Kanya Sahyog Yojana: ಹೆಣ್ಣುಮಕ್ಕಳಿರುವ ಎಲ್ಲಾ ಮನೆಗಳಿಗೂ ಕೇಂದ್ರದ ಹೊಸ ಆಫರ್! ಮಹಿಳೆಯರಿಗೆ ಮತ್ತೊಂದು ಭಾಗ್ಯ
ಬಡ ಕುಟುಂಬದಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಗು ಜನನ ವಾಗಿದೆ ಎಂದರೆ ಸಾಕಷ್ಟು ಜವಾಬ್ದಾರಿಗಳ ಪರ್ವತವೇ ಪೋಷಕರ ಮೇಲೆ ಬೀಳುತ್ತದೆ ಎಂಬುದನ್ನು ಹಿರಿಯರು ಹೇಳುತ್ತಾರೆ. ಹೆಣ್ಣು ಮಕ್ಕಳ ಶಿಕ್ಷಣದಿಂದ ಪ್ರಾರಂಭವಾಗಿ ಆಕೆಯ ಮದುವೆವರೆಗೂ ಕೂಡ ಬಡ ಕುಟುಂಬದವರು ಹಣವನ್ನು ಕೂಡಿಸಲು ಪ್ರಾರಂಭಿಸಬೇಕು. ಆದರೆ ಕೇಂದ್ರ ಸರ್ಕಾರ ಈಗ ಜಾರಿಗೆ ತಂದಿರುವಂತಹ ಒಂದು ಯೋಜನೆಯ ಮೂಲಕ ಒಂದು ವೇಳೆ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರಿಗೆ 50 ಸಾವಿರ ರೂಪಾಯಿಗಳವರೆಗು ಕೂಡ ಕನ್ಯಾ ಸಹಯೋಗ್ ಯೋಜನೆ(Kanya Sahyog Yojana) ಅಡಿಯಲ್ಲಿ ಹಣ ಸಿಗುತ್ತದೆ. ಹಾಗಿದ್ರೆ ಬನ್ನಿ ಈ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳೋಣ.
ಆರ್ಥಿಕ ರೂಪದಲ್ಲಿ ಹಿಂದುಳಿದ ವರ್ಗದ ಅಂದರೆ ಬಡ ಜನರಿಗೆ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ ಅವರಿಗೆ 31,000 ಇಂದ ಪ್ರಾರಂಭವಾಗಿ 51,000 ವರೆಗೂ ಕೂಡ ಕನ್ಯಾ ಸಹಯೋಗ ಯೋಜನೆ ಅಡಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದೆ ತಮ್ಮ ಹೆಣ್ಣುಮಕ್ಕಳ ಮದುವೆಯನ್ನು ಮಾಡಲು ಈ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಎಂದು ಹೇಳಬಹುದಾಗಿದೆ. ಈ ಯೋಜನೆ ಜಾರಿಗೆ ತಂದಿರುವುದು ರಾಜಸ್ಥಾನ ರಾಜ್ಯ ಸರ್ಕಾರದಲ್ಲಿ. ಇದಕ್ಕಾಗಿ ಹೆಣ್ಣಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಆಗಿರಬೇಕು.
ಒಂದು ವೇಳೆ ಆಕೆ ಬಡತನದ ರೇಖೆಯಲ್ಲಿರುವ ಕುಟುಂಬದಲ್ಲಿ ಜನಿಸಿದರೆ ಆಕೆಯ ಮದುವೆಗೆ ಯಾವುದೇ ಹಣಕಾಸಿನ ತೊಡಕಾಗಬಾರದು ಎನ್ನುವ ಕಾರಣಕ್ಕಾಗಿ ರಾಜಸ್ಥಾನ ರಾಜ್ಯ ಸರ್ಕಾರ ಈ ರೀತಿಯ ಕೆಲಸಕ್ಕೆ ಮುಂದಾಗಿದೆ. ಯಾವುದೇ ಕುಟುಂಬದ ಆದಾಯ ವಾರ್ಷಿಕವಾಗಿ 50,000 ಗಿಂತ ಕಡಿಮೆ ಇದ್ದರೆ ಹಾಗೂ ಬಿಪಿಎಲ್(BPL Ration Card) ಇಲ್ಲವೇ ಹಂಚೋದಯ ಕಾರ್ಡಿನ ಅಡಿಯಲ್ಲಿ ಬರುವಂತಹ ಬಡತನದ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳ ಮದುವೆ ಗಾಗಿ ಈ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ.
ವಿಧವೆಯರು ಮತ್ತೆ ಮದುವೆಯಾಗುವ ಪ್ರಯತ್ನವನ್ನು ಮಾಡುವವರಿಗೆ ಅಥವಾ ಯಾವುದೇ ಹೆಣ್ಣು ಮಕ್ಕಳ ತಂದೆ ತಾಯಿ ಇಲ್ಲದೆ ಹೋದಲ್ಲಿ ಕೂಡ ಅವರು ಕೂಡ ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಇದರ ಅರ್ಹತೆ ಹಾಗೂ ನಿಯಮಗಳ ಬಗ್ಗೆ ನೋಡುವುದಾದರೆ ಹೆಣ್ಣು 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಹಾಗೂ ಹತ್ತನೇ ತರಗತಿ ಪಾಸ್ ಆಗಿದ್ದರೆ 30,000 ಹಾಗೂ 12ನೇ ತರಗತಿ ಪಾಸ್ ಆಗಿದ್ರೆ 41,000 ಹಾಗೂ ಸಾಧುಕೋತ್ತರ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಹೊಂದಿದ್ದರೆ 50,000 ವರೆಗೂ ಕೂಡ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಇದಕ್ಕಾಗಿ ಬೇಕಾಗಿರುವಂತಹ ಅಗತ್ಯ ದಾಖಲೆಗಳು ಹುಡುಗಿಯ ರೇಷನ್ ಕಾರ್ಡ್(Ration Card) ಬ್ಯಾಂಕಿನ ಖಾತೆಯ ವಿವರ, ಆದಾಯ ಪ್ರಮಾಣ ಪತ್ರ, ಅಂತ್ಯೋದಯ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಅದರ ಕ್ರಮಾಂಕದ ಸಂಖ್ಯೆಯನ್ನು ನೀಡಬೇಕು. ವಿವಾಹ ಆದಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದರೆ ವಿವಾಹ ಪ್ರಮಾಣ ಪತ್ರ ಕೊಡಬೇಕು. ಇನ್ನು ವಿದ್ಯಾರ್ಹತೆ ಯಾವ ರೀತಿಯಲ್ಲಿದೆ ಅನ್ನೋದನ್ನು ಕೂಡ ಅದರ ಸರ್ಟಿಫಿಕೇಟ್ ಅನ್ನು ಸರಿಯಾಗಿ ಸಲ್ಲಿಸಬೇಕು. ಈ ಫಾರ್ಂಗೆ ರೂ.40 ನೀವು ಶುಲ್ಕ ರೂಪದಲ್ಲಿ ಭರಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ನಂತರ ನೀವು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಫಲಿತಾಂಶವನ್ನು ಪಡೆಯಲಿದ್ದೀರಿ ಹಾಗೂ ಆರು ತಿಂಗಳವರೆಗೂ ಕೂಡ ನೀವು ಅರ್ಜಿ ಸಲ್ಲಿಸುವಂತಹ ಅರ್ಹತೆಯನ್ನು ಹೊಂದಿರುತ್ತೀರಿ. ಹೆಚ್ಚಿನ ಮಾಹಿತಿಗಳನ್ನು ನೀವು ಯೋಜನೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.