿಗ್ಗಜರ ದಂಡೇ ಈ ಚಿತ್ರದಲ್ಲಿದ್ದು ಕಾಮಿಡಿಯ ದಮಾಖ ಆಗಲಿದೆ. ಸರ್ಕಸ್ ಸಿನಿಮಾದಲ್ಲಿ 3 ಹಾಡುಗಳಿದ್ದು , ಟೈಟಲ್ ಸಾಂಗ್ ರಿಲೀಸ್ ಆಗಿದೆ. ಬಿಗ್ ಬಾಸ್‍ಗೆ ಹೋದ ಕಾರಣ ಸಿನಿಮಾ ರಿಲೀಸ್ ತಡವಾಯ್ತು ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