LIC Scheme: LIC ಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಿಗುತ್ತೆ ತಿಂಗಳಿಗೆ 12000 ರೂ! ಮುಗಿಬಿದ್ದ ಜನ

Advertisement
ಯಾರಿಗೆಲ್ಲ ಮುಂದಿನ ಭವಿಷ್ಯದ ಚಿಂತೆ ಇರುತ್ತದೆಯೋ ಅವರು ಖಂಡಿತವಾಗಿ ಎಲ್ಐಸಿ(LIC) ನಂತಹ ಯೋಜನೆಗಳಲ್ಲಿ ದೀರ್ಘಕಾಲಿಕ ಹೂಡಿಕೆಯನ್ನು ಖಂಡಿತವಾಗಿ ಮಾಡಿಯೇ ಮಾಡುತ್ತಾರೆ. ಅಂಥವರಿಗಾಗಿ ಇವತ್ತಿನ ಈ ಆರ್ಟಿಕಲ್ ನಲ್ಲಿ ಒಂದು ವಿಶೇಷವಾದ ಎಲ್ಐಸಿ ಯೋಜನೆಯನ್ನು ನಿಮಗೆ ಪರಿಚಯಿಸಲು ಹೊರಟಿದ್ದು ಇದರಲ್ಲಿ ಒಂದು ಬಾರಿ ಹೂಡಿಕೆ ಮಾಡಿದರೆ ಸಾಕು ನೀವು ಜೀವನ ಪರ್ಯಂತ 12,000 ರೂಪಾಯಿ ಗಳನ್ನು ಪಡೆಯುತ್ತಲೇ ಇರಬಹುದು ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ನಾವ್ ಮಾತಾಡ್ತಿರೋದು ಸರಲ್ ಪೆನ್ಷನ್ ಯೋಜನೆಯ(Saral Pension Scheme) ಬಗ್ಗೆ. ಎಲಸಿಯ ಪ್ರತಿಯೊಂದು ಯೋಜನೆಗಳು ಕೂಡ ಸುರಕ್ಷಿತ ಹಾಗೂ ಲಾಭದಾಯಕವಾಗಿರುತ್ತದೆ ಎನ್ನುವಂತಹ ನಂಬಿಕೆ ಕಳೆದ ಸಾಕಷ್ಟು ವರ್ಷಗಳಿಂದ ಕೂಡ ಇದೆ. ತರಲ್ ಪೆನ್ಷನ್ ಯೋಜನೆ ಅಡಿಯಲ್ಲಿ ನಿಮಗೆ ಸಿಂಗಲ್ ಯೋಜನೆ ಹಾಗೂ ಜಾಯಿಂಟ್ ಯೋಜನೆ ಎರಡು ಕೂಡ ಸಿಗುತ್ತದೆ. ಸಿಂಗಲ್ ಯೋಜನೆಯಲ್ಲಿ ಅವರು ಯಾರ ಹೆಸರನ್ನು ನಾಮಿನಿಯ ರೂಪದಲ್ಲಿ ಇಟ್ಟಿರುತ್ತಾರೋ ಅವರಿಗೆ ಇವರ ಮರಣದ ನಂತರ ಸಿಗುತ್ತದೆ. ಜಾಯಿಂಟ್ ಅಕೌಂಟ್ ನಲ್ಲಿ ಖಂಡಿತವಾಗಿ ಗಂಡ ಅಥವಾ ಹೆಂಡತಿಯಲ್ಲಿ ಯಾರೊಬ್ಬರೂ ಮರಣ ಹೊಂದಿದರು ಮತ್ತೊಬ್ಬರಿಗೆ ಸಿಗುತ್ತದೆ ಇಲ್ಲವೇ ಇವರಿಬ್ಬರೂ ಯಾರ ಹೆಸರಿಗೆ ನಾಮಿನಿಯನ್ನು ಮಾಡಿದ್ದಾರೋ ಅವರಿಗೆ ಸಿಗುತ್ತದೆ.
ಇತ್ತೀಚಿನ ದಿನಗಳಲ್ಲಿ ದೀರ್ಘಕಾಲಿಕ ಹೂಡಿಕೆಗಾಗಿ ಸರಲ್ ಪೆನ್ಷನ್ ಯೋಜನೆ ನಿಜಕ್ಕೂ ಕೂಡ ಸೂಕ್ತವಾಗಿದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು ಮಾರುಕಟ್ಟೆಯಲ್ಲಿ ಸುರಕ್ಷತೆ ಹಾಗೂ ಇನ್ವೆಸ್ಟ್ಮೆಂಟ್ ಕುರಿತಂತೆ ಈ ಯೋಜನೆಯನ್ನು ಹಿಂದೆ ಹಾಕುವಂತಹ ಮತ್ತೊಂದು ಯೋಜನೆ ಇಲ್ಲ ಎಂದು ಹೇಳಬಹುದಾಗಿದೆ. ಒಂದು ಬಾರಿ ಪ್ರೀಮಿಯಂ ಕಟ್ಟಿದ್ರೆ ಸಾಕು ಜೀವನಪೂರ್ತಿ 12,000 ರೂಪಾಯಿ ಗಳ ಪೆನ್ಷನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ LIC ಅಂದಮೇಲೆ ನಿಮ್ಮ ಹಾಗೂ ನಿಮ್ಮ ಮನೆಯವರ ಸಂಪೂರ್ಣ ಜವಾಬ್ದಾರಿಯನ್ನು ಕೂಡ ಈ ಆರ್ಥಿಕ ಮತದ ಮೂಲಕ ಕವರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಬಹುದಾಗಿದೆ.
LIC ಯ ಈ ಯೋಜನೆ ಅಡಿಯಲ್ಲಿ ನೀವು ಆನ್ಲೈನ್ ಅರ್ಜಿ ಹಾಕಲು ಎಲ್ಐಸಿ ಯಾ ಅಧಿಕೃತ ವೆಬ್ಸೈಟ್ಗೆ ಮೊದಲು ನೀವು ಹೋಗಬೇಕು. ಅಲ್ಲಿ ಕೇಳಲಾಗುವಂತಹ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸ ಬೇಕಾಗುತ್ತದೆ. ಈ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ ಹೋಗಬೇಕಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದ ನೀವು ಎಲ್ಐಸಿ ಏಜೆಂಟರನ್ನು(LIC Agent) ನಿಮ್ಮ ಮನೆಗೆ ಕರೆಸಿಕೊಂಡು ಕೂಡ ಈ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದಾಗಿದೆ. ಇಲ್ಲಿಯೇ ನಿಮಗೆ ಒಮ್ಮೆ ಹಣವನ್ನು ಕಟ್ಟಿದ ನಂತರ ಜೀವನಪೂರ್ತಿ ಯಾವ ವಯಸ್ಸಿನಿಂದ ನಿಮಗೆ ಅಜೀವನ ಪರ್ಯಂತ ಪ್ರತಿ ತಿಂಗಳು 12,000 ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಅವರೇ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ನೀಡುತ್ತಾರೆ.