Karnataka Times
Trending Stories, Viral News, Gossips & Everything in Kannada

Railway Group D: ರೈಲ್ವೆ ನಲ್ಲಿ Group D ಕೆಲಸಕ್ಕೆ ಎಷ್ಟು ಸಂಬಳ ಸಿಗುತ್ತೆ ಹಾಗೂ ಕೆಲಸವನ್ನು ಪಡೆಯುವುದು ಹೇಗೆ?

Advertisement

ಪ್ರತಿಯೊಬ್ಬ ವ್ಯಕ್ತಿ ಕೂಡ ಸರ್ಕಾರಿ ಕೆಲಸವನ್ನು (Government Job) ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಯಾಕೆಂದರೆ ಸರ್ಕಾರಿ ಕೆಲಸಗಳಲ್ಲಿ ಸಿಗುವಂತಹ ಸಂಬಳ ಹಾಗೂ ಕೆಲಸದ ಭದ್ರತೆ ನಿಜಕ್ಕೂ ಕೂಡ ಪ್ರೈವೇಟ್ ಕೆಲಸಗಳಿಗಿಂತ ಹೆಚ್ಚಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ರೈಲ್ವೆ ಇಲಾಖೆಯಲ್ಲಿ ಸಿಗುವಂತಹ ಕೆಲಸ ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗುತ್ತದೆ. ರೈಲ್ವೆ ಇಲಾಖೆ (Railway Department) ನಲ್ಲಿ ಕೂಡ ಬೇರೆ ಬೇರೆ ಪದವಿಯ ಕೆಲಸಗಳು ಕೂಡ ಇರುತ್ತವೆ. ಬನ್ನಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ರೈಲ್ವೆ ಇಲಾಖೆಯ D ಗ್ರೂಪ್ನಲ್ಲಿ ಕೆಲಸವನ್ನು ಪಡೆದುಕೊಳ್ಳುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಕೆಲಸವನ್ನು ಪಡೆದುಕೊಳ್ಳುವ ಬಗೆ ಹೇಗೆ ಹಾಗೂ ಕೆಲಸ ಸಿಕ್ಕ ನಂತರ ಸಂಬಳ ಹೇಗೆ ಪ್ರಮೋಷನ್ ಹೇಗೆ ಅನ್ನುವಂತಹ ಗೊಂದಲಗಳು ನಿಮ್ಮಲ್ಲಿ ಇದ್ದರೆ ಖಂಡಿತವಾಗಿ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಈ ಆರ್ಟಿಕಲ್ ಮೂಲಕ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. RRB GROUP D ನಲ್ಲಿ ನೀವು ಕೆಲಸವನ್ನು ಪಡೆದುಕೊಳ್ಳಬೇಕು ಎಂದರೆ ಮೊದಲಿಗೆ ನೀವು ಪರೀಕ್ಷೆಯನ್ನು ನೀಡಬೇಕಾಗುತ್ತದೆ. ಇಲ್ಲಿ ಸೆಲೆಕ್ಟ್ ಆದ ನಂತರ ನಿಮಗೆ ಸಂಬಳವನ್ನು ಮೆಟ್ರಿಕ್ಸ್ ಲೆವೆಲ್ 1 ಪ್ರಕಾರ ಏಳನೇ ವೇತನ ಆಯೋಗದ ಅನುಸಾರ ನೀಡಲಾಗುತ್ತದೆ.

ಇದು ಕೇಂದ್ರ ಸರ್ಕಾರದ ಕೆಲಸ ಆಗಿರುತ್ತದೆ ಎಂಬುದನ್ನು ಕೂಡ ನೀವು ಈ ಮೂಲಕ ಅರ್ಥಮಾಡಿಕೊಳ್ಳಬೇಕಾಗಿರುತ್ತದೆ. ಈ ಕೆಲಸವನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿ ಬೇಸಿಕ್ 18000 ಪ್ರತಿ ತಿಂಗಳ ಸಂಬಳವನ್ನು ಪಡೆದುಕೊಳ್ಳುತ್ತಾರೆ. ಇದರ ಜೊತೆಗೆ ರೈಲ್ವೆ ಹಾಗೂ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ನೀಡುವಂತಹ ಸಾಕಷ್ಟು ಉಪಯೋಗಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಇದೆಲ್ಲ ಸೇರಿ Railway Group D ಯ ನೌಕರಿ ಮಾಡುವಂತಹ ವ್ಯಕ್ತಿ ಆರಂಭದ ತಿಂಗಳಿನಿಂದಲೇ 22500 ಇಂದ ಪ್ರಾರಂಭಿಸಿ 25380 ರೂಪಾಯಿಗಳವರೆಗು ಕೂಡ ಇರುತ್ತದೆ.

7ನೇ ವೇತನ ಆಯೋಗದ ಪ್ರಕಾರ 5,200 – 20200 ಸ್ಯಾಲರಿ ಸ್ಕೇಲ್ ನಲ್ಲಿ 18 ಸಾವಿರ ರೂಪಾಯಿ ಬೇಸಿಕ್ ಸಂಬಳವನ್ನು ನೀಡಲಾಗುತ್ತದೆ. ಇದಾದ ನಂತರ ಎಂಟು ಪ್ರತಿಶತದಿಂದ 24 ಪ್ರತಿಶತ HRA DA 3060 ರೂಪಾಯಿ 1800 ರೂಪಾಯಿ Grade Pay ಪ್ರಯಾಣ ಬತ್ತಿಯನ್ನು ನೀವು ಚಲಿಸುವಂತಹ ದೂರದ ಆಧಾರದ ಮೇಲೆ ನೀಡಲಾಗುತ್ತದೆ. ಇವರ ಜೊತೆಗೆ ದಿನನಿತ್ಯದ ಖರ್ಚು ಮೆಡಿಕಲ್ ಕಚ್ಚು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕೂಡ ಈ ಸಂದರ್ಭದಲ್ಲಿ ಆಯ್ಕೆ ಆಗುವಂತಹ ಅಭ್ಯರ್ಥಿಗೆ ನೀಡಲಾಗುತ್ತದೆ.

RRB GROUP D ವಿಭಾಗದಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗೆ ಪ್ರಮೋಷನ್ ವಿಚಾರದಲ್ಲಿ ಮಾತನಾಡುವುದಾದರೆ ಮೊದಲಿಗೆ ಲಿಖಿತ ಪರೀಕ್ಷೆಯನ್ನು ಬರೆಯಬೇಕು ಹಾಗೂ ಮೂರು ವರ್ಷಗಳ ಸೇವೆಯ ನಂತರ ಮೋಷನ್ ಸಿಗುತ್ತದೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ನೀವು 85 ಅಂಕಗಳನ್ನು ಪಡೆದಿರಬೇಕು. ಇದರಲ್ಲಿ ಯಾವುದೇ ಸಂದರ್ಶನ ಇರುವುದಿಲ್ಲ ಮೆರಿಟ್ ಆಧಾರದ ಮೇಲೆ ನಿಮ್ಮ ಅಂಕಗಳನ್ನು ನೋಡಿ ನಿಮ್ಮ ಪ್ರಮೋಷನ್ ಅನ್ನು ನಿರ್ಧರಿಸಲಾಗುತ್ತದೆ.

Leave A Reply

Your email address will not be published.