Karnataka Times
Trending Stories, Viral News, Gossips & Everything in Kannada

Metro: SSLC ಹಾಗೂ PUC ಪಾಸ್ ಆದವರಿಗೆ ಮೆಟ್ರೋದಲ್ಲಿ ಬಂಪರ್ ಕೆಲಸ! ಮುಗಿಬಿದ್ದ ವಿದ್ಯಾರ್ಥಿಗಳು

Advertisement

ಇಂದು ಉದ್ಯೋಗ ಹೊಂದಬೇಕು ಎಲ್ಲರಂತೆ ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂಬ ಕನಸ್ಸು ಪ್ರತಿಯೊಬ್ಬರಲ್ಲೂ ಇದ್ದೆ ಇರುತ್ತದೆ ಆದರೆ ಅದಕ್ಕೆ ಸರಿಯಾದ ಅವಕಾಶ ಒದಗಿಬರಲಾರದು. ಅವಕಾಶ ಸಿಕ್ಕಾಗ ಇದುಬೇಡ ಅದು ಬೇಡ ಎಂದು ಉದ್ಯೋಗ ತೊರೆದು ಬಳಿಕ ಎಲ್ಲಿಯೂ ಉದ್ಯೋಗ ಸಿಗದಂತಾಗುತ್ತದೆ. ಇಂದು ಯಾವುದೆ ಪದವಿ ಪಿಯುಸಿ ಕಲಿತಿರಲಿ ಅಂಕ ಪಟ್ಟಿಯ ಜೊತೆಗೆ ನಮ್ಮ ಕೌಶಲ ಮಾತುಗಾರಿಕೆ ಇಲ್ಲದಿದ್ದರೆ ವ್ಯಕ್ತಿ ಮುಕ್ಕಾಲಂಶ ಸೋತಂತೆ ಎನ್ನಬಹುದು.

ಇಂದು ಉದ್ಯೋಗ ಅರಸುವ ಅನೇಕರಿಗೆ ಉತ್ತಮ ಆಯ್ಕೆ ಯಾವುದು ಎಂಬ ಗೊಂದಲ ಇರುವುದು ಇನ್ನು ಕೆಲವರಿಗೆ ತಾವು ಮಾಡುವ ಕೆಲಸದಲ್ಲಿ ಅಸಮಧಾನ ಇದ್ದು ಯಾವ ಕೆಲಸ ಮಾಡಿದರೂ ಅಂತವರು ಸಮಾಧಾನಿಸಲಾರರು. ಇನ್ನು ಕೆಲ ಯುವ ಜನರು ಸರಿಯಾಗಿ ಶಿಕ್ಷಣ ಸಿಗದೆ ಎಸೆಸೆಲ್ಸಿ (SSLC, PUC) ಪಿಯು ಅಷ್ಟೇ ಮಾಡಿದ್ದು ನಮಗ್ಯಾರು ಕೆಲಸ ನೀಡ್ತಾರೆ ಎಂಬ ಮನೋಭಾವನೆ ಇರುತ್ತದೆ ಆದರೆ ಈಗ ಮನೋಭಾವನೆ ಬಿಟ್ಟು ಕೆಲಸ ಮಾಡ್ತೇವೆ ಅನ್ನೊ ಮನಸ್ಸಿದ್ದವರಿಗೆ ಬೆಂಗಳೂರಿನಲ್ಲಿ ಒಂದು ಉತ್ತಮ ಅವಕಾಶ ತೆರೆದಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ ದಲ್ಲಿ ಉದ್ಯೋಗವಕಾಶ:

ಬೆಂಗಳೂರಿನ ಪ್ರತಿಷ್ಠಿತ ಮೆಟ್ರೋ (Metro) ಸಂಸ್ಥೆ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮೆಟ್ರೋ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿಯನ್ವಯ 96 ಭಾಗದಲ್ಲಿ ಟ್ರೈನ್ ಆಪರೇಟರ್ (Train Opperaters, Controller) ಮತ್ತು ಕಂಟ್ರೋಲರ್ ಹುದ್ದೆ ಖಾಲಿ ಇದ್ದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ ಏನು?

  • 45ವರ್ಷ ಮೀರಿರಬಾರದು. ಮೀಸಲಾತಿ ಅನ್ವಯ ವಯಸ್ಸಿನಲ್ಲಿ ಸಡಿಲಿಕೆ ಕೂಡ ಇದೆ.
  • ಆಯ್ಕೆಯಾದ ಅರ್ಹರಿಗೆ ಮಾಸಿಕ 35 ಸಾವಿರದಿಂದ 82,660ರ ವರೆಗೂ ನೀಡಲಾಗುವುದು.
  • ಬೆಂಗಳೂರಿನಲ್ಲೇ ಪೋಸ್ಟಿಂಗ್ ಮಾಡುವಂತವರಾಗಬೇಕು.
  • ಕನಿಷ್ಟ ವಿದ್ಯಾರ್ಹತೆ ಎಸೆಸೆಲ್ಸಿ/ಪಿಯುಸಿ/ಪದವಿ ಆಗಿರಬೇಕು.

ಯಾವಾಗ ಕೊನೆ ದಿನಾಂಕ?

ಉತ್ತಮ ವೇತನ ಸೌಲಭ್ಯ ಇರುವ ಈ ಒಂದು ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವವರಿಗೆ ಆಗಸ್ಟ್ ತಿಂಗಳೇ ಕೊನೆಯ ಗಡುವಾಗಿದೆ‌. ಆಗಸ್ಟ್ 31ರ ಒಳಗೆ ಈ ಒಂದು ಅರ್ಜಿ ಸಲ್ಲಿಸಿದವರಿಗೆ ಬಳಿಕ ನೇರ ಸಂದರ್ಶನ ಮಾಡಿ ಅಭ್ಯರ್ಥಿ ನೇಮಕ ಮಾಡಲಾಗುವುದು. ಒಟ್ಟಾರೆಯಾಗಿ ಈ ಒಂದು ಸುದ್ದಿಯೂ ಯುವಕ-ಯುವತಿಯರಿಗೆ ಮತ್ತುನಿರುದ್ಯೋಗಿಗಳಿಗೆ ಬಹಳ ಖುಷಿ ತರುವ ವಿಚಾರ ಎನ್ನಬಹುದು.

Leave A Reply

Your email address will not be published.