ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಪ್ರತಿದಿನ ಒಂದಲ್ಲ ಒಂದು ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಕುತೂಹಲ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಎಟಿಎಂ ಮಷೀನ್ ಬಾಡಿಗೆ(ATM Machine Rent) ತಿಂಗಳಿಗೆ ಎಷ್ಟು ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ ಬನ್ನಿ. ಖಂಡಿತವಾಗಿ ಇದು ಒಂದು ವೇಳೆ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸ್ವತಹ ನೀವೇ ಖುದ್ದಾಗಿ ಈ ರೀತಿ ನಿಮ್ಮ ಜಾಗವನ್ನು ಎಟಿಎಂ ಮಷೀನ್ ಹಾಕಿಸಿಕೊಳ್ಳುವುದಕ್ಕಾಗಿ ನೀಡಿದರೆ ಆಗ ನೀವು ಎಷ್ಟು ಬಾಡಿಗೆ ಪಡೆಯಬಹುದು ಎನ್ನುವಂತಹ ಜ್ಞಾನ ಕೂಡ ನಿಮಗೆ ಇರುತ್ತದೆ.
ಸಾಮಾನ್ಯವಾಗಿ ಬ್ಯಾಂಕಿಂಗ್(Banking) ವ್ಯವಸ್ಥೆಯನ್ನು ಬಳಸುವಂತಹ ಪ್ರತಿಯೊಬ್ಬರಿಗೂ ಕೂಡ ಎಟಿಎಂ ಮಷೀನ್ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಒಂದು ಸಾಧನವಾಗಿದೆ. ಹೀಗಾಗಿ ಖಂಡಿತವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಎಟಿಎಂ ಮಷೀನ್ ಗಳ ಅಗತ್ಯ ಸಂಪೂರ್ಣವಾಗಿ ಪ್ರಮುಖವಾಗಿರುತ್ತದೆ. ಯಾಕೆಂದ್ರೆ ಬ್ಯಾಂಕ್ ನೀಡುವಂತಹ ATM ಕಾರ್ಡ್ ಅನ್ನು ನೀವು ಕ್ಯಾಶ್ ತೆಗೆಯಲು ಬಳಸಲು ಇರುವಂತಹ ಏಕೈಕ ಮಾರ್ಗ ಎಂದರೆ ಅದು ಎಟಿಎಂ ಮಷೀನ್. ಹೀಗಾಗಿ ಖಂಡಿತವಾಗಿ ಎಟಿಎಂ ಮಷೀನ್ ಗಳು ಪ್ರತಿಯೊಂದು ಬ್ಯಾಂಕ್ ಬ್ರಾಂಚ್ ಗಳ ಬಳಿ ಇರಬೇಕಾಗಿರುವುದು ಅತ್ಯಗತ್ಯವಾಗಿದೆ. ಇದಕ್ಕೂ ಮುಖ್ಯವಾಗಿ ಎಟಿಎಂ ಮಷೀನ್ ಅನ್ನು ಎಲ್ಲಿ ಇರಿಸಬೇಕು ಎನ್ನುವುದರ ಬಗ್ಗೆ.
ಸಾಮಾನ್ಯವಾಗಿ ಹೆಚ್ಚಾಗಿ ನೋಡಲು ಹೋಗುವುದಾದರೆ ಎಟಿಎಂ ಮಷಿನ್ ಗಳು ಬ್ಯಾಂಕಿನ ಪಕ್ಕದಲ್ಲಿ ಇರುವಂತಹ ಯಾವುದಾದರೂ ಚಿಕ್ಕ ರೂಂನಲ್ಲಿ ಎಟಿಎಂ ಅನ್ನು ಎಸಿ ಯ ಜೊತೆಗೆ ಹಾಕಿಬಿಡುತ್ತಾರೆ. ಕೆಲವೊಮ್ಮೆ ಜಾಗ ಸಿಗದೆ ಹೋದಲ್ಲಿ ಹಾಗೂ ಹೆಚ್ಚಿನ ಎಟಿಎಂ ಮಷೀನ್ ಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಹಾಕುವಾಗ ಜಾಗ ಸಿಗದೆ ಹೋದರೆ ಆಗ ಕೆಲವರ ಜಾಗದಲ್ಲಿ ಪ್ರತಿ ತಿಂಗಳ ಬಾಡಿಗೆಗೆ ಎಟಿಎಂ ಮಷೀನ್ ಅನ್ನು ಹಾಕುವಂತಹ ಪ್ರಕ್ರಿಯೆ ಕೂಡ ಇದೆ. ಒಂದು ವೇಳೆ ನಿಮ್ಮ ಜಾಗದಲ್ಲಿ ಎಟಿಎಂ ಮಷೀನ್ ಅನ್ನು ಹಾಕಲು ನೀವು ಅನುಮತಿ ನೀಡಿದರೆ ಆಗ NBFC ನಿಮಗೆ ಎಷ್ಟು ಹಣವನ್ನು ನೀಡಬೇಕು ಎಂಬುದನ್ನು ಇಂದಿನ ಆರ್ಟಿಕಲ್ ನಲ್ಲಿ ತಿಳಿಯೋಣ ಬನ್ನಿ. ಒಂದು ವೇಳೆ ನಿಮಗೂ ಕೂಡ ಮುಂದಿನ ದಿನಗಳಲ್ಲಿ ಈ ರೀತಿ ಅವಕಾಶ ಹುಡುಕಿಕೊಂಡು ಬಂದರೆ ಈ ಮಾಹಿತಿಗಳು ನಿಮಗೆ ಸಹಾಯಕವಾಗುತ್ತವೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಇಂದಿನ ವಿಷಯದ ಪ್ರಮುಖ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ನೀವು ಒಂದು ವೇಳೆ ಬ್ಯಾಂಕಿನ ಎಟಿಎಂ ಮಷೀನ್ ಅನ್ನು ನಿಮ್ಮ ಜಾಗದಲ್ಲಿ ಬಾಡಿಗೆಗೆ ಅಳವಡಿಸಲು ಬಿಟ್ಟರೆ ಆ ಸಂದರ್ಭದಲ್ಲಿ ನಿಮಗೆ NBFC 15 ರಿಂದ 25 ಸಾವಿರ ಪ್ರತಿ ತಿಂಗಳ ಬಾಡಿಗೆಯನ್ನು ಅವರು ನಿಮಗೆ ನೀಡುತ್ತಾರೆ. ಇದನ್ನು ಹೊರತುಪಡಿಸಿ ನೀವು ಪ್ರತ್ಯೇಕವಾಗಿ ಎಟಿಎಂ ಫ್ರಾಂಚೈಸಿ ಅನ್ನು ಪಡೆದುಕೊಳ್ಳಬೇಕು ಎನ್ನುವಂತಹ ಆಸೆ ಇದ್ದರೆ ಆ ಸಂದರ್ಭದಲ್ಲಿ ನಿಮಗೆ ಬಾಡಿಗೆ ಸಿಗೋದಿಲ್ಲ ಬದಲಾಗಿ ಅಲ್ಲಿ ನಡೆಯುವಂತಹ ಟ್ರಾನ್ಸಾಕ್ಷನ್ಗಳ ಮೇಲೆ ಇಂತಿಷ್ಟು ಕಮಿಷನ್ ಎನ್ನುವಂತಹ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ. ಈ ವ್ಯಾಪಾರವೂ ಕೂಡ ನಿಮಗೆ ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ತಂದು ಕೊಡುವಂತದ್ದಾಗಿದ್ದು ಒಂದು ವೇಳೆ ನಿಮ್ಮ ಬಳಿ ಜಾಗ ಇದ್ದರೆ ನೀವು ಇದನ್ನು ಪ್ರಯತ್ನಿಸಬಹುದಾಗಿದೆ.