Karnataka Times
Trending Stories, Viral News, Gossips & Everything in Kannada

Costliest Tree: ಈ ಒಂದು ಮರದ ಭದ್ರತೆಗೆ ಸರ್ಕಾರ 64 ಲಕ್ಷ ಖರ್ಚು ಮಾಡಿದೆ, ಅದ್ಯಾವ ಮರ ಅದರ ವಿಶೇಷವೇನು ಗೊತ್ತಾ?

ಭಾರತದಲ್ಲಿ ಇರುವ ಈ ಅತ್ಯಂತ ಶ್ರೀಮಂತವಾದ ಮರದ ಬಗ್ಗೆ ನಿಮಗೆ ಗೊತ್ತಾ? ಈ ಒಂದು ಮರದ ರಕ್ಷಣೆಗಾಗಿ ಸರ್ಕಾರ 64 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ. ಅದೇ ಮಧ್ಯಪ್ರದೇಶದ ಸಾಂಚಿಯಲ್ಲಿ ಇರುವ ಬೋಧಿವೃಕ್ಷ.

Advertisement

ಈ ಮರಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಇದೆ. ಇತಿಹಾಸದ ಪ್ರಕಾರ 2500 ವರ್ಷಗಳಷ್ಟು ಹಳೆಯದಾದ ಮರ ಇದು. ಈ ಮರದ ಕಾವಲಿಗೆ 24 ಗಂಟೆಗಳ ಕಾಲ ಪೊಲೀಸ್ ಪಡೆ ನೇಮಕ ಮಾಡಲಾಗಿದೆ. ಇತ್ತೀಚಿಗೆ ಈ ಮರಕ್ಕೆ ಕೀಟಗಳ ಕಾಟ ಹೆಚ್ಚಾಗಿದೆಯಂತೆ. ಹಾಗಾಗಿ ಮರವನ್ನ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ.

Advertisement

ಬೋಧಿವೃಕ್ಷದ ಹಿಂದಿರುವ ಇತಿಹಾಸ:

Advertisement

ಈ ವೃಕ್ಷದ ಇತಿಹಾಸ 2500 ವರ್ಷಗಳಷ್ಟು ಹಿರಿಯದ್ದು. ಬುದ್ಧನಿಗೆ ಬೋಧಗಯಾದಲ್ಲಿ ಆಲದ ಮರದ ಕೆಳಗೆ ಜ್ಞಾನೋದಯವಾಯಿತು ಎಂದು ಹೇಳಲಾಗಿದೆ. ಇದರ ಬಳಿಕ ಹಿಂದೂ ಹಾಗೂ ಭೌದ್ಧ ಧರ್ಮಗಳಲ್ಲಿ ಆಲದ ಮರದ ಮಹತ್ವವು ಕೂಡ ಹೆಚ್ಚಾಯಿತು. ಭೌದ್ದ ಧರ್ಮದ ಅನುಯಾಯಿಗಳು ಆಲದ ಮರವನ್ನು ಪೂಜಿಸಲು ಆರಂಭಿಸಿದರು. ಭೌದ್ದ ಸ್ಥಳಗಳಲ್ಲಿ ಹೆಚ್ಚಾಗಿ ಈ ಮರವನ್ನ ನೀಡಲು ಶುರು ಮಾಡಿದರು. ಕ್ರಿಸ್ತಶಕ ಪೂರ್ವ 269 ಸುಮಾರರ ಹೊತ್ತಿಗೆ ಅಶೋಕನು ಭೌದ್ಧ ಧರ್ಮವನ್ನು ಸ್ವೀಕರಿಸಿದ ಬಳಿಕ ಸಾಂಕಿಯಲ್ಲಿ ಒಂದು ಸ್ತೂಪವನ್ನು ನಿರ್ಮಾಣ ಮಾಡಲಾಯಿತು. ಅಲ್ಲಿಂದ ಪ್ರಪಂಚಾದ್ಯಂತ ಭೌದ್ಧ ಧರ್ಮದ ಬಗ್ಗೆ ಪ್ರಚಾರಗಳು ಹೆಚ್ಚಾದವು.

