PM Kisan: ಕೇಂದ್ರದ ಈ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿ ಮಾಡಿದ್ರೆ 4 ಲಕ್ಷ ಸಹಾಯಧನ, ಈಗಲೇ ಅರ್ಜಿ ಸಲ್ಲಿಸಿ

Advertisement
ಮೋದಿ ಸರ್ಕಾರ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೃಷಿಗೆ ಹಚ್ಚಿನ ಹಣ ಮೀಸಲಿಟ್ಟಿದೆ. ಅದೇ ರೀತಿ ರೈತರಿಗೆ ನೀಡುವ ಸಾಲದ ಮೊತ್ತವನ್ನು ಕೂಡಾ ಹೆಚ್ಚಿಸಿದೆ.ರೈತರ ಆದಾಯವನ್ನು ಹೆಚ್ಚಿಸಲು ,ಆರ್ಥಿಕವಾಗಿ ಸಧೃಢರನ್ನಾಗಿ ಮಾಡಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಪಿಎಂ ಕಿಸಾನ್ (Pm kissan),ಅಡಿಯಲ್ಲಿ ರೈತರ ಖಾತೆಗೆ ವಾರ್ಷಿಕ 6000 ರೂ.ಜಮಾ ಮಾಡುತ್ತಿದ್ದು,ಅದರ ಜೊತೆಗೆ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಯಾವುದೇ ರೈತರು ಸ್ವಂತವಾಗಿ ಟ್ರಾಕ್ಟರ್ ಖರೀದಿ ಮಾಡಬೇಕೆಂದು ಬಯಸಿದ್ದೆ ಆದರೆ ಕೇಂದ್ರ ನೆರವು ದೊರಕುತ್ತದೆ. ಪಿಎಂ ಕಿಸಾನ್ ಅಡಿಯಲ್ಲಿ ಟ್ರಾಕ್ಟರ್ (Tractor) ಖರೀದಿ ಮಾಡಲು ಶೇ 50ರಷ್ಟು ಸಬ್ಸಿಡಿ (Subsidy) ನೀಡುತ್ತಿದೆ.
ಆಧುನಿಕ ಯುಗದಲ್ಲಿ ಕೃಷಿಗೆ ಟ್ರ್ಯಾಕ್ಟರ್ ಅತೀ ಅವಶ್ಯಕ. ಅದರಲ್ಲಿಯೂ ಉತ್ತಿ ಬಿತ್ತಲು ರೈತರು ಬಾಡಿಗೆ ಟ್ರ್ಯಾಕ್ಟರ್ ಪಡೆದು ಕಷ್ಟ ನಷ್ಟ ಅನುಭವಿಸುತ್ತಿರುವುದನ್ನು ಮನಗಂಡ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ಅರ್ಧ ಬೆಲೆಗೆ ಟ್ರ್ಯಾಕ್ಟರ್ಗಳನ್ನು ನೀಡಲು ಮುಂದಾಗಿದೆ.
ಕೇಂದ್ರ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಸಬ್ಸಿಡಿ ನೀಡುತ್ತಲಿದೆ. ಈ ಮೂಲಕ ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್ಗಳನ್ನು ಅರ್ಧ ಬೆಲೆಗೆ ಖರೀದಿಸಬಹುದು. ಉಳಿದ ಅರ್ಧದಷ್ಟು ಹಣವನ್ನು ಸಹಾಯಧನವಾಗಿ ಸರ್ಕಾರವೇ ಭರಿಸುತ್ತದೆ. ಕೇಂದ್ರ ಮಾತ್ರ ಅಲ್ಲದೆ ಅನೃಕ ರಾಜ್ಯದಲ್ಲಿ ರೈತರು ಕೃಷಿ ಯಂತ್ರಗಳನ್ನು ಖರೀದಿಸುವಾಗ ಸರ್ಕಾರ ಸಬ್ಸಿಡಿಗಳನ್ನು ನೀಡುತ್ತಾ ಬಂದಿದೆ. ಕೆಲವೊಂದು ರಾಜ್ಯ ಸರ್ಕಾರಗಳು ಶೇಕಡಾ 20 ರಿಂದ 50 ರಷ್ಟು ಸಬ್ಸಿಡಿಯನ್ನು ಸಹ ನೀಡುತ್ತವೆ. ಟ್ರ್ಯಾಕ್ಟರ್ ಖರೀದಿಗೆ 4 ಲಕ್ಷದಷ್ಟು ಸಹಾಯಧನ ಕೂಡಾ ಲಭ್ಯವಾಗಲಿದೆ.
ಕೇಂದ್ರ ಈ ಸಬ್ಸಿಡಿಯನ್ನುಒಂದು ಟ್ರಾಕ್ಟರ್ ಖರೀದಿಗೆ ಮಾತ್ರ ನೀಡುತ್ತದೆ. ಯಾವುದೇ ರೈತರು ಈ ಯೋಜನೆಯ ಲಾಭ ಪಡೆಯಲು ಬಯಸಿದ್ದೆ ಆದರೆ ಇದಕ್ಕೆ ಅಗತ್ಯವಾದ ದಾಖಲೆಗಳಾಗಿ ಆಧಾರ್ ಕಾರ್ಡ್(Adhar card), ಜಮೀನು ಕಾಗದ, ಬ್ಯಾಂಕ್ ವಿವರಗಳು, ಪಾಸ್ಪೋರ್ಟ್ (Passport) ಅಳತೆಯ ಫೋಟೋ (Photo) ಮತ್ತಿತ್ತರ ದಾಖಲೆಗಳೊಂದಿಗೆ ಯಾವುದೇ ಹತ್ತಿರದ ಸಿಎಸ್ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.ಆನ್ ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ.
ನಾವು ಟ್ಯಾಟ್ಟರ್ ತೇಗದಕೋಳಬೇಕು