Advertisement

ನಂತರ ಅಶೋಕ, ಶ್ರೀಲಂಕಾಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸುತ್ತಾನೆ ಅವರ ಕೈಯಲ್ಲಿ ಸಾಂಕಿಯಲ್ಲಿ ನೆಟ್ಟಿದ್ದ ಆಲದ ಮರದ ಕೊಂಬೆಯೊಂದನ್ನು ಕೂಡ ಕಳುಹಿಸುತ್ತಾನೆ. ಅಶೋಕ ಚಕ್ರವರ್ತಿ ಕಳುಹಿಸಿದ ಈ ಕೊಂಬೆಯನ್ನು ಶ್ರೀಲಂಕಾದ ರಾಜ ದೇವನಾಂಪಿ ತಿಸ್ಸಾ, ತನ್ನ ರಾಜಧಾನಿ ಔರಂಧಪುರದಲ್ಲಿ ನೆಡುತ್ತಾನೆ.

ಶ್ರೀಲಂಕಾದಿಂದ ಮತ್ತೆ ಭಾರತಕ್ಕೆ ಬೋಧಿವೃಕ್ಷ:

ಸುಮಾರು 2012ರ ಹೊತ್ತಿಗೆ ಶ್ರೀಲಂಕಾದ ಅಧ್ಯಕ್ಷ ಮಹೇಂದ್ರ ರಾಜ ಪಕ್ಸೆ ಭಾರತಕ್ಕೆ ಭೇಟಿ ನೀಡಿದರು ಆಗ ಐತಿಹಾಸಿಕ ಆಲದ ಮರದ ಕೊಂಬೆಯೊಂದನ್ನು ಮತ್ತೆ ಭಾರತಕ್ಕೆ ತರುತ್ತಾರೆ. ಇದು ತಮಗೆ ಅಶೋಕನಿಂದ ಉಡುಗೊರೆಯಾಗಿ ಸಿಕ್ಕ ಬೋಧಿವೃಕ್ಷದ ವಂಶ ಮರ ಎಂದು ಹೇಳಿದ್ದರು. ಮಹಿಂದ್ರ ನೀಡಿದ ಈ ಕೊಂಬೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿಯೇ ಸಲಾಮತ್ಪುರದಲ್ಲಿ ಈ ಮರವನ್ನು ನೀಡುತ್ತಾರೆ.

ಭಿಗಿ ಭದ್ರತೆಯಲ್ಲಿ ಮರಕ್ಕೆ ರಕ್ಷಣೆ:

ಈ ಬೋಧಿವೃಕ್ಷದ ವಂಶ ಮರವನ್ನು ಮತ್ತೆ ನೆಟ್ಟ ನಂತರ ಅದಕ್ಕೆ ಬೀದಿ ಭದ್ರತೆಯ ಜೊತೆಗೆ ಆರೈಕೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸರ್ಕಾರ ಈ ಮರದ ನಿರ್ವಹಣೆ ನೀರು ಮೊದಲಾದ ವೆಚ್ಚಗಳಿಗೆ ಸಂಬಂಧಪಟ್ಟ ಹಾಗೆ 64 ಲಕ್ಷಗಳನ್ನು ಖರ್ಚು ಮಾಡಿದೆ.

ದಿನದ 24 ಗಂಟೆ 4 ಹೋಂ ಗಾರ್ಡ್ ಗಳು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಭೋದಿ ವೃಕ್ಷಕ್ಕೇ ಲೀಫ್ ಕ್ಯಾಟರ್ಪಿಲ್ಲರ್ ಎನ್ನುವ ಕೀಟದ ಸೋಂಕು ತಗಲಿದ್ದು ಎಲೆಗಳು ಒಣಗುತ್ತಿವೆಯಂತೆ. ಅಲ್ಲದೆ ನಿಧಾನವಾಗಿ ಮರದ ಕಾಂಡಕ್ಕೆ ಕ್ರಿಮಿ ಕೀಟಗಳು ದಾಳಿ ನಡೆಸುತ್ತಿವೆ. ಆದರೂ ತೋಟಗಾರಿಕೆ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿರುವ ರಕ್ಷಣಾ ಸಿಬ್ಬಂದಿ ಒಬ್ಬರು ತಿಳಿಸಿದ್ದಾರೆ. ಈಗಾಗಲೇ ಇಷ್ಟೊಂದು ಖರ್ಚು ಮಾಡಿರುವ ಈ ಮರದ ರಕ್ಷಣೆಗೆ ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯ ಇದೆ.

Leave A Reply

Your email address will not be published.